ಮೈಸೂರು : ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ

ಮೈಸೂರು, ಸೆ.11 : ಐತಿಹಾಸಿಕ ಮೈಸೂರು ದಸರಾ ಸಂದರ್ಭದಲ್ಲಿ ನಗರದೊಳಗೆ ಆಗುವ ಸಂಚಾರದ ದಟ್ಟಣೆ ನಿಯಂತ್ರಿಸಲು ಮೈಸೂರು ಸಂಚಾರಿ ಪೊಲೀಸರು ಸಿದ್ದರಾಗಿದ್ದಾರೆ. ಖಾಸಗಿ ವಾಹನಗಳನ್ನು ನಗರ ಪ್ರವೇಶಿಸಿದಂತೆ ತಡೆಯಲು ಯೋಜನೆ ತಯಾರಿಸಿದ್ದಾರೆ.

ಸದ್ಯ ಈ ಕುರಿತು ಸಂಚಾರಿ ಪೊಲೀಸರು ಕಾರ್ಯ ಯೋಜನೆ ತಯಾರಿಸಿದ್ದು, ವಿವಿಧ ಜಿಲ್ಲೆಗಳಿಂದ ಆಗಮಿಸುವ ಕೆಎಸ್ಆರ್ ಟಿಸಿ ಬಸ್ ಗಳು ಮಾತ್ರ ನಗರ ಪ್ರವೇಶಿಸಬಹುದಾಗಿದೆ. ಪ್ರವಾಸಿಗರು ಆಗಮಿಸುವ ಖಾಸಗಿ ವಾಹನಗಳು ನಗರದೊಳಗೆ ಸಂಚರಿಸುವಂತಿಲ್ಲ.

Mysore

ಮೈಸೂರು ನಗರ ಪ್ರವೇಶಿಸುವ ಹಾಸನ, ಮಳವಳ್ಳಿ, ಬೆಂಗಳೂರು ಮತ್ತು ಚಾಮರಾಜನಗರ ರಿಂಗ್ ರಸ್ತೆಗಳಿಂದ, ನಗರದೊಳಕ್ಕೆ ಸಾರಿಗೆ ವ್ಯವಸ್ಥೆಯನ್ನು ಸಂಚಾರಿ ಪೊಲೀಸರು ಒದಗಿಸಲಿದ್ದಾರೆ. ಖಾಸಗಿ ವಾಹನಗಳಲ್ಲಿ ಆಗಮಿಸುವ ಪ್ರವಾಸಿಗರು, ನಗರದ ಹೊರಭಾಗದಲ್ಲಿಯೇ ವಾಹನ ನಿಲ್ಲಿಸಿ, ಬಸ್ ಮೂಲಕ ನಗರಕ್ಕೆ ಆಗಮಿಸಬೇಕಾಗಿದೆ.

ಈ ಸಾರಿಗೆ ಬಸ್ ಗಳು ಎಚ್ಓಎಚ್ಓ ( Hop On and Hop Off) ಸೇವೆಗಳ ಜೊತೆಗೆ ಕಾರ್ಯನಿರ್ವಹಿಸಲಿವೆ. ಎಚ್ಓಎಚ್ಓ ಬಸ್ ಗಳು ಮೈಸೂರು ಸುತ್ತಲಿನ ಪ್ರವಾಸಿ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸಿದರೆ, ಸಾರಿಗೆ ಬಸ್ ಗಳು ನಗರದಲ್ಲಿ ಸಂಚರಿಸಲಿವೆ.

ಮೈಸೂರು ಹೊರವಲಯದಲ್ಲೇ ಖಾಸಗಿ ವಾಹನಗಳನ್ನು ತಡೆಯುವುದರಿಂದ ಪೊಲೀಸರಿಗೆ ಭದ್ರತೆ ಬಗ್ಗೆ ಗಮನ ಹರಿಸಲು ಅನುಕೂಲವಾಗಲಿದೆ. ಪ್ರತಿ ವಾಹನಗಳ ಪರಿಶೀಲನೆ ನಡೆಸಿ, ನಗರದೊಳಕ್ಕೆ ಬಿಡುವ ಕೆಲಸ ಕಡಿಮೆಯಾಗಲಿದೆ.

ಮೈಸೂರು ನಗರದ ಸಾರ್ವಜನಿಕರು ಮತ್ತು ಎಚ್ಓಎಚ್ಓ ಸೇವೆಗಳಲ್ಲಿ ಸಂಚರಿಸುವ ಪ್ರವಾಸಿಗರು ಈ ನಗರ ಸಾರಿಗೆ ಸೌಲಭ್ಯವನ್ನು ಬಳಸಿಕೊಳ್ಳಲು ಪೊಲೀಸರು ಅವಕಾಶ ಕಲ್ಪಿಸಿದ್ದಾರೆ. ಇದಕ್ಕಾಗಿ ಮೈಸೂರು ಮತ್ತು ಸುತ್ತಮುತ್ತಲಿನ ಡಿಪೋಗಳ ಬಸ್ ಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+