ಅಪಹರಣ: ಸ್ವಾಮಿ ನಿತ್ಯಾನಂದ ವಿರುದ್ಧ ಎಫ್‌ಐಆರ್, ಶಿಷ್ಯೆಯರ ಬಂಧನ
ಅಹ್ಮದಾಬಾದ್, ನವೆಂಬರ್ 21: ಸ್ವಾಮಿ ನಿತ್ಯಾನಂದ ವಿರುದ್ಧ ಅಪಹರಣ ಮತ್ತು ಅಕ್ರಮ ಬಂಧನದ ದೂರಿನ ಅನ್ವಯ ಗುಜರಾತ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಅಪಹರಣದ ಜೊತೆಗೆ ಆಶ್ರಮವನ್ನು ನಡೆಸಲು ಚಂದಾ ವಸೂಲಿಗೆ ಮಕ್ಕಳನ್ನು ಬಳಸಿಕೊಂಡಿರುವ ಬಗ್ಗೆಯೂ ದೂರು ದಾಖಲಿಸಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾದ್ವಿ ಪ್ರಾಣಪ್ರಿಯಾನಂದ ಮತ್ತು ಪ್ರಿಯತತ್ವ ರಿಧಿ ಕಿರಣ್ ಎಂಬ ಇಬ್ಬರು ನಿತ್ಯಾನಂದ ಶಿಷ್ಯೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗಷ್ಟು ನಾಲ್ಕು ಜನ ಹೆಣ್ಣು ಮಕ್ಕಳನ್ನು ನಿತ್ಯಾನಂದಗೆ ಸೇರಿದ್ದ ಫ್ಲಾಟ್ ಒಂದರಿಂದ ರಕ್ಷಿಸಲಾಗಿತ್ತು. ಅವರ ಹೇಳಿಕೆಯನ್ನೂ ಪಡೆದಿರುವ ಅಹ್ಮದಾಬಾದ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಬಂಧಿಸಲಾಗಿರುವ ಸಾದ್ವಿ ಪ್ರಾಣಪ್ರಿಯಾನಂದ ಮತ್ತು ಪ್ರಿಯತತ್ವ ರಿಧಿ ಕಿರಣ್ ಅವರುಗಳು ಅಹ್ಮದಾಬಾದ್‌ನಲ್ಲಿ 'ಯೋಗಿಣಿ ಸರ್ವಜ್ಞಪೀಠಂ' ಹೆಸರಿನಲ್ಲಿ ಆಶ್ರಮ ನಡೆಸುತ್ತಿದ್ದಾರೆ. ಇದು ನಿತ್ಯಾನಂದ ಅವರಿಗೆ ಸೇರಿದ್ದಾಗಿದೆ.
ಇತ್ತೀಚೆಗಷ್ಟೆ ಗುಜರಾತ್ ಜನಾರ್ದನ ಶರ್ಮಾ ದಂಪತಿ ತಮ್ಮ ನಾಲ್ವರು ಹೆಣ್ಣು ಮಕ್ಕಳನ್ನು ನಿತ್ಯಾನಂದ ಅಕ್ರಮ ಬಂಧನಲದಲ್ಲಿಟ್ಟಿರುವ ಬಗ್ಗೆ ಗುಜರಾತ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಇದೇ ದೂರಿನಲ್ಲಿ ಆಶ್ರಮದ ಇತರ ಅಪ್ರಾಪ್ತ ಬಾಲಕರಿಯರ ರಕ್ಷಣೆ ಕುರಿತು ಮನವಿ ಸಲ್ಲಿಸಲಾಗಿತ್ತು.
ನಂತರ ಪೊಲೀಸರ ಸಹಾಯದೊಂದಿಗೆ ಜನಾರ್ದನ ಶರ್ಮಾ ದಂಪತಿಯ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ರಕ್ಷಿಸಲಾಗಿತ್ತು. ಆದರೆ ಇದೇ ದಂಪತಿಯ ಇಬ್ಬರು ಹಿರಿಯ ಪುತ್ರಿಯರು ಪೋಷಕರೊಂದಿಗೆ ತೆರಳಲು ನಿರಾಕರಿಸಿ ಆಶ್ರಮದಲ್ಲಿಯೇ ಇರುವುದಾಗಿ ಹೇಳಿದ್ದರು.












Click it and Unblock the Notifications