ಬ್ರಿಟಿಷ್‌ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಪ್ರವಾಸ, ಎಲ್ಲೆಲ್ಲಿ ಭೇಟಿ?

ಅಹಮದಾಬಾದ್, ಏಪ್ರಿಲ್ 17: ಬ್ರಿಟಿಷ್‌ ದೇಶದ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಏಪ್ರಿಲ್ 21ರಿಂದ ಭಾರತ ಪ್ರವಾಸದ ಕೈಗೊಳ್ಳಲಿದ್ದಾರೆ. ಇದೇ ಮೊದಲ ಸಲ ಗುಜರಾತ್‌ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬ್ರಿಟಿಷ್ ಪ್ರಧಾನಿ, ಅಹಮದಾಬಾದ್ ಮೂಲಕ ರಾಜ್ಯಕ್ಕೆ ಆಗಮಿಸಲಿದ್ದಾರೆ. ಎರಡು ದಿನಗಳ ಕಾಲ ಭಾರತಕ್ಕೆ ಭೇಟಿ ನೀಡುತ್ತಿರುವ ಬೋರಿಸ್ ಜಾನ್ಸನ್ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಭೇಟಿಯಾಗಲಿದ್ದು ಈ ಇಬ್ಬರು ನಾಯಕರು ಮಧ್ಯ ಸುದೀರ್ಘ ಮಾತುಕತೆ ನಡೆಯಲಿದೆ.

ಬ್ರಿಟಿಷ್ ಪ್ರಧಾನಿಯಾದ ಬಳಿಕ ಮೊದಲನೇ ಬಾರಿಗೆ ಬೋರಿಸ್ ಜಾನ್ಸನ್ ಅವರು ಅಹಮದಾಬಾದ್ ನಗರದ ಮೂಲಕ ಭಾರತ ದೇಶದ ಪ್ರವಾಸವನ್ನು ಆರಂಭಿಸಲಿದ್ದು ಏಪ್ರಿಲ್ 22 ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೋರಿಸ್ ಜಾನ್ಸನ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನಡೆಯಲಿದೆ. ಭಾರತ ಮತ್ತು ಯುಕೆ ರಾಷ್ಟ್ರಗಳು ಪರಸ್ಪರ ಉತ್ತಮ ಸಂಬಂಧ ಹೊಂದಿದ್ದು ಪ್ರಮುಖ ಕೈಗಾರಿಕೆಗಳಲ್ಲಿ ಹೂಡಿಕೆ ಪ್ರಕ್ರಿಯೆ ಹಾಗೂ ಹೊಸ ಹೂಡಿಕೆ ಪ್ರಕಟಣೆಗಳ ಮಾತುಕತೆಗಳು ನಡೆಯಲಿದೆ ಎಂದು ವರದಿಯಾಗಿದೆ.

ಒಂದು ದಿನದ ಅಹಮದಾಬಾದ್ ಪ್ರವಾಸದ ಬಳಿಕ ಏಪ್ರಿಲ್ 22ರಂದು ಅಹಮದಾಬಾದ್‌ನಿಂದ ನವದೆಹಲಿಗೆ ಬ್ರಿಟಿಷ್ ಪ್ರಧಾನಿ ಪ್ರಯಾಣ ಬೆಳಸಲಿದ್ದು, ಭಾರತ ಮತ್ತು ಬ್ರಿಟಿಷ್ ಕಾರ್ಯತಂತ್ರದ ರಕ್ಷಣೆ, ರಾಜತಾಂತ್ರಿಕ ಮತ್ತು ಆರ್ಥಿಕತೆಯ ಪಾಲುದಾರಿಕೆಯ ಕುರಿತಾದ ಮಾತಗಳು ಹಾಗೂ ಇತರೆ ಹೊಸ ಒಪ್ಪಂದಗಳ ಬಗ್ಗೆ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚೆ ನಡೆಯಲಿವೆ.

Boris Johnson to Arrive in Ahmadabad on April 21 Hold ‘In-Depth’ Talks With PM Modi

ಇನ್ನು ಭಾರತದ ಭೇಟಿ ನೀಡುವ ಉದ್ದೇಶವನ್ನು ಹೇಳಿಕೊಂಡಿರುವ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತಕ್ಕೆ ನನ್ನ ಭೇಟಿ ಈ ಎರಡೂ ರಾಷ್ಟ್ರಗಳ ನಡುವೆ ಒಂದು ಮುಖ್ಯವಾದ ಪ್ರಗತಿಯುಳ್ಳ ವಿಷಯಗಳನ್ನು ತಲುಪಿಸುವ ಭರವಸೆ ಇದೆ

ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಯಿಂದ ಇಂಧನ ಭದ್ರತೆ ಮತ್ತು ರಕ್ಷಣೆಗೆ ಸೇರಿದ ಮಾತುಕತೆಗಳು ನಮ್ಮ ಆದ್ಯತೆಯಾಗಿದೆ ಎಂದರು. ಪ್ರಜಾಪ್ರಭುತ್ವ ರಾಷ್ಟ್ರಗಳ ಸ್ನೇಹದಿಂದ ರಾಷ್ಟ್ರವನ್ನು ಮುನ್ನಡೆಸಬೇಕು ಎಂದು ಕರೆ ನೀಡಿರುವ ಬ್ರಿಟಿಷ್ ಪ್ರಧಾನಿ, ಭಾರತವು ಉತ್ತಮ ಅತಿದೊಡ್ಡ ಪ್ರಜಾಪ್ರಭುತ್ವವಾಗಿದ್ದು ಮೌಲ್ಯಯುತವಾದ ಕಾರ್ಯತಂತ್ರದ ಪಾಲುದಾರರಾಗಿದ್ದಾರೆ, ಅಲ್ಲದೆ ಭಾರತವು ಅಭಿವೃದ್ಧಿಯಲ್ಲಿ ವಾಣಿಜ್ಯ, ವ್ಯಾಪಾರ ಜನರ ಸಂಪರ್ಕವನ್ನು ತಮ್ಮ ದೇಶದೊಂದಿಗೆ ಸಾಧಿಸಿಕೊಂಡಿದೆ ಎಂದಿದ್ದಾರೆ. ಬೋರಿಸ್ ಜಾನ್ಸನ್ ಅವರು ಭಾರತ ದೇಶದ ಪ್ರವಾಸ ಕೈಗೊಳ್ಳುವ ಮೊದಲೇ ವಿಶ್ವಾಸಾರ್ಹ ಮಾತುಗಳನ್ನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+