• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೋಷಪೂರಿತ ನಾಮಪತ್ರ: ಬಿಜೆಪಿ ಗೆದ್ದಿದ್ದ ದ್ವಾರಕದಲ್ಲಿ ಮತ್ತೆ ಚುನಾವಣೆ

|

ಅಹ್ಮದಾಬಾದ್ (ಗುಜರಾತ್), ಏಪ್ರಿಲ್ 12: ಗುಜರಾತ್ ನಲ್ಲಿ ಬಿಜೆಪಿ ಹಿರಿಯ ಶಾಸಕ ಪಬುಭ ಮಾಣೆಕ್ ಅವರಿಗೆ ಭಾರೀ ಹಿನ್ನಡೆ ಆಗಿದೆ. ದ್ವಾರಕ ವಿಧಾನಸಭಾ ಚುನಾವಣೆಯನ್ನು ರದ್ದುಗೊಳಿಸಿರುವ ಹೈ ಕೋರ್ಟ್, ಉಪ ಚುನಾವಣೆಗೆ ಆದೇಶ ನೀಡಿದೆ. ಕಾಂಗ್ರೆಸ್ ನಾಯಕರಾದ ಮೇರಮನ್ ಭಾಯ್ ಗೊರಿಯಾ ಅವರು ಮಾಣೆಕ್ 2017ರಲ್ಲಿ ದ್ವಾರಕ ಕ್ಷೇತ್ರದಿಂದ ಗೆಲುವು ಸಾಧಿಸಿದ್ದನ್ನು ಪ್ರಶ್ನೆ ಮಾಡಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹೈಕೋರ್ಟ್ ನ ತೀರ್ಪನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲು ನಾಲ್ಕು ವಾರಗಳ ಕಾಲಾವಕಾಶ ಕೋರಿದ್ದ ಮಾಣೆಕ್ ಅವರ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಈ ವಿಧಾನಸಭಾ ಕ್ಷೇತ್ರದ ವಿಜಯಿ ಗೋರಿಯಾ ಎಂದು ಘೋಷಿಸಬೇಕು ಎಂದು ಮಾಡಿದ್ದ ಮನವಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಪರೇಶ್ ತಿರಸ್ಕರಿಸಿದ್ದಾರೆ.

ಚುನಾವಣೆಗೆ ಒಂದು ದಿನ ಇರುವಾಗಲೇ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಆಘಾತ

ದ್ವಾರಕ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಬೇಕು ಎಂದು ಕೋರ್ಟ್ ಸೂಚಿಸಿದೆ. ಈ ಪ್ರಕರಣದ ವಿವರಕ್ಕೆ ಹೋಗುವುದಾದರೆ, 2017ರ್ ಡಿಸೆಂಬರ್ ನಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಮಾಣೆಕ್ ಅವರು ತಮ್ಮ ನಾಮಪತ್ರದಲ್ಲಿ ವಿಧಾನಸಭಾ ಕ್ಷೇತ್ರ ಯಾವುದು ಎಂಬ ಮಾಹಿತಿ ದಾಖಲಿಸಿರಲಿಲ್ಲ. ಆ ಕಾರಣಕ್ಕೆ ನಾಮಪತ್ರ ಅಸಿಂಧು ಎನ್ನಲಾಗಿತ್ತು.

ಇದೇ ಆಕ್ಷೇಪಣೆಯನ್ನು ಅರ್ಜಿದಾರ ಗೋರಿಯಾ ನಾಮಪತ್ರ ಸಲ್ಲಿಕೆ ವೇಳೆಯೇ ಗಮನಕ್ಕೆ ತಂದಿದ್ದರು. ಆದರೆ ಅದನ್ನು ಅಧಿಕಾರಿ ಒಪ್ಪಿರಲಿಲ್ಲ. ದೋಷಪೂರಿತ ನಾಮಪತ್ರವನ್ನೇ ಸ್ವೀಕರಿಸಿದ್ದರು. ಕೂಲಂಕಷವಾದ ವಿಚಾರಣೆ ತಿಂಗಳ ಕಾಲ ನಡೆದ ನಂತರ ಏಪ್ರಿಲ್ ಹನ್ನೆರಡರಂದು ತೀರ್ಪು ಪ್ರಕಟಿಸಿದೆ.

English summary
In a serious blow to senior BJP legislator Pabubha Manek in Gujarat, the High Court has set aside his election from Dwarka Assembly seat and ordered by election for the same. The court acted on an election petition filed by Congress leader Meramanbhai Goria.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X