• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗುಜರಾತ್‌ನ ಕಚ್‌ನಲ್ಲಿ ಭೂಕಂಪ: ತೀವ್ರತೆ 4.2 ದಾಖಲು

|

ಕಚ್, ಆಗಸ್ಟ್ 19: ಗುಜರಾತ್‌ನ ಕಚ್‌ನಲ್ಲಿ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 4.2 ಮ್ಯಾಗ್ನಿಟ್ಯೂಟ್ ತೀವ್ರತೆ ದಾಖಲಾಗಿದೆ.

ಸೋಮವಾರ ಮಧ್ಯಾಹ್ನ ಭೂಕಂಪ ಸಂಭವಿಸಿದೆ. ಈಗಾಗಲೇ ಮುಂಗಾರು ತೀವ್ರವಾಗಿರುವ ಹೊತ್ತಿನಲ್ಲೇ ಭೂಕಂಪ ಸಂಭವಿಸಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ. ಗುಜರಾತ್‌ನ ಬಜಾವ್ ನಗರದಲ್ಲಿ ಮಧ್ಯಾಹ್ನ 2.43ರ ವೇಳೆಗೆ ಭೂಕಂಪ ಸಂಭವಿಸಿದೆ.

ಮಹಾರಾಷ್ಟ್ರದ ಕೊಯ್ನಾ ಜಲಾಶಯದ ಬಳಿ ಲಘು ಭೂಕಂಪ

ಗಾಂಧಿನಗರದ ಎಪಿಕ್ ಸೆಂಟರ್ ಬಳಿ ಬಜಾವ್ ನಗರದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪ ಸಂಭವಿಸಿದ ಬಳಿಕ ಜನರೆಲ್ಲರೂ ಮನೆಯಿಂದ ಆಚೆಗೆ ಬಂದಿದ್ದು, ಆತಂಕಕ್ಕೊಳಗಾಗಿದ್ದಾರೆ. ಆಗಸ್ಟ್ 2ರಂದು ಮಹಾರಾಷ್ಟ್ರದ ಕೊಯ್ನಾ ಜಲಾಶಯದ ಬಳಿ ಭೂಕಂಪ ಸಂಭವಿಸಿತ್ತು.

ಇದು 105 ಟಿಎಂಸಿ ಸಾಮರ್ಥ್ಯವಿರುವ ಜಲಾಶಯವಾಗಿದೆ. ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿತ್ತು.. ಕೃಷ್ಣಾ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿತ್ತು.

ಜಲಾಶಯಕ್ಕೆ ಧಕ್ಕೆಯಾದರೆ ಕರ್ನಾಟಕಕ್ಕೂ ಅಪಾಯ ಸಂಭವಿಸುವ ಎಲ್ಲಾ ಸಾಧ್ಯತೆ ಇದೆ. ಸತಾರ ಜಿಲ್ಲೆಯ ಪಾಟಣ ತಾಲೂಕಿನ ಕೊಯ್ನಾ ಡ್ಯಾಂ ಬಳಿ ಭೂಕಂಪ ಸಂಭವಿಸಿತ್ತು.. ಕೊಯ್ನಾ ಜಲಾಶಯದಿಂದ 20 ಕಿ.ಮೀ ದೂರದಲ್ಲಿ ಈ ಭೂಕಂಪ ಸಂಭವಿಸಿದ್ದು, ಜನರು ಆತಂಕಕ್ಕೀಡಾಗಿದ್ದರು.

English summary
Earthquake Hits Kutch On Monday, An earthquake of magnitude 4.2 on the Richter Scale hit Kutch district of Gujarat on Monday .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X