• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಎಎ ವಿರುದ್ಧ ಪ್ರತಿಭಟನೆ ಮಧ್ಯೆಯೇ ಪಾಕ್ ಮಹಿಳೆಗೆ ಭಾರತದ ಪೌರತ್ವ

|

ಅಹಮದಾಬಾದ್, ಡಿಸೆಂಬರ್ 19: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ಅನೇಕ ಕಡೆ ತೀವ್ರ ಪ್ರತಿಭಟನೆಗಳು ನಡೆಯುತ್ತಿದೆ. ಭಾರತದಲ್ಲಿನ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ಈ ಕಾಯ್ದೆ ತಾರತಮ್ಯ ಎಸಗಲಿದೆ ಎಂದು ಆರೋಪಿಸಲಾಗಿದೆ. ಇದರ ನಡುವೆಯೇ ಪಾಕಿಸ್ತಾನದಿಂದ ಬಂದ ಮುಸ್ಲಿಂ ಮಹಿಳೆಯೊಬ್ಬರು ಭಾರತದ ಪೌರತ್ವ ಪಡೆದುಕೊಂಡಿದ್ದಾರೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಹಿಂಸೆ ದುರದೃಷ್ಟಕರ, ಪೌರತ್ವ ಕಾಯ್ದೆ ಭಾರತೀಯರ ಮೇಲೆ ಪರಿಣಾಮ ಇಲ್ಲ: ಮೋದಿ

ಭಾರತದ ಪೌರತ್ವ ನೀಡುವಂತೆ ಹಸೀನಾಬಾನು ಅಬ್ಬಾಸ್ ಅಲಿ ವರ್ಸಾರಿಯಾ ಗುಜರಾತ್‌ನ ದೇವಭೂಮಿ ದ್ವಾರಕಾದ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಜಿಲ್ಲಾಧಿಕಾರಿ ಬುಧವಾರ ಹಸೀನಾಬಾನು ಅವರಿಗೆ ಭಾರತದ ಪೌರತ್ವದ ಪ್ರಮಾಣಪತ್ರ ಹಸ್ತಾಂತರಿಸಿದರು. ಈ ವಿಚಾರವನ್ನು ಬಳಿಕ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಎನ್‌ಆರ್‌ಸಿಗೆ ಅರ್ಹರಲ್ಲದವರೆಲ್ಲರೂ ದೇಶದಿಂದ ಹೊರಕ್ಕೆ: ಅಮಿತ್ ಶಾ

'ಅರ್ಜಿದಾರರಾದ ಹಸೀನಾಬಾನು ಅಬ್ಬಾಸ್ ಅಲಿ ವರ್ಸಾರಿಯಾ ಅವರಿಗೆ ಇಂದು ಭಾರತದ ಪೌರತ್ವವನ್ನು ನೀಡಲಾಯಿತು' ಎಂದು ದೇವಭೂಮಿಯ ಕಲೆಕ್ಟರ್ ಟ್ವೀಟ್ ಮಾಡಿದ್ದಾರೆ.

1999ರಲ್ಲಿ ಮದುವೆಯಾದ ಬಳಿಕ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದ ಹಸೀನಾ ಬಾನು, ಪತಿಯ ಮರಣದ ಬಳಿಕ ಭಾರತಕ್ಕೆ ಮರಳಿದ್ದರು. ಕೆಲವು ವರ್ಷಗಳನ್ನು ಭಾರತದಲ್ಲಿ ಕಳೆದ ಬಳಿಕ ಅವರಿಗೆ ಇಲ್ಲಿನ ಪೌರತ್ವ ನೀಡಲಾಗಿದೆ. ಕಳೆದ ಆರು ವರ್ಷಗಳಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಬಂದ ಸುಮಾರು ನಾಲ್ಕು ಸಾವಿರ ಜನರಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಪೌರತ್ವ ಕಾಯ್ದೆಯನ್ನು ನನ್ನ ಹೆಣದ ಮೇಲೆ ಜಾರಿ ಮಾಡಿ: ಮಮತಾ ಬ್ಯಾನರ್ಜಿ

ಹಸೀನಾ ಬಾನು ಅವರಿಗೆ ಎಲ್ಲರಿಗೂ ಅನ್ವಯವಾಗುವ ಸಾಮಾನ್ಯ ಪ್ರಕ್ರಿಯೆ ಮೂಲಕವೇ ಪೌರತ್ವ ನೀಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನರೇಂದ್ರ ಕುಮಾರ್ ಮೀನಾ ತಿಳಿಸಿದರು.

English summary
Pakistan Muslim woman Hasinaben Abbas Ali was granted Indian Citizenship on Wednesday amidst the protest against CAA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X