• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈ ರಾಜ್ಯದಲ್ಲಿ ಆಸ್ಪತ್ರೆಗೆ ದಾಖಲಾಗಲು ಕೊರೊನಾ ಪಾಸಿಟಿವ್ ವರದಿ ಬೇಕಿಲ್ಲ

|
Google Oneindia Kannada News

ಅಹಮದಾಬಾದ್, ಮೇ 07: ಆಸ್ಪತ್ರೆಗೆ ದಾಖಲಾಗಲು ರೋಗಿಗಳು ಕೊರೊನಾ ಪಾಸಿಟಿವ್ ವರದಿ ನೀಡಬೇಕಿಲ್ಲ ಎಂದು ಗುಜರಾತ್ ಸರ್ಕಾರ ಹೇಳಿದೆ.

ಈ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಎಲ್ಲಾ ಆಸ್ಪತ್ರೆಗಳು ಕೊರೊನಾ ವೈರಸ್ ರೋಗ ಲಕ್ಷಣಗಳನ್ನು ಹೊಂದಿರುವ ಶಂಕಿತ ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು ಮತ್ತು ಪಾಸಿಟಿವ್ ವರದಿ ನೀಡುವಂತೆ ಒತ್ತಾಯಿಸುವಂತಿಲ್ಲ ಎಂದು ಹೇಳಿದೆ.

ವಿವಿಧ ರಾಜ್ಯಗಳಿಗೆ ವಾರದ ಬಳಕೆಗಾಗಿ ಕೇಂದ್ರದಿಂದ 19.2 ಲಕ್ಷ ರೆಮ್‌ಡೆಸಿವಿರ್ ವಯಲ್ಸ್ ಹಂಚಿಕೆವಿವಿಧ ರಾಜ್ಯಗಳಿಗೆ ವಾರದ ಬಳಕೆಗಾಗಿ ಕೇಂದ್ರದಿಂದ 19.2 ಲಕ್ಷ ರೆಮ್‌ಡೆಸಿವಿರ್ ವಯಲ್ಸ್ ಹಂಚಿಕೆ

ಇದಕ್ಕೂ ಮುನ್ನ ಗುಜರಾತ್ ಆಸ್ಪತ್ರೆಗಳಲ್ಲಿ ದಾಖಲಾಗಲು ಪಾಸಿಟಿವ್ ವರದಿ ಕೊಂಡೊಯ್ಯುವುದು ಕಡ್ಡಾಯವಾಗಿತ್ತು.

ಸರ್ಕಾರಿ ಆಂಬುಲೆನ್ಸ್‌ಗಳನ್ನು ಹೊರತುಪಡಿಸಿ(108 ಆಂಬ್ಯುಲೆನ್ಸ್ ಸೇವೆಯ) ಇತರೆ ವಾಹನಗಳಲ್ಲಿ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ ಎಂದು ಈ ಹಿಂದೆ ಹಲವರು ದೂರು ನೀಡಿದ್ದರು.

ಆಂಬ್ಯುಲೆನ್ಸ್‌ಗಳಲ್ಲಿ ಅಥವಾ ಖಾಸಗಿ ವಾಹನಗಳಲ್ಲಿ ಬರುವ ಎಲ್ಲಾ ಶಂಕಿತ ಕೋವಿಡ್-19 ರೋಗಿಗಳನ್ನು ದಾಖಲಿಸಿಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಿದೆ.

ಶುಕ್ರವಾರದಂದು ದೇಶದಲ್ಲಿ ಮತ್ತೆ ದಾಖಲೆಯ 4,14,188 ಹೊಸ ಪ್ರಕರಣಗಳು ದೃಢವಾಗಿವೆ ಮತ್ತು ದಾಖಲೆಯ 3,915 ಸಾವು ಸಂಭವಿಸಿದೆ. ಗುರುವಾರ ಕೂಡ ದೇಶದಲ್ಲಿ 4.14 ಲಕ್ಷ ಹೊಸ ಕೇಸ್ ದಾಖಲಾಗಿದ್ದವು. ಈ ಮೂಲಕ ದೇಶದಲ್ಲಿ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.14 ಕೋಟಿಗೆ ಏರಿಕೆಯಾಗಿದೆ.

ಇನ್ನು ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ದೇಶದಲ್ಲಿ ಇದೀಗ ಸಾವಿನ ಸಂಖ್ಯೆ 2,34,083ಕ್ಕೆ ತಲುಪಿದೆ. ಸೋಂಕಿತರ ಸಂಖ್ಯೆ ಸತತ ಏರುತ್ತಿರುವ ಪರಿಣಾಮ ದೇಶದ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 36,45,164ಕ್ಕೆ ಹೆಚ್ಚಿದೆ.

English summary
In a relief to people, the Gujarat government on Friday announced that carrying a COVID- 19 positive report will not be necessary for admission of patients to hospitals in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X