ವಿವಾಹವಾಗಿ ಕೆಲವೇ ಕ್ಷಣಗಳಲ್ಲಿ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇಕೆ?

ಅಹಮದಾಬಾದ್, ಜನವರಿ 31: ವಿವಾಹನವಾಗಿ ಕೆಲವೇ ಕ್ಷಣಗಳಲ್ಲಿ ನವಜೋಡಿಯು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ವಿಚಿತ್ರ ಘಟನೆ ಗುಜರಾತ್‌ನ ಅಹಮದಾಬಾದ್‌ ಜಿಲ್ಲೆಯ ಗೊಂದಲ್‌ನಲ್ಲಿ ನಡೆದಿದೆ.

ಪತಿ ಗೊರಕೆ ಹೊಡೆಯುತ್ತಾನೆ ಎಂದೋ ಅಥವಾ, ಪತ್ನಿ ಮೂರು ಹೊತ್ತು ಮೊಬೈಲ್ ನಲ್ಲೇ ಇರುತ್ತಾಳೆ ಎಂದೋ, ಗಂಡ ಮನೆಗೆ ತಡವಾಗಿ ಬರುತ್ತಾನೆ, ಪತ್ನಿ ಯಾವಾಗಲೂ ಪಾರ್ಟಿಗಳಲ್ಲೇ ಬ್ಯುಸಿ ಇರುತ್ತಾಳೆ ಎಂದೋ ವಿಚ್ಛೇದನಕ್ಕೆ ಅರ್ಜಿ ಹಾಕುವುದನ್ನು ಕೇಳಿದ್ದೇವೆ. ಆದರೆ ಗಂಡ-ಹೆಂಡತಿಗೆ ಮನಸ್ಸಿನ ಬಗ್ಗೆ ಪರಸ್ಪರ ತಿಳಿಯುವ ಮುನ್ನವೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಯಾವುದೇ ಗಂಭೀರಕಾರಣಗಳಿಲ್ಲ, ವಿವಾಹದ ಬಳಿಕ ಊಟದ ವಿಷಯವಾಗಿ ವರ ಹಾಗೂ ವಧುವಿನ ಕಡೆಯವರಿಗೆ ಭಿನ್ನಾಭಿಪ್ರಾಯ ಹುಟ್ಟಿದ್ದು, ವಾಗ್ವಾದಕ್ಕೆ ಕಾರಣವಾಗಿದೆ. ಕೂಡಲೇ ಎರಡು ಕಡೆಯವರು ವಕೀಲರನ್ನು ಕರೆಯಿಸಿ, ನವ ದಂಪತಿಗೆ ವಿಚ್ಛೇದನ ಕೊಡಿಸಿದ್ದಾರೆ.

Just married and just divorced! Couple split within minutes after food fight

ಮದುವೆ ಮನೆಯಲ್ಲಿ ಊಟದ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ತಾರಕಕ್ಕೇರುತ್ತಿದ್ದಂತೆ, ಯಾರೋ ಒಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾರೆ. ಪೊಲೀಸರು ಬಂದ ಬಳಿಕ ಜಗಳವೇನೋ ತಿಳಿಯಾಗಿತ್ತು. ಆದರೆ, ಉಭಯ ಪಕ್ಷದವರಲ್ಲಿ ಅಸಮಾಧಾನದ ಹೊಗೆ ಮಾತ್ರ ಕಡಿಮೆಯಾಗಿರಲಿಲ್ಲ.

ಕೂಡಲೇ ವಕೀಲರನ್ನು ಕರೆಯಿಸಿ ವಿಚ್ಛೆದನ ಪಡೆಯುವ ನಿರ್ಧಾರ ತೆಗೆದುಕೊಂಡರು. ಈ ಕುರಿತು ಪತ್ರಿಕೆಯೊಂದು ವರದಿ ಮಾಡಿತ್ತು. ವಿವಾಹ ಮಂಟಪದಲ್ಲಿ ಏಳೇಳು ಜನ್ಮಗಳಲ್ಲೂ ಜೊತೆಯಾಗಿರುತ್ತೇನೆ ಎಂಬ ವಾಗ್ದಾನ ಮಾಡಿದ್ದ ದಂಪತಿ, ಕೇವಲ ಊಟದ ವಿಷಯಕ್ಕಾಗಿ ನಡೆದ ಗಲಾಟೆಯ ಪರಿಣಾಮ ಕೇವಲ ಅರ್ಧ ಗಂಟೆಯಲ್ಲಿಯೇ ದಾಂಪತ್ಯ ಜೀವನಕ್ಕೆ ಎಳ್ಳುನೀರು ಬಿಟ್ಟುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+