ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್:ಮುಸ್ಲಿಮರಿಗೆ ಥಳಿತ,ಪೊಲೀಸರಿಂದ 'ಮಾನವ ಹಕ್ಕು ಉಲ್ಲಂಘನೆ

|
Google Oneindia Kannada News

ಅಹಮದಾಬಾದ್, ಅಕ್ಟೋಬರ್ 07: ಬಿಜೆಪಿ ಆಡಳಿತವಿರುವ ಭಾರತದ ಗುಜರಾತ್ ರಾಜ್ಯದಲ್ಲಿ ಪೊಲೀಸರು ಮುಸ್ಲಿಂ ಪುರುಷರ ಮೇಲೆ ಸಾರ್ವಜನಿಕವಾಗಿ ಥಳಿಸಿದ್ದಾರೆ. ಇದು ಗಂಭೀರ ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆ ಆಗಿದ್ದಲ್ಲದೇ ಪೊಲೀಸರು ಕಾನೂನಿಗೆ ಅಗೌರವ ತೋರಿದ್ದಾರೆ ಎಂದು ಸರ್ಕಾರೇತರ ಸಂಸ್ಥೆಯಾದ 'ಅಮ್ನೆಸ್ಟಿ ಇಂಟರ್‌ನ್ಯಾಷನಲ್' ದೂರಿದೆ.

ಗುಜರಾತ್‌ನ ಖೇಡಾ ಜಿಲ್ಲೆಯ ಉಧೇಲಾ ಗ್ರಾಮದಲ್ಲಿ ಮಂಗಳವಾರ ನಡೆದ ಪೊಲೀಸರು ಮುಸ್ಲಿಂ ಯುವಕನಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿವಿಲ್ ಡ್ರೆಸ್‌ನಲ್ಲಿದ್ದ ಪೊಲೀಸರು ಮುಸ್ಲಿಂ ಪುರುಷರನ್ನು ಜನಸಂದಣಿಯ ಪ್ರದೇಶಗಳಲ್ಲಿ ಕಂಬಕ್ಕೆ ಕಟ್ಟಿಹಾಕಿ ಪೊಲೀಸರು ಕೋಲಿನಿಂದ ಥಳಿಸಿದ್ದಾರೆ. ಅವರ ಈ ವರ್ತನೆಯನ್ನು ಪ್ರದರ್ಶಿಸುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ಪೊಲೀಸರ ನಡೆಯನ್ನು ಅಮ್ನೆಸ್ಟಿ ಖಂಡಿಸಿದೆ.

ಗುಜರಾತ್‌: ತನ್ನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡ ಸವಾರ- ಕಾರಣ ತಿಳಿಯಿರಿಗುಜರಾತ್‌: ತನ್ನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡ ಸವಾರ- ಕಾರಣ ತಿಳಿಯಿರಿ

ಘಟನೆಯಲ್ಲಿ ಮಾರಣಾಂತಿಕವಲ್ಲದ ಸಾಧನ ಬಳಸಬಹುದಿತ್ತು. ಅಹಿತಕರ ಘಟನೆ ನಡೆಯದಂತೆ ತಡೆಯಲು ಹಲವು ಕ್ರಮಗಳಿದ್ದವು. ಆದರೆ ಅವೆಲ್ಲ ಬಿಟ್ಟು ಪೊಲೀಸರು ಕಾನೂನು ಬದ್ಧತೆ, ಅಗತ್ಯತೆ, ವೃತ್ತಿಪರತೆ, ಹೊಣೆಗಾರಿಕೆಯ ಅಂಶಗಳೆಲ್ಲವನ್ನು ಕಡೆಗಣಿಸಿ, ಕೋಲಿನಿಂದ ಥಳಿಸಿದ್ದಾರೆ. ಗುಜರಾತ್ ಭಾರತದ ಅತ್ಯಂತ ಧ್ರುವೀಕೃತ ರಾಜ್ಯಗಳಲ್ಲಿ ಒಂದು. 2002 ರಲ್ಲಿ ನಡೆದ ಧಾರ್ಮಿಕ ಗಲಭೆಗಳು ಕೆಲವು ಮೂಲಗಳ ಪ್ರಕಾರ 2,000 ಕ್ಕಿಂತ ಹೆಚ್ಚು ಜನರ ಜೀವ ಹಾನಿಗೆ ಕಾರಣವಾಗಿದೆ. ಅದರಲ್ಲಿ ಬಹುತೇಕ ಮುಸ್ಲಿಮರೆ ಜೀವ ತೆತ್ತಿದ್ದಾರೆ.

