• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಬರಮತಿ ಜೈಲಿನ 11 ಕೈದಿಗಳಿಗೆ ಕೊರೊನಾ ಪಾಸಿಟಿವ್

|

ಅಹಮದಾಬಾದ್, ಮೇ 7: ನಗರದ ಸಬರಮತಿ ಜೈಲಿನ 11 ಮಂದಿ ಕೈದಿ ಹಾಗೂ ಮೂವರು ಜೈಲು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಹೊಸದಾಗಿ ಇಬ್ಬರು ಹವಾಲ್ದಾರ್ ಗಳು ಮತ್ತು ಜೈಲು ಸಹಾಯಕ(ಪೇದೆ) ಸೇರಿದಂತೆ ಮೂವರಿಗೆ ಕೊರೋನಾ ವೈರಸ್ ತಗುಲಿದೆ. ಕಳೆದ ವಾರ ಇಬ್ಬರು ಕೈದಿಗೆಳಿಗೆ ಪಾಸಿಟಿವ್ ಬಂದಿತ್ತು ಎಂದು ರಾಣಾ ಹೇಳಿದ್ದಾರೆ.

ಅಪರಾಧಿಗಳು ಮತ್ತು ವಿಚಾರಣಾಧೀನ ಕೈದಿಗಳು ಸೇರಿದಂತೆ ಸೋಂಕಿತ 11 ಕೈದಿಗಳಲ್ಲಿ ಯಾರೂ ಇತರೆ ಕೈದಿಗಳ ಸಂಪರ್ಕಕ್ಕೆ ಬಂದಿಲ್ಲ. ಏಕೆಂದರೆ ಅವರು ಈಗಾಗಲೇ ಕ್ವಾರಂಟೈನಲ್ಲಿದ್ದಾರೆ ಎಂದು ಸಬರಮತಿ ಜೈಲಿನ ಉಪ ಪೊಲೀಸ್ ವರಿಷ್ಠಾಧಿಕಾರಿ ಡಿ ವಿ ರಾಣಾ ತಿಳಿಸಿದ್ದಾರೆ.

ಇತ್ತೀಚಿಗೆ ಪೆರೋಲ್ ಮುಗಿಸಿ ಜೈಲಿಗೆ ಮರಳಿದ ಐವರು ಅಪರಾಧಿಗಳಿಗೆ ಕೊರೋನಾ ಪಾಸಿಟಿವ್ ದೃಢುಪಟ್ಟಿದೆ. ಇದುವರೆ ಒಟ್ಟ 11 ಕೈದಿಗಳಿದೆ ಸೋಂಕು ತಗುಲಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ನಿಯಂತ್ರಿಸಲು ಜೈಲು ಕೈದಿಗಳು ನೆರವು

ಗುಜರಾತ್‌ನಲ್ಲಿ ಇದುವರೆಗೆ 5804 ಮಂದಿಗೆ ಕೊರೊನಾ ಸೋಂಕು ತಗುಲಿದೆ. 319 ಮಂದಿ ಮೃತಪಟ್ಟಿದ್ದಾರೆ. ಬಿಜೆಪಿಯ ನಮಸ್ತೆ ಟ್ರಂಪ್ ಕಾರ್ಯಕ್ರಮದಿಂದಲೇ ಗುಜರಾತ್‌ನಲ್ಲಿ ಕೊರೊನಾ ವೈರಸ್ ಹರಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

English summary
Eleven inmates and three jail staff members at the Sabarmati Central in Ahmedabad Have tested Positive for coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X