ಮಲ್ಲೇಶ್ವರಂ ಮಂತ್ರಿ ಮಾಲ್ ಬಳಿ ಇನ್ನೂ 2 ಬೃಹತ್ ಕಟ್ಟಡ

ಬೆಂಗಳೂರು. ಸೆ.10: ಈ ಹಿಂದೆ ಬೆಂಗಳೂರಿನ ದಕ್ಷಿಣ ಭಾಗದ ಜನ ಮಲ್ಲೇಶ್ವರಂಗೆ ಹೋಗಬೇಕು ಅಂದರೆ ತುಂಬಾನೇ ಇಷ್ಟಪಡುತ್ತಿದ್ದರು. ಆದರೆ ಈಗ ಹಾಗಿಲ್ಲ. ಮಲ್ಲೇಶ್ವರಂ ಹೊಸ್ತಿಲು ದಾಟಿಕೊಂಡು ಮುಂದೆ ಸಾಗುವುದೇ ದುಸ್ತರವಾಗಿದೆ. ಸಂಪಿಗೆ ಟಾಕೀಸ್ ಜಾಗದ ಹೆಬ್ಬಾಗಿಲಿನಿಂದ ಮುಂದೆ ಹೋಗುವುದೇ ನಿಜಕ್ಕೂ ಕಷ್ಟ ಕಷ್ಟ. ಅಂಥಹುದರಲ್ಲಿ ಅದೇ ಸಂಪಿಗೆ ಹೆಬ್ಬಾಗಿಲಿನಲ್ಲಿ ಇನ್ನೂ ಎರಡು ಅವಳಿ ವಾಣಿಜ್ಯ ಕೇಂದ್ರಗಳು ತಲೆಯೆತ್ತಿಬಿಟ್ಟರೆ ಜನಸಾಮಾನ್ಯನ ಪಾಡು ಆ ದೇವರಿಗೆ ಪ್ರೀತಿ.

ಹೌದು ಈಗಾಗಲೇ ಮಂತ್ರಿ ಮಾಲ್, ಮಂತ್ರಿ ಸ್ಕ್ವೇರ್‌ ಗಳಿಂದ ಗಿಜಿಗುಡುತ್ತಿರುವ ಸಂಪಿಗೆ ಟಾಕೀಸ್ ಸುತ್ತಮುತ್ತ ಇನ್ನೂ 2 ಬಹುಮಹಡಿ ಮೆಟ್ರೋ ಕಟ್ಟಡಗಳು ನಿರ್ಮಾಣಗೊಳ್ಳಲಿವೆಯಂತೆ. ಅದೂ ಸಣ್ಣಪುಟ್ಟ ಬಿಲ್ಡಿಂಗುಗಳು ಅಲ್ಲ.

ಮಂತ್ರಿ ಸ್ಕ್ವೇರ್‌ ಗೆ ಹೊಂದಿಕೊಂಡಿರುವ ಜಾಗದಲ್ಲಿ 32 ಮಹಡಿಯ ವಸತಿ ಸಂಕಿರ್ಣ ಮತ್ತು 27 ಮಹಡಿಗಳ ವಾಣಿಜ್ಯ ಸಂಕಿರ್ಣ ತಲೆಯೆತ್ತಲಿದೆ. ಇದಕ್ಕೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅನುಮೋದನೆಯೂ ನೀಡಿದೆ.

BMRC-Mantri Square twin towers to come-up at Sampige talkies Malleswaram Bangalore

ಈಗಾಗಲೇ ಕೊಳ್ಳುಬಾಕ ಸಂಸ್ಕೃತಿಗೆ ಜನಸಾಮಾನ್ಯರನ್ನು ಒಗ್ಗಿಸಿ/ಬಗ್ಗಿಸಿರುವ ಮಂದಿ ಇನ್ನೂ ಅದೆಷ್ಟು ಮಾಲುಗಳನ್ನು ರಾಜಧಾನಿಯಲ್ಲಿ ನಿರ್ಮಿಸುತ್ತಾರೋ ಎಂಬ ಆತಂಕ ಮನೆ ಮಾಡಿದೆ. ಈಗಾಗಲೇ ಬೆಂಗಲೂರಿನಲ್ಲಿರುವ ದೊಡ್ಡ ದೊಡ್ಡ ಮಾಲ್ ಗಳ ಸಂಖ್ಯೆ ಶತಕದ ಗಡಿ ದಾಟಿರಬಹುದು. ಅದು ಸಾಲದು ಅಂತ ಈಗ 27 ಮಹಡಿಗಳ ಮತ್ತೊಂದು ವಾಣಿಜ್ಯ ಸಂಕಿರ್ಣ.

ಜನಸೇವೆಗಿಂತ ಲಾಭಕೋರ ಸಂಸ್ಥೆ ಎನಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮವು (ಬಿಎಂಆರ್‌ಸಿ) ಈ ನಿಟ್ಟಿನಲ್ಲಿ ಮಂತ್ರಿ ಡೆವಲಪರ್ಸ್ ಜತೆ ಒಪ್ಪಂದ ಮಾಡಿಕೊಂಡಿದೆ. ಜನ ಸಾಮಾನ್ಯರಿಗೆ ಇದರಿಂದ ಎಷ್ಟು ಲಾಭವೋ ಗೊತ್ತಿಲ್ಲ. ಆದರೆ, ಬಿಎಂಆರ್‌ಸಿ ಮತ್ತು ಮಂತ್ರಿ ಡೆವಲಪರ್ಸ್ ಗಂತೂ ಈ ಯೋಜನೆಯಿಂದ ಬಂಪರ್‌ ಹೊಡೆಯಲಿದೆ. 5 .11ಎಕರೆ ಜಾಗದಲ್ಲಿ ಈ ಎರಡು ಬೃಹತ್‌ ಕಟ್ಟಡಗಳು ಹಾಗೂ ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣ ನಿರ್ಮಾಣಗೊಳ್ಳಲಿದೆ.

ಬಿಎಂಆರ್‌ಸಿಯು ಮೆಟ್ರೋ ನಿಲ್ದಾಣಕ್ಕೆ ಬೇಕಾದ ಭೂ ಸ್ವಾಧೀನ ಮಾಡಿಕೊಳ್ಳಬೇಕಾಗಿತ್ತು. ಸ್ವಾಧೀನದ ನಂತರ ಪರಿಹಾರದ ಮೊತ್ತ ಹಾಗೂ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಸುಮಾರು 40 ಕೋಟಿ ರೂ. ಸುರಿಯಬೇಕಿತ್ತು. ಆದರೆ, ನಿಗಮಕ್ಕೆ ಈಗ ಇದಾವುದರ ಕಿರಿಕಿರಿ ಇಲ್ಲ. ಮಂತ್ರಿ ಡೆವಲಪರ್, ಬಿಎಂಆರ್‌ಸಿಗೆ ಜಾಗವನ್ನೂ ಬಿಟ್ಟುಕೊಟ್ಟು, ನಿಲ್ದಾಣವನ್ನೂ ಸ್ವತಃ ತಾವೇ ನಿರ್ಮಿಸಿ ಕೊಡಲಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ತಲೆಯೆತ್ತಲಿರುವ ಎರಡು ಕಟ್ಟಡಗಳ ಬಾಡಿಗೆ ಮತ್ತಿತರ ಆದಾಯದಲ್ಲಿ ಬಿಎಂಆರ್‌ಸಿ ಪಾಲುದಾರಿಕೆಯನ್ನೂ ಹೊಂದಿದೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಇನ್ನು, ಮೆಟ್ರೋ ಕೊನೆಯ ನಿಲ್ದಾಣ ಇದಾಗಿರುವುದರಿಂದ ಇಲ್ಲಿಗೆ ಬಂದಿಳಿಯುವ ಪ್ರಯಾಣಿಕರೆಲ್ಲಾ ಮಂತ್ರಿ ಸ್ಕ್ವೇರ್‌ ಗೆ ಬರಲಿದ್ದಾರೆ. ಮೆಟ್ರೋ ಆಕರ್ಷಣೆಯಿಂದ ಮಂತ್ರಿ ಮಾಲ್‌ಗ‌ೂ ಹೆಚ್ಚು ಜನ ಹರಿದುಬರಲಿದ್ದಾರೆ ಎಂಬುದು ಲೆಕ್ಕಾಚಾರ. ಆದರೆ ನಿಮ್ಮ ಜೇಬು ಭದ್ರವಾಗಿರಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+