ಧಾರ್ಮಿಕ ಉದ್ವಿಗ್ನತೆ ಹೆಚ್ಚಾಗಿದೆ

ಧಾರ್ಮಿಕ ಉದ್ವಿಗ್ನತೆ ಹೆಚ್ಚಾಗಿದೆ

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬಂದ 2014ರ ನಂತರ ಭಾರತದಲ್ಲಿ ಧಾರ್ಮಿಕ ಉದ್ವಿಗ್ನತೆ ಹೆಚ್ಚಾಗಿದೆ. ಮುಖ್ಯವಾಗಿ ಬಿಜೆಪಿ ಗುಜರಾತಿನಲ್ಲಿ ಎರಡೂವರೆ ದಶಕದಿಂದಲೂ ಆಡಳಿತ ನಡೆಸುತ್ತಿದೆ. ಹೊಸ ರಾಜ್ಯ ಸರ್ಕಾರವು ಉದಯಿಸಿದರೆ ಈ ವ್ಯಾಪಕ ಹಾಗೂ ಅನಿಯಂತ್ರಿತವಾಗಿ ನೀಡುತ್ತಿರುವ ಈ ರೀತಿಯ ಶಿಕ್ಷೆಗೆ ಕಡಿವಾಣ ಹಾಕಬಹುದು. ಕಾನೂನು ವಿರುದ್ಧ ಕೃತ್ಯ ತಡೆಯಬಹುದಾಗಿದೆ ಎಂದು ಅಮ್ನೆಸ್ಟಿ ಅಭಿಪ್ರಾಯಪಟ್ಟಿದೆ.

ಹಿಂದೂಗಳ ಹಬ್ಬವಾದ ಒಂಬತ್ತು ದಿನದ ನವರಾತ್ರಿ ಸಂದರ್ಭದಲ್ಲಿ ಆಯೋಜಿಸಲಾಗುವ ಸಾಂಪ್ರದಾಯಿಕ ನೃತ್ಯವಾದ ಗಾರ್ಬಾದಲ್ಲಿ ಭಾಗವಹಿಸಿದ್ದರು ಎಂಬ ಕಾರಣಕ್ಕಾಗಿ ಮುಸ್ಲಿಂ ಪುರುಷರ ಮೇಲೆ ಕಲ್ಲು ಎಸೆದಿದ್ದಾರೆ. ಮಸೀದಿಯೊಂದರ ಬಳಿ ನಡೆದ ಹಬ್ಬದ ಕಾರ್ಯಕ್ರಮಕ್ಕೆ ಅಲ್ಲಿನ ಮುಸ್ಲಿಮರು ಆಕ್ಷೇಪಿಸಿದ್ದರು. ಹಿಂದೂ ಮುಸ್ಲಿಂ ಮಧ್ಯೆ ಉದ್ವಿಗ್ನತೆ ಹೆಚ್ಚಾಗಲು ಕಾರಣವಾಯಿತು ಎಂದು ಖೇಡಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಗಾಧಿಯಾ ಅಲ್ ಜಜೀರಾಗೆ ತಿಳಿಸಿದರು.

ಎಮ್ಮೆಗೆ ಡಿಕ್ಕಿ ಹೊಡೆದ ವಂದೇ ಭಾರತ್ ಎಕ್ಸ್‌ಪ್ರೆಸ್; ಮುಂದೇನಾಯ್ತು ಎಮ್ಮೆಯ ಗತಿ, ರೈಲಿನ ಸ್ಥಿತಿ!?ಎಮ್ಮೆಗೆ ಡಿಕ್ಕಿ ಹೊಡೆದ ವಂದೇ ಭಾರತ್ ಎಕ್ಸ್‌ಪ್ರೆಸ್; ಮುಂದೇನಾಯ್ತು ಎಮ್ಮೆಯ ಗತಿ, ರೈಲಿನ ಸ್ಥಿತಿ!?

ಮುಸ್ಲಿಮರಿಂದ ಕಲ್ಲು ತೂರಾಟ

ಮುಸ್ಲಿಮರಿಂದ ಕಲ್ಲು ತೂರಾಟ

ಸೋಮವಾರ ರಾತ್ರಿ ನಡೆದ ಸಮಾರಂಭದ ಸಂದರ್ಭದಲ್ಲಿ ಮುಸ್ಲಿಂ ಪುರುಷರು ಕಲ್ಲು ತೂರಾಟ ನಡೆಸಿದ್ದಾರೆ. ಇರಿಂದಾಗಿ ಕನಿಷ್ಠ ಏಳು ಹಿಂದೂಗಳು ಗಾಯಗೊಂಡರು. ಅದರಲ್ಲಿ ಇಬ್ಬರಿಗೆ ಗಂಭೀರ ಪ್ರಮಾಣದ ಗಾಯಗಳಾಗಿವೆ. ಘಟನೆ ಸಂಬಂಧ ನಾವು 43 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಈಗಾಗಲೇ 18 ಜನರನ್ನು ಬಂಧಿಸಿದ್ದೇವೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಗಾಧಿಯಾ ಹೇಳಿದರು.
ಪೊಲೀಸ್ ಅಧಿಕಾರಿಗಳು ಮುಸ್ಲಿಮರನ್ನು ಹೀಗೆ ಸಾರ್ವಜನಿಕವಾಗಿ ಹೊಡೆಯುವುದು ಕಾನೂನು ಬದ್ಧ ಕ್ರಮವೇ ಎಂದು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಗಾಧಿಯಾ ಅವರು, ದಾಳಿಯ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ ಎಂದರು.

ಅಧಿಕಾರಿಗಳನ್ನೇ ಹೊಣೆಯಾಗಿಸಬೇಕು

ಅಧಿಕಾರಿಗಳನ್ನೇ ಹೊಣೆಯಾಗಿಸಬೇಕು

ರಾಜ್ಯ ಚುನಾವಣೆಗೂ ಮುನ್ನ ಬಿಜೆಪಿ ಪಕ್ಷ ಉದ್ದೇಶಪೂರ್ವಕವಾಗಿ ಧಾರ್ಮಿಕ ಉದ್ವಿಗ್ನತೆ ಸೃಷ್ಟಿಸುತ್ತಿದೆ. ಈ ಘಟನೆಯಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಘಟನೆ ಬಗ್ಗೆ ಸಂಪೂರ್ಣವಾಗಿ ತನಿಖೆಯಾಗಬೇಕು. ಕಾನೂನು ಮೀರಿ ನಡೆದುಕೊಂಡು ಮುಸ್ಲಿಮರ ಮೇಲೆ ಲಾಠಿ ಪ್ರಹಾರ ನಡೆಸಿದ ಪೊಲೀಸರಿಗೆ ಶಿಕ್ಷೆಯಾಗಬೇಕು ಎಂದು ವಿರೋಧ ಪಕ್ಷದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ರಾಜ್ಯ ಶಾಸಕ ಇಮ್ರಾನ್ ಖೇಡವಾಲಾ ಅಲ್ ಜಜೀರಾಗೆ ಆಗ್ರಹಿಸಿದ್ದಾರೆ.

ನವರಾತ್ರಿ:ಮುಸ್ಲಿಮರಿಗೆ ನಿಷೇಧ

ನವರಾತ್ರಿ:ಮುಸ್ಲಿಮರಿಗೆ ನಿಷೇಧ

ಸೆಪ್ಟೆಂಬರ್ ಕೊನೆ ವಾರದಿಂದ ನವರಾತ್ರಿ ಆಚರಣೆ ಪ್ರಾರಂಭವಾಗಿದೆ. ಈ ವೇಳೆ ಮುಸ್ಲಿಮರಿಗೆ ವಿವಿಧ ಸ್ಥಳಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಹಿಂದೂ ಗುಂಪುಗಳು ಮುಸ್ಲಿಮರು ಲವ್ ಜಿಹಾದ್‌ನಲ್ಲಿ ತೊಡಗುತ್ತಾರೆ ಎಂದು ಆರೋಪಿಸಲಾಗಿದೆ. ಇದು ಎಂದಿಗೂ ಸಾಬೀತಾಗದ ಪಿತೂರಿ ಆಗಿದೆ. ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಲು ಮೋಹಿಸುತ್ತಿದ್ದಾರೆ ಎಂದು ಆರೋಪಿಸುತ್ತಲೇ ಇದ್ದಾರೆ.

