ಜನತೆಗೆ ಧನ್ಯವಾದ ಹೇಳಿದ ಮೋದಿ ತಾಯಿ ಹೀರಾಬೆನ್

Recommended Video

      ಜನತೆಗೆ ಧನ್ಯವಾದ ಹೇಳಿದ ಮೋದಿ ತಾಯಿ ಹೀರಾಬೆನ್

      ಅಹಮದಾಬಾದ್, ಮೇ 23: ಬಿಜೆಪಿ ಮತ್ತು ನರೇಂದ್ರ ಮೋದಿ ಅವರಿಗೆ ಭರ್ಜರಿ ಗೆಲುವು ನೀಡಿದ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಧನ್ಯವಾದ ಸಲ್ಲಿಸಿದ್ದಾರೆ.

      ಚುನಾವಣೆ ಫಲಿತಾಂಶದಲ್ಲಿ ಎನ್‌ಡಿಎ ಸರ್ಕಾರ ಮರಳಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗುತ್ತಿದ್ದಂತೆಯೇ ಮೋದಿ ಅವರ ತವರು ಗುಜರಾತ್‌ನಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಮೋದಿ ಅವರ ತಾಯಿ ಹೀರಾ ಬೆನ್ ಅವರ ಮುಖದಲ್ಲಿ ಗೆಲುವಿನ ಖುಷಿ ಮೂಡಿತ್ತು. ಮೋದಿ ಅವರ ಮನೆಯಲ್ಲಿ ಸೇರಿದ್ದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು, ಭಾರಿ ಗೆಲುವಿನ ಸೂಚನೆ ದೊರಕುತ್ತಿದ್ದಂತೆಯೇ ಸಂಭ್ರಮಿಸಿದರು.

      ಮನೆಯಿಂದ ನಗುಮೊಗದೊಂದಿಗೆ ಹೊರಕ್ಕೆ ಬಂದ ಮೋದಿ ಅವರ ತಾಯಿ ಹೀರಾ ಬೆನ್ ಕೈ ಮುಗಿದು ದೇಶದ ಜನತೆಗೆ ಧನ್ಯವಾದ ಸಲ್ಲಿಸಿದರು.

      Lok Sabha Election Results narendra modi mother hiraben thanked nation

      ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಮನೆಗೆ ತೆರಳಿ ಹೀರಾ ಬೆನ್ ಅವರ ಆಶೀರ್ವಾದ ಪಡೆದುಕೊಂಡಿದ್ದರು. ಮಗ ಎರಡನೆಯ ಬಾರಿಗೆ ದೇಶದ ಆಡಳಿತದ ಚುಕ್ಕಾಣಿ ಹಿಡಿಯುತ್ತಿರುವುದು ಸಹಜವಾಗಿಯೇ ಹೀರಾ ಬೆನ್ ಅವರಲ್ಲಿ ಸಂತಸ ಮೂಡಿಸಿದೆ.

      ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿದ್ದ ಹೀರಾಬೆನ್ ಅವರು ಆಟೋರಿಕ್ಷಾದಲ್ಲಿ ಬಂದು ಗಮನ ಸೆಳೆದಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+