• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವರ್ಚ್ಯುಯಲ್ ಆಗಿ 23ನೇ 'ಬೆಂಗಳೂರು ಟೆಕ್ ಶೃಂಗಸಭೆ - 2020' ಚಾಲನೆ

23ನೇ 'ಬೆಂಗಳೂರು ಟೆಕ್ ಶೃಂಗಸಭೆ - 2020'ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚ್ಯುಯಲ್ ಆಗಿ ಇಂದು ಚಾಲನೆ ನೀಡಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ನಂತರ ಜಗತ್ತಿನ ಪ್ರಮುಖ ಸವಾಲುಗಳ ಕುರಿತು ಶೃಂಗಸಭೆಯಲ್ಲಿ ಚರ್ಚೆ ನಡೆದಿದೆ.

'ಬೆಂಗಳೂರು ಟೆಕ್ ಶೃಂಗಸಭೆ 2020' ನವೆಂಬರ್ 19 ರಿಂದ 21 ರವರೆಗೆ ನಡೆಯಲಿದೆ. ಈ ವರ್ಷದ ಶೃಂಗಸಭೆ ವಿಷಯ 'Next is Now'. 'ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್' ಹಾಗೂ 'ಜೈವಿಕ ತಂತ್ರಜ್ಞಾನ' ಕ್ಷೇತ್ರಗಳಲ್ಲಿ ಪ್ರಮುಖ ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳ ಪರಿಣಾಮ ಕುರಿತು ಶೃಂಗಸಭೆಯು ಚರ್ಚೆ ನಡೆಸಲಾಗಿದೆ.

ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್), ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ನವೋದ್ಯಮದ ವಿಷನ್ ಗ್ರೂಪ್, ಭಾರತ ಸಾಫ್ಟ್‌ವೇರ್ ತಂತ್ರಜ್ಞಾನ ಪಾರ್ಕ್ (ಎಸ್‌ಟಿಪಿಐ) ಮತ್ತು ಎಂಎಂ ಆಕ್ಟಿವ್ ಸೈ-ಟೆಕ್ ಕಮ್ಯುನಿಕೇಷನ್ಸ್ ಸಹಯೋಗದಲ್ಲಿ ಕರ್ನಾಟಕ ಸರ್ಕಾರ ಶೃಂಗಸಭೆ ಆಯೋಜಿಸಿದೆ.

ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಶಾಂಗ್ರಿಲಾ ಹೋಟೆಲ್ ನಲ್ಲಿ ಉದ್ಘಾಟನೆ ಸಮಾರಂಭದಲ್ಲಿ ಶೃಂಗಸಭೆಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಸ್ವಿಸ್ ಒಕ್ಕೂಟದ ಉಪಾಧ್ಯಕ್ಷ ಗೈ ಪಾರ್ಮೆಲಿನ್ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಗಣ್ಯರು ಭಾಗವಹಿಸಲಿದ್ದಾರೆ. ಉದ್ಯಮದ ನಾಯಕರು, ತಂತ್ರಜ್ಞರು, ಸಂಶೋಧಕರು, ಹೂಡಿಕೆದಾರರು, ನೀತಿ ನಿರೂಪಕರು ಮತ್ತು ಭಾರತ ಮತ್ತು ಜಗತ್ತಿನ ಶಿಕ್ಷಣ ತಜ್ಞರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಐಟಿ ಬಿಟಿ ಸಚಿವ ಡಾ. ಅಶ್ವಥ ನಾರಾಯಣ, ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮುಂತಾದವರು ಪಾಲ್ಗೊಂಡಿದ್ದರು.

ಮೂರು ದಿನಗಳ ಸಮ್ಮೇಳನದಲ್ಲಿ ವಿವಿಧ ಸಮಾವೇಶ, ಅಂತಾರಾಷ್ಟ್ರೀಯ ಪ್ರದರ್ಶನ, ಜಾಗತಿಕ ಅತ್ಯಾಧುನಿಕ ಮೈತ್ರಿಕೂತ, ಎಸ್ ಟಿ ಪಿಐ-ಐಟಿ ರಫ್ತು ಪ್ರಶಸ್ತಿ, ಸ್ಮಾರ್ಟ್ ಬಯೋ ಪ್ರಶಸ್ತಿ, ರೂರಲ್ ಐಟಿ ಕ್ವಿಜ್, ಬಯೋಟೆಕ್ ಕ್ವಿಜ್ ಹಾಗೂ ಜೈವಿಕ ಸಂಶೋಧನೆ ಹಾಗೂ ಅಭಿವೃದ್ಧಿ ಪ್ರಾತ್ಯಕ್ಷಿಕೆ ಎಲ್ಲವೂ ವರ್ಚ್ಯುಯಲ್ ಆಗಿ ನಡೆಯಲಿದೆ.