ಹಿಂದೂ ಗುಂಪುಗಳು ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರವೇಶ ನಿರ್ಬಂಧದ ಜೊತೆಗೆ ನವರಾತ್ರಿ ಕಾರ್ಯಕ್ರಮ ನಡೆಯುತ್ತಿದ್ದ ಪ್ರದೇಶದ ಮೂಲಕ ಹಾದು ಬರುತ್ತಿದ್ದ ಮುಸ್ಲಿಮರ ಮೇಲೂ ಹಲ್ಲೆ ನಡೆಸಲಾಗಿದೆ. ಬಿಜೆಪಿ ಆಳ್ವಿಕೆಯ ಮತ್ತೊಂದು ರಾಜ್ಯವಾದ ಮಧ್ಯ ಪ್ರದೇಶದಲ್ಲಿ ಸಹ ಹಿಂದೂ ಕಾರ್ಯಕ್ರಮಗಳಿಗೆ ಕಲ್ಲು ಎಸೆದ ಆರೋಪದ ಮೇಲೆ ಕನಿಷ್ಠ ಮೂವರು ಮುಸ್ಲಿಮರ ಮನೆಗಳನ್ನು ಅಧಿಕಾರಿಗಳು ಮಂಗಳವಾರ ಕೆಡವಿದ್ದಾರೆ ಎಂದು ಅಮ್ನೆಸ್ಟಿ ತಿಳಿಸಿದೆ.

ದೇಶವನ್ನು ಕಾನೂನಿನಿಂದ ಆಳುತ್ತಿಲ್ಲ

ದೇಶವನ್ನು ಕಾನೂನಿನಿಂದ ಆಳುತ್ತಿಲ್ಲ

ಮುಸ್ಲಿಂ ಸಂಸದ ಅಸಾದುದ್ದೀನ್ ಓವೈಸಿ ಅವರು ಗುಜರಾತ್‌ನಲ್ಲಿನ ಪೊಲೀಸರ ಈ ಲಾಠಿ ಪ್ರಹಾರ ಘಟನೆ ಖಂಡಿಸಿದ್ದಾರೆ. ಇಲ್ಲಿ ಪೊಲೀಸರ ಲಾಠಿ ಪ್ರಹಾರ, ಗುಂಪು ಹಿಂಸಾಚಾರ ಸಾಮಾನ್ಯವಾಗಿದೆ. ಮುಸ್ಲಿಮರ ವಿರುದ್ಧದ ಉದ್ದೇಶಿತ ಹಿಂಸಾಚಾರವನ್ನು ಅವರು ನ್ಯಾಯ ಎಂದು ಪರಿಗಣಿಸಿದಂತಿದೆ ಎಂದು ಅವರು ಟ್ವಿಟ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಗುಜರಾತ್, ಮಧ್ಯಪ್ರದೇಶದಲ್ಲಿ ಈ ರಾಜ್ಯಗಳಲ್ಲಿ ಪೊಲೀಸರು ಲಾಠಿ ಪ್ರಹಾರದಲ್ಲಿ ತೊಡಗಿದ್ದಾರೆ. ಪೊಲೀಸರು ಮುಸ್ಲಿಮರ ಮನೆಗಳನ್ನು ಬುಲ್ಡೋಜರ್‌ನಿಂದ ತೆರವು ಮಾಡುತ್ತಿದ್ದಾರೆ. ಇದು ಸಂಪೂರ್ಣವಾಗಿ ಕಾನೂನು ಬಾಹಿರ ಕೆಲಸವಾಗಿದೆ. ಭಾರತವು ಪ್ರಸ್ತುತದಲ್ಲಿ ಕಾನೂನಿನಿಂದ ಆಳಲ್ಪಡುವ ದೇಶವಾಗಿ ಉಳಿದಿಲ್ಲ. ಇದು ಈಗ ಹಿಂದುತ್ವದ ಸಿದ್ಧಾಂತಕ್ಕೆ ಸಂಬಂಧಿಸಿದ ಬೀದಿ ಪುಂಡರ ಆಡಳಿತಕ್ಕೆ ಒಳಪಟ್ಟ ದೇಶವಾಗಿದೆ. ಹಿಂದುತ್ವಕ್ಕಾಗಿ ಭಾರತೀಯ ರಾಜ್ಯ ಸರ್ಕಾರಗಳ ವ್ಯವಸ್ಥೆಯು ಸೇವೆ ಸಲ್ಲಿಸುತ್ತಿದೆ. ಹೊರತು ಈ ರಾಜ್ಯಗಳಲ್ಲಿ ಮುಸ್ಲಿಮರು ನ್ಯಾಯ ನಿರೀಕ್ಷಿಸುವ ಪರಿಸ್ಥಿತಿ ಇಲ್ಲ ಎಂದು ಅವರು ಹೇಳಿದರು.

English summary
Muslims beaten, human rights violated by the police officers at Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X