ಆಗ್ರಾದಲ್ಲಿ ಹಗಲು ಹೊತ್ತಿನಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ವ್ಯಾಪಾರಿಯ ಮೇಲೆ ಗುಂಡಿನ ದಾಳಿ
ಆಗ್ರಾ, ಸೆಪ್ಟೆಂಬರ್ 16: ಆಗ್ರಾದ ಇಟಾಹ್‌ನಲ್ಲಿ ಹಗಲು ಹೊತ್ತಿನಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ವ್ಯಾಪಾರಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದು ದೃಶ್ಯ ಬೆಚ್ಚಿ ಬೀಳಿಸುವಂತಿದೆ.
ಸುಲಿಗೆ ಹಣ ನೀಡದ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮಾರಕಾಸ್ತ್ರಗಳಿಂದ ಬಂದ ದುಷ್ಕರ್ಮಿಗಳು ವ್ಯಾಪಾರಿ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಜೊತೆಗೆ ಗುಂಡು ಹಾರಿಸಿದ್ದಾರೆ. ಹರಿತವಾದ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಈ ವೇಳೆ ದುಷ್ಕರ್ಮಿಗಳು ವ್ಯಕ್ತಿಯನ್ನು ಮನಬಂದಂತೆ ಥಳಿಸಿದ್ದಾರೆ. ದುಷ್ಕರ್ಮಿಗಳ ಅನುಚಿತ ವರ್ತನೆಯ ಸಂಪೂರ್ಣ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸೆಪ್ಟೆಂಬರ್ 11 ರಂದು ನಡೆದಿದೆ ಎನ್ನಲಾಗಿದೆ.

ಗುಂಪು ದುಷ್ಕರ್ಮಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ. ದಾಳಿಕೋರರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ವೇಳೆ ಹತ್ತಾರು ಜನ ಸುತ್ತಲು ಇದ್ದರು ವ್ಯಾಪಾರಿಯ ಸಹಾಯಕ್ಕೆ ಯಾರೂ ಕೂಡ ಬಾರದಿರುವುದನ್ನು ಕಾಣಬಹುದು.
#Agra के एटा में बदमाशों ने व्यापारी पर चलाई गोली। रंगदारी ना देने पर हुआ बवाल | भीड़ ने दबंगों को दबोच कर किया पुलिस के हवाले, 11 सितम्बर की घटना pic.twitter.com/bDNWmOdvJq
— News24 (@news24tvchannel) September 15, 2022












Click it and Unblock the Notifications