ಭಾರತ ಹಾಗೂ ಅಂತಾರಾಷ್ಟ್ರೀಯ ಮಿತ್ರರಾಷ್ಟ್ರಗಳಿಂದ ಸುಮಾರು 270ಕ್ಕೂ ಅಧಿಕ ವಿಷಯ ಆಧಾರಿತ ತಜ್ಞರಿಂದ ಅತ್ಯಾಧುನಿಕ ತಂತ್ರಜ್ಞಾನ ಸಂಶೋಧನೆ, ನಾಲೇಜ್ ಹಬ್, ಸಂಶೋಧನಾ ಹಬ್, ಒನ್ ಹೆಲ್ತ್ ಹಾಗೂ ದೇಶಗಳ ಚರ್ಚಾಕೂಟ ಕಾರ್ಯಕ್ರಮವಿರಲಿದೆ.

ಮೊದಲ ದಿನದ ಕಾರ್ಯಕ್ರಮ ವಿವರ

ಜ್ಞಾನದ ಹಬ್

ಐಪಿ ಇನ್ನೋವೇಷನ್ ಪರಿಣಾಮ, ಜಾಗತಿಕರಣ ಪ್ರಭಾವ, ಪೂರೈಕೆ ವ್ಯವಸ್ಥೆ ಬಗ್ಗೆ ಚರ್ಚೆ

'ವ್ಯವಹಾರವನ್ನು ಸುಲಭಗೊಳಿಸಲು ಕಾರಣವಾಗುವ ನಾವೀನ್ಯತೆಯ ಮೇಲೆ ಐಪಿ ಪರಿಣಾಮ' ಕುರಿತು ದಿನದ ಎರಡನೇ ಅಧಿವೇಶನವನ್ನು ಇಂಟೆಲ್ ಇಂಡಿಯಾದ ಪೇಟೆಂಟ್ ಕೌನ್ಸಿಲ್ ಡಾ.ಎಸ್.ಕೆ.ಮೂರ್ತಿ ಅವರು ನಿರ್ವಹಿಸಲಿದ್ದಾರೆ. ಎಸಿಐಆರ್, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯದ ಪ್ರಮುಖರು ಭಾಗವಹಿಸಲಿದ್ದು, ಬೆಂಗಳೂರಿನ ಯುನೈಟೆಡ್ ಸ್ಟೇಟ್ಸ್ ಪೇಟೆಂಟ್ ಮತ್ತು ಟ್ರೇಡ್‌ಮಾರ್ಕ್ಸ್ ಕಚೇರಿ, ಮತ್ತು ಫಿಲಿಪ್ಸ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿಮಿಟೆಡ್ ಪ್ರಮುಖರು ಭಾಗವಹಿಸಲಿದ್ದಾರೆ.

ನಾವಿನ್ಯತೆ ವಿಭಾಗ

ಹೆಲ್ತ್‌ಕೇರ್, ಕೃಷಿ ಮತ್ತು ವಿಪತ್ತು ನಿರ್ವಹಣೆ, ಉಪಗ್ರಹಗಳು ಮತ್ತು ಸಮಾಜ, ಮತ್ತು ಡಿಜಿಟಲ್ ಹೆಲ್ತ್‌ಕೇರ್‌ನಲ್ಲಿ ಉದಯೋನ್ಮುಖ ಪರಿಹಾರವಾಗಿ ಡ್ರೋನ್ಸ್ ಮತ್ತು ರೊಬೊಟಿಕ್ಸ್ ಬಳಕೆ ಬಗ್ಗೆ ಒಟ್ಟು 3 ಅಧಿವೇಶನಗಳಿವೆ.

ಈ ಅಧಿವೇಶನಗಳಲ್ಲಿ ಲಾಕ್‌ಹೀಡ್ ಮಾರ್ಟಿನ್ ಸ್ಪೇಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ (ಇಸ್ರೋ), ಭಾರತದ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್‌ಸಿಎ) ತೇಜಸ್ ಪ್ರೋಗ್ರಾಂ, ಯುನೈಟೆಡ್ ನೇಷನ್ಸ್ ಒಒಎಸ್ಎ ಮತ್ತು ಐಐಟಿಬಿಯ ವಿಷಯ ತಜ್ಞರು ಭಾಗವಹಿಸಿದ್ದರು.

ಒಂದು ಆರೋಗ್ಯ

ಡಿಜಿಟಲ್‌ನಿಂದ ಲಿವಿಂಗ್ ಮಷಿನ್ ಗಳು, ಡ್ರಗ್ ಸಂಶೋಧನೆಯಿಂದ ಕೃತಕ ಬುದ್ಧಿಮತ್ತೆ(ಎಐ), ಆತ್ಮನಿರ್ಭರ ಭಾರತ್ -ಎನ್‌ಬಿಆರ್ ಸಿ, ಮಾನವ ಆರೋಗ್ಯದಲ್ಲಿ ಎಐ ಬಳಕೆ, ವೇಗವರ್ಧಕ ನಾವೀನ್ಯತೆ ಕುರಿತಂತೆ ಒಟ್ಟು 5 ಅಧಿವೇಶನಗಳಿವೆ.

