ಮೋದಿ ಸಭೆ: ಮುಸ್ಲಿಂರಿಗೆ ಬುರ್ಖಾ ಧರಿಸಿಕೊಂಡು ಬರಲು ಸೂಚನೆ
ಜೈಪುರ, ಸೆ 10: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಇಂದು (ಸೆ 10) ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ.
ಸಭೆಯಲ್ಲಿ ಭಾಗವಹಿಸುವ ಮುಸ್ಲಿಮರಿಗೆ ಬುರ್ಖಾ ಮತ್ತು ಟೋಪಿ ಧರಿಸಿಕೊಂಡು ಬರುವಂತೆ ರಾಜ್ಯ ಬಿಜೆಪಿ ಅಲ್ಪ ಸಂಖ್ಯಾತ ಘಟಕ ಸೂಚಿಸಿದೆ. ಈ ಮೂಲಕ ಅಲ್ಪಸಂಖ್ಯಾತರೂ ಬಿಜೆಪಿ ಜೊತೆಗಿದ್ದಾರೆ ಎನ್ನುವ ಸಂದೇಶವನ್ನು ನೀಡಲು ಪಕ್ಷ ಮುಂದಾಗಿದೆ.

ರಾಜಸ್ಥಾನದಲ್ಲಿ ಚುನಾವಣೆಯ ಸಿದ್ದತೆಯಲ್ಲಿರುವ ಬಿಜೆಪಿ, ನರೇಂದ್ರ ಮೋದಿ ಸಾರ್ವಜನಿಕ ಸಭೆಯ ಮೂಲಕ ರಾಜ್ಯಾದ್ಯಂತ 'ಸಂಕಲ್ಪ ಯಾತ್ರೆ' ಗೆ ಸಜ್ಜಾಗಿದೆ. ಇಂದು ನಡೆಯುವ ಸಾರ್ವಜನಿಕ ಸಭೆಯಲ್ಲಿ ಸುಮಾರು ನಾಲ್ಕು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
ಇಂದಿನ ಸಭೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧಾರಜೇ ಸಿಂಧ್ಯಾ ಭಾಗವಹಿಸಲಿದ್ದಾರೆ.
ಬಿಜೆಪಿ ಕೋಮುವಾದಿ ಪಕ್ಷ, ಅಲ್ಪ ಸಂಖ್ಯಾತರ ಮೇಲೆ ಅವರಿಗೆ ಕಾಳಜಿ ಇಲ್ಲ ಎಂದು ಕಾಂಗ್ರೆಸ್ ಆ ಸಮುದಾಯದವರಿಗೆ ಮೋಸ ಮಾಡುತ್ತಾ ಬಂದಿದ್ದಾರೆ. ನಾವು ಮುಸ್ಲಿಂ ವಿರೋಧಿಗಳಲ್ಲ.
ಈ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವ ನಮ್ಮ ಬಾಂಧವರಿಗೆ ಬುರ್ಖಾ ಮತ್ತು ಟೋಪಿ (skull-cap) ಧರಿಸಿ ಕೊಂಡು ಬರಲು ಸೂಚಿಸಿದ್ದೇವೆ. ಈ ಮೂಲಕ ನಾವು ಮುಸ್ಲಿಂ ವಿರೋಧಿಗಳಲ್ಲ ಎನ್ನುವ ಸಂದೇಶವನ್ನು ದೇಶಕ್ಕೆ ನೀಡುತ್ತೇವೆ ಎಂದು ರಾಜ್ಯ ಬಿಜೆಪಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಮೀನ್ ಪಠಾಣ್ ಹೇಳಿದ್ದಾರೆ.












Click it and Unblock the Notifications