Get Updates
Get notified of breaking news, exclusive insights, and must-see stories!

ಭಾರಿ ಮತಗಳ ಅಂತರದಿಂದ ಜಯದತ್ತ ಮುನ್ನಡೆದಿರುವ ಅಮಿತ್ ಶಾ

ಗಾಂಧಿನಗರ, ಮೇ 23: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಗುಜರಾತ್‌ನ ಗಾಂಧಿ ನಗರ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ.

ಗುಜರಾತ್‌ನ ಗಾಂಧಿನಗರ ಕ್ಷೇತ್ರದಿಂದ ಅವರು ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದರು, ಈ ಕ್ಷೇತ್ರವು ಈ ಮುಂಚೆ ಲಾಲ್‌ ಕೃಷ್ಣ ಅಡ್ವಾಣಿ ಅವರಿಗೆ ಸೇರಿದ್ದಾಗಿತ್ತು.

ತಮ್ಮ ಗುರುಗಳಾದ ಎಲ್‌.ಕೆ.ಅಡ್ವಾಣಿ ಅವರ ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಅಮಿತ್ ಶಾ, ಒಟ್ಟು 8,94,624 ಮತಗಳನ್ನು ಗಳಿಸಿದರು. ಅವರ ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್‌ ನ ಜೆ.ಸಿ.ಚಾವ್ಡಾ 3,37,610 ಮತಗಳನ್ನಷ್ಟೆ ಗಳಿಸಲು ಸಾಧ್ಯವಾಯಿತು. ಅಮಿತ್ ಶಾ ಅವರು ಬರೋಬ್ಬರಿ 5,57,014 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

Lok Sabha election results 2019 Ghandinagar constituency updates

ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಸರಿಸುಮಾರ 14 ಲಕ್ಷ ಮತದಾರರಿದ್ದು, ಒಟ್ಟು ಮತಗಳ ಪೈಕಿ 69.7% ಮತಗಳನ್ನು ಅಮಿತ್ ಶಾ ಅವರು ಪಡೆದುಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+