ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಕಾಣೆಯಾಗಿ 20 ದಿನಗಳಾದರೂ ಪತ್ತೆ ಇಲ್ಲ

|
Google Oneindia Kannada News

Recommended Video

Hardik Patel missing since 20 days | Missing | Hardik Patel | Oneindia Kannada

ಅಹಮದಾಬಾದ್, ಫೆಬ್ರವರಿ 14: ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟದ ಕಾಂಗ್ರೆಸ್ ಮುಖಂಡ ಮತ್ತು ಪಾಟಿದಾರ್ ಕೋಟಾ ಆಂದೋನಲದ ಮುಂಚೂಣಿ ನಾಯಕ ಹಾರ್ದಿಕ್ ಪಟೇಲ್ ಕಳೆದ 20 ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿ ಕೊಡಿ ಎಂದು ಪತ್ನಿ ಗೋಳಾಡುತ್ತಿದ್ದಾರೆ.

ಪತಿ ಕಾಣೆಯಾಗಲು ಗುಜರಾತ್ ಆಡಳಿತ ಮಂಡಳಿಯೇ ಕಾರಣ ಎಂದು ಪತ್ನಿ ಕಿಂಜಲ್ ದೂರಿದ್ದಾರೆ. ಕಳೆದ 20 ದಿನಗಳಿಂದ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ವಿಡಿಯೋ ಒಂದನ್ನು ಕಿಂಜಲ್ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು.

ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಕಾಣೆ: ಹೆಂಡತಿ ಅಳಲುಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಕಾಣೆ: ಹೆಂಡತಿ ಅಳಲು

ಗುಜರಾತ್ ಸರ್ಕಾರಕ್ಕೆ ಹಾರ್ದಿಕ್ ಪಟೇಲ್ ಜನರ ಬಳಿ ಹೋಗುವುದು, ಅವರ ಬಳಿ ಮಾತನಾಡುವುದು, ಅವರ ಬಗ್ಗೆ ಧ್ವನಿ ಎತ್ತುವುದನ್ನು ಸಹಿಸಲು ಆಗುತ್ತಿಲ್ಲ. ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಗುಜರಾತ್ ಸರ್ಕಾರವು ಹಾರ್ದಿಕ್ ಅವರನ್ನು ಬಂಧಿಸಲು ಮುಂದಾಗಿತ್ತು ಎಂದು ಆರೋಪಿಸಿದ್ದಾರೆ.

Hardik Patel Missing Since 20 Days

2015ರ ದೇಶದ್ರೋಹ ಪ್ರಕರಣದಲ್ಲಿ 2020ರ ಜನವರಿ 18ರಂದು ಹಾರ್ದಿಕ್ ಪಟೇಲ್ ಅವರನ್ನು ಬಂಧಿಸಲಾಗಿದ್ದು ಆ ನಂತರ ಅವರು ಎಲ್ಲಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಪತ್ನಿ ಕಿಂಜಲ್ ಹೇಳಿದ್ದಾರೆ.

2015ರ ಪಾಟಿದಾರ್ ಕೋಟಾ ಆಂದೋಲನದ ವೇಳೆ ಹಾರ್ದಿಕ್ ಪಟೇಲ್ ದೇಶದ್ರೋಹದ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಜನವರಿ 18ರಂದು ಬಂಧಿಸಲಾಗಿತ್ತು. ಇನ್ನು ಇಲ್ಲಿಯ ನ್ಯಾಯಾಲಯವು ವಿಚಾರಣೆಯ ಸಮಯದಲ್ಲಿ ಹಾಜರಾಗದ ಕಾರಣ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.

ನಾಲ್ಕು ದಿನಗಳ ನಂತರ ಹಾರ್ದಿಕ್ ಪಟೇಲ್ ಗೆ ಜಾಮೀನು ನೀಡಲಾಯಿತು. ಇದಾದ ಬೆನ್ನಲ್ಲೇ ಪಠಾನ್ ಮತ್ತು ಗಾಂಧಿನಗರ ಜಿಲ್ಲೆಗಳಲ್ಲಿ ದಾಖಲಾದ ಇತರ ಎರಡು ಪ್ರಕರಣಗಳ ಸಂಬಂಧ ಮತ್ತೆ ಅವರನ್ನು ಪೊಲೀಸರು ಬಂಧಿಸಿದ್ದರು. ಜನವರಿ 24ರಂದು ಈ ಎರಡು ಪ್ರಕರಣಗಳ ಸಂಬಂಧ ಜಾಮೀನು ಸಿಕ್ಕಿತ್ತು.

ನಂತರ ವಿಚಾರಣೆಗೆ ಹಾಜರಾಗದ ಕಾರಣ ವಿಚಾರಣಾ ನ್ಯಾಯಾಲಯ ಫೆಬ್ರವರಿ 7ರಂದು ಮತ್ತೆ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿತ್ತು. ಇನ್ನು ಪೊಲೀಸರು ಮನೆಯ ಹತ್ತಿರ ಬಂದು ಹಾರ್ದಿಕ್ ಪಟೇಲ್ ಎಲ್ಲಿದ್ದಾನೆ ಎಂದು ನಮ್ಮನ್ನೆ ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

2015ರ ಪಾಟಿದಾರ್ ಕೋಟಾ ಆಂದೋಲನದ ರೂವಾರಿಯಾಗಿದ್ದ ಪಟೇಲ್ ವಿರುದ್ಧ 20 ಪ್ರಕರಣಗಳು ದಾಖಲಾಗಿವೆ.

English summary
Hardik Patel, the Patidar community leader, is missing since the past 20 days, according to his wife Kinjal Patel who also accused the Gujarat administration of targeting her husband.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X