'ಡಿಜಿಟಲ್ ಟು ಲಿವಿಂಗ್ ಮಷಿನ್ಸ್' ಕುರಿತ ಆರಂಭಿಕ ಅಧಿವೇಶನದಲ್ಲಿ ಬಯೋಕಾನ್ ಲಿಮಿಟೆಡ್ ಸಿಎಂಡಿ ಡಾ.ಕಿರಣ್ ಮಜುಂದಾರ್ ಶಾ ಮತ್ತು ಮ್ಯಾಸಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯ ಅಧ್ಯಕ್ಷ ಎಮೆರಿಟಾ ಡಾ.ಸುಸನ್ ಹಾಕ್ಫೀಲ್ಡ್ ಭಾಗವಹಿಸಿದ್ದರು.

ದೇಶದ ಅಧಿವೇಶನಗಳು

ಫಿನ್ಲೆಂಡ್, ಇಸ್ರೇಲ್, ನೆದರ್ಲೆಂಡ್ಸ್ ಮತ್ತು ಯುಕೆ ಈ ನಾಲ್ಕು ಪಾಲುದಾರ ರಾಷ್ಟ್ರಗಳ ನಿಯೋಗ ಪಾಲ್ಗೊಂಡಿತ್ತು.

ಈ ಅಧಿವೇಶನದಲ್ಲಿ ಕೃತಕ ಬುದ್ಧಿಮತ್ತೆ(ಎಐ), ಬಾಹ್ಯಾಕಾಶ ತಂತ್ರಜ್ಞಾನ, ಭಾರತೀಯ ಸ್ಟಾರ್ಟ್ಅಪ್‌ಗಳು ಡಿಜಿಟಲ್ ಮಾರ್ಗವಾಗಿ ನೆದರ್‌ಲ್ಯಾಂಡ್‌ಗೆ ವಿಸ್ತರಿಸುವುದು ಹಾಗೂ ಹಸಿರು ಮರುಗಳಿಕೆ ಮತ್ತು ಸುಸ್ಥಿರ ಭವಿಷ್ಯ ಸಾಧ್ಯಸಾಧ್ಯತೆ ಬಗ್ಗೆ ಚರ್ಚೆ.

ಕಾರ್ಯಕ್ರಮದ ಮೊದಲ ದಿನದಂದು ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು ಮಾತನಾಡಿ, ಉದಯೋನ್ಮುಖ ತಂತ್ರಜ್ಞಾನಗಳ ನೆಟ್‌ವರ್ಕ್ ಮತ್ತು ಕಾರ್ಯತಂತ್ರದ ಅಗತ್ಯ ಬಗ್ಗೆ ಗಮನಹರಿಸಬೇಕು ಎಂದರು. ದಿನದ ಇತರೆ ಪ್ರಮುಖ ಕಾರ್ಯಕ್ರಮಗಳಲ್ಲಿ ಆರೋಗ್ಯ ರಕ್ಷಣೆ, ಕೃಷಿ ಮತ್ತು ವಿಪತ್ತು ನಿರ್ವಹಣೆಯಲ್ಲಿ ಉದಯೋನ್ಮುಖ ಪರಿಹಾರವಾಗಿ ಡ್ರೋನ್ಸ್ ಮತ್ತು ರೊಬೊಟಿಕ್ಸ್ ಕುರಿತು ಒಳನೋಟವುಳ್ಳ ಅಧಿವೇಶನ ಹಾಗೂ ಮಾನವ ಆರೋಗ್ಯದಲ್ಲಿ AI ಮತ್ತು ಹಸಿರು ಮರುಗಳೀಕೆ ಮತ್ತು ಸುಸ್ಥಿರ ಭವಿಷ್ಯದಲ್ಲಿ ತಂತ್ರಜ್ಞಾನದ ಪಾತ್ರದ ಬಗ್ಗೆ ಯುಕೆ ಕಾನ್ಸುಲ್ ನೀಡಿದ ಅಧಿವೇಶನವಾಗಿತ್ತು. ಐಟಿ ಪ್ರಶಸ್ತಿಗಳ ಘೋಷಣೆಯೊಂದಿಗೆ ದಿನವು ಮುಕ್ತಾಯಗೊಂಡಿತು, ನಾಸ್ಕಾಮ್ ಅಧ್ಯಕ್ಷರಾದ ಶ್ರೀಮತಿ ದೇಬ್ಜಾನಿ ಘೋಷ್ ಅವರು ಸಮಾರೋಪ ಭಾಷಣ ಮಾಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X