• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಳನುಗ್ಗಲಿದ್ದಾರೆ ಪಾಕಿಸ್ತಾನಿ ಕಮಾಂಡೋಗಳು: ಗುಜರಾತ್‌ನಲ್ಲಿ ಹೈಅಲರ್ಟ್

|

ಅಹಮದಾಬಾದ್, ಆಗಸ್ಟ್ 29: ಪಾಕಿಸ್ತಾನದಿಂದ ತರಬೇತಿ ಪಡೆದಿರುವ ಕಮಾಂಡೋಗಳು ಮತ್ತು ಉಗ್ರರು ಗುಜರಾತ್‌ನ ಕಛ್‌ ಪ್ರದೇಶದ ಮೂಲಕ ಭಾರತದ ಒಳನುಗ್ಗಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆಗಳು ಮಾಹಿತಿ ನೀಡಿವೆ.

ಕಾಶ್ಮೀರ ವಿವಾದ: ರಾಹುಲ್ ಗಾಂಧಿ ಯಡವಟ್ಟಿನಿಂದ ಲಾಭ ಆಗಿದ್ದು ಪಾಕಿಸ್ತಾನಕ್ಕೆ

ಹೀಗಾಗಿ ಗುಜರಾತ್‌ನ ಬಂದರು ತೀರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಪಾಕಿಸ್ತಾನದ ಕಮಾಂಡೋಗಳು ಸಣ್ಣ ದೋಣಿಗಳಲ್ಲಿ ಕಛ್ ಮತ್ತು ಸರ್ ಕ್ರೀಕ್ ಪ್ರದೇಶದ ಬಂದರಿನ ಮೂಲಕ ಭಾರತದ ಪ್ರದೇಶದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿವೆ.

ಖಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದ ಪಾಕಿಸ್ತಾನ

ಗುಜರಾತ್‌ನ ಕರಾವಳಿ ಮತ್ತು ಇತರೆ ಭಾಗಗಳ ಮೇಲೆ ಸಮುದ್ರದಾಳದಿಂದ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಲಾಗಿದೆ. ಈ ನಡುವೆ ಗುಜರಾತ್‌ನ ಹರಮಿ ನಾಲಾ ಪ್ರದೇಶದಲ್ಲಿ ಎರಡು ಪಾಕಿಸ್ತಾನಿ ದೋಣಿಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪತ್ತೆ ಹಚ್ಚಿದೆ. ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಏಕ ಎಂಜಿನ್ ಜೋಡಣೆಯ ಎರಡು ದೋಣಿಗಳು ದೊರೆತಿವೆ. ಆದರೆ, ದೋಣಿ ಮತ್ತು ಪ್ರದೇಶದ ಸುತ್ತಮುತ್ತ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.

ಮುಂದ್ರಾದಲ್ಲಿರುವ ಕಾಂಡ್ಲಾ ಬಂದರು, ಅದಾನಿ ಬಂದರು ಹಾಗೂ ಇತರೆ ಪ್ರಮುಖ ಕಟ್ಟಡಗಳ ಮೇಲೆ 'ನೀರಿನಡಿಯಿಂದ ದಾಳಿ' ನಡೆಸಲು ಕಮಾಂಡೋಗಳು ತರಬೇತಿ ಪಡೆದಿದ್ದಾರೆ. ಹೀಗಾಗಿ ಇಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

English summary
High alert issued in Gujarat after Intelligence reports possibility of Pakistan trained commandos trying to infiltrate in Kutch port.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X