ಮೈಕ್ರೋಸಾಫ್ಟ್ ಗರ್ಭ ಸೇರಿದ ನೋಕಿಯಾ ಬಗ್ಗೆ

ಬೆಂಗಳೂರು, ಸೆ.3: ಸಾಫ್ಟ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ ಕಂಪನಿ ತನ್ನ ಸಹಭಾಗಿಯಾಗಿದ್ದ ಮೊಬೈಲ್ ಫೋನ್ ದಿಗ್ಗಜ ನೋಕಿಯಾ ಕಂಪನಿಯನ್ನು 5.44 ದಶಲಕ್ಷ ಯೂರೋಗೆ ಖರೀದಿಸುವ ಸುದ್ದಿ ಹಬ್ಬುತ್ತಿದ್ದಂತೆ ಸ್ಮಾರ್ಟ್ ಫೋನ್ ಮಾರುಕಟೆಯಲ್ಲಿ ತಲ್ಲಣ ಶುರುವಾಗಿದೆ.

ಸ್ಮಾರ್ಟ್'ಫೋನ್ ಮಾರುಕಟ್ಟೆಯನ್ನು ಜಾಗತಿಕ ಮಟ್ಟದಲ್ಲಿ ಆಳುತ್ತಿರುವ ಆಪಲ್ ಮತ್ತು ಸ್ಯಾಮ್'ಸಂಗ್ ಕಂಪನಿಗೆ ಪ್ರಬಲ ಪೈಪೋಟಿ ಎದುರಾಗಬಹುದು.

ನಿರೀಕ್ಷೆಯಂತೆ ಸಂಪೂರ್ಣ ನೋಕಿಯಾ ಮೊಬೈಲ್ ತಯಾರಿಕಾ ವಿಭಾಗವನ್ನು ಮೈಕ್ರೋಸಾಫ್ಟ್ ಖರೀದಿಸಿರುವುದರಿಂದಾಗಿ ನೋಕಿಯಾ ಸ್ಮಾರ್ಟ್'ಫೋನ್'ಗಳ ಬೇಡಿಕೆ ಅತೀ ಕಡಿಮೆ ಅವಧಿಯಲ್ಲೇ ಗಗನಕ್ಕೇರಲಿರುವ ವಿಶ್ವಾಸ ತಂತ್ರಜ್ಞಾನ ಮಾರುಕಟ್ಟೆ ವಲಯದಲ್ಲಿ ಮೂಡಿಬಂದಿದೆ.

ಇದರಿಂದಾಗಿ ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ, ನೋಕಿಯಾ ಉದ್ಯೋಗಿಗಳಿಗೆ ಮಾತ್ರವಲ್ಲದೆ, ಈ ಎರಡೂ ಕಂಪನಿಗಳಲ್ಲಿ ಷೇರು ಹೂಡಿಕೆ ಮಾಡಿರುವವರಿಗೆ ಲಾಭದಾಯಕವಾಗಿ ಪರಿಣಮಿಸಲಿದೆ ಎಂದು ಅಂದಾಜಿಸಲಾಗಿದೆ. [ನೋಕಿಯಾ-ಮೈಕ್ರೋಸಾಫ್ಟ್ ಖರೀದಿ ವಿವರ ಇಲ್ಲಿ ಓದಿ]

2010ರಲ್ಲಿ ಸಿಇಒ ಹುಡುಕಾಟದಲ್ಲಿದ್ದ ನೋಕಿಯಾ ಕಂಪೆನಿಯಲ್ಲಿ ತನ್ನ ಉದ್ಯೋಗಿಯನ್ನು ಸ್ಥಾಪಿಸಿ ನಂತರ ಇಡೀ ಕಂಪೆನಿಯನ್ನು ತನ್ನ ಮುಷ್ಟಿಗೆ ತೆಗೆದುಕೊಳ್ಳಲು ಮೈಕ್ರೋಸಾಫ್ಟ್ ತಂತ್ರ ರೂಪಿಸಿದೆ. ಮಾಜಿ ಮೈಕ್ರೋಸಾಫ್ಟ್ ಉದ್ಯೋಗಿ ಎಲೋಪ್ ಟ್ರೋಜನ್ ಹಾರ್ಸ್ ರೀತಿ ನೋಕಿಯಾಗೆ ಬಂದು ಕೂತಿದ್ದಾರೆ ಎಂದು ಪತ್ರಿಕೆಗಳಲ್ಲಿ ಬಂದಿದ್ದು ಇದು ನಿಜವಾಗುತ್ತಿದೆ.. ಭಾರತೀಯ ನೆಚ್ಚಿನ ಬ್ರಾಂಡ್ ಗಳಲ್ಲಿ ಒಂದಾದ ನೋಕಿಯಾ ಬಗ್ಗೆ ಒಂದಷ್ಟು ಕುತೂಹಲಕಾರಿ ವಿಷಯಗಳು ಇಲ್ಲಿವೆ ಓದಿ..

ನೋಕಿಯಾ ಟ್ಯೂನ್

ನೋಕಿಯಾ ಟ್ಯೂನ್

ನೋಕಿಯಾ ಟ್ಯೂನ್ 19ನೇ ಶತಮಾನದ ಗಿಟಾರ್ ಸ್ವರವಾಗಿದ್ದು ಗ್ರಾನ್ ವಾಲ್ಸ್ ನೀಡಿದ ಸಂಗೀತಗಾರ ಫ್ರಾನ್ಸಿಸ್ಕೋ ಟರೆಗಾ ಅವರ ಸಂಯೋಜನೆಯಾಗಿದೆ. Grande Valse ಎಂದೇ ಟ್ಯೂನ್ ಹೆಸರಿಸಲಾಗಿತ್ತು. 1998ರಲ್ಲಿ ನೋಕಿಯಾ ಟ್ಯೂನ್ ಎಂದು ಮರು ನಾಮಕರಣ ಮಾಡಲಾಯಿತು

ವಾಣಿಜ್ಯ ಜಿಸಿಎಂ ಕರೆ

ವಾಣಿಜ್ಯ ಜಿಸಿಎಂ ಕರೆ

ವಿಶ್ವದ ಪ್ರಪಥಮ ವಾಣಿಜ್ಯ ಜಿಸಿಎಂ ಕರೆಯನ್ನು 1991ರಲ್ಲಿ ಹೆಲ್ಸಿಂಕಿಯಲ್ಲಿ ಮಾಡಲಾಯಿತು. ಫಿನ್ಲೆಂಡ್ ನ ಪ್ರಧಾನಿ ಹರಿ ಹೊಲೆರಿ ಅವರು ನೋಕಿಯಾ ಜಾಲದಿಂದ ಬಂದ ನೋಕಿಯಾ ಫೋನ್ ಬಳಸಿ ಕರೆ ಮಾಡಿದ್ದರು.

ಡಿಜಿಟಲ್ ಕೆಮೆರಾ

ಡಿಜಿಟಲ್ ಕೆಮೆರಾ

ನೋಕಿಯಾ ಮೊಬೈಲ್ ಫೋನ್ ಅಲ್ಲದೆ ಡಿಜಿಟಲ್ ಕೆಮೆರಾ ಉತ್ಪಾದನೆಯಲ್ಲೂ ಅಗ್ರಗಣ್ಯ ಸಂಸ್ಥೆಯಾಗಿ ಹೆಸರುವಾಸಿಯಾಗಿತ್ತು. ಕೆಮೆರಾವುಳ್ಳ ಮೊಬೈಲ್ ಫೋನ್ ಗಳು ಡಿಜಿಟಲ್ ಕೆಮೆರಾ ಸಂಸ್ಥೆಗಳಿಗೆ ಭಾರಿ ಹೊಡೆತ ನೀಡಿದ್ದು ಸುಳ್ಳಲ್ಲ

ಎಸ್ಎಂಎಸ್ ಸಂದೇಶ

ಎಸ್ಎಂಎಸ್ ಸಂದೇಶ

ನೋಕಿಯಾ ಫೋನ್ ಗಳಲ್ಲಿ ಕೇಳಿಸುವ ಎಸ್ ಎಂಎಸ್(text messages) ಟೋನ್ ನಿಜವಾಗಿಯೂ 'SMS' ನ ಮೋರ್ಸ್ ಕೋಡ್ ಆಗಿದೆ. ಇದೇ ರೀತಿ 'Ascending' SMS ಟೋನ್ Connecting People ವಾಕ್ಯದ ಮೋರ್ಸ್ ಕೋಡ್ ಆಗಿದೆ. 'Standard' SMS ಟೋನ್ 'M'(Message) ನ ಮೋರ್ಸ್ ಕೋಡ್ ಹೊಂದಿದೆ.

ಫಾಂಟ್

ಫಾಂಟ್

ನೋಕಿಯಾ ಕಾರ್ಪೊರೇಟ್ ಫಾಂಟ್(typeface) AgfaMonotype Nokia Sans ಫಾಂಟ್ ಆಗಿದೆ. ಇದನ್ನು ಎರಿಕ್ ಸೈಪ್ಕರ್ ಮನ್ ವಿನ್ಯಾಸಗೊಳಿಸಿದ್ದಾರೆ.

ದುರಾದೃಷ್ಟ ಸಂಖ್ಯೆ

ದುರಾದೃಷ್ಟ ಸಂಖ್ಯೆ

ಏಷ್ಯಾದ ಬಹುತೇಕ ಭಾಗ ಅದರಲ್ಲೂ ಪೂರ್ವ ಹಾಗೂ ಆಗ್ನೇಯ ಏಷ್ಯಾದಲ್ಲಿ ನೋಕಿಯಾ ಹ್ಯಾಂಡ್ ಸೆಟ್ ಮಾಡೆಲ್ ಗಳಲ್ಲಿ 4 ಸಂಖ್ಯೆ ಸರಿಯಾಗಿ ಪ್ರಕಟವಾಗುವುದೇ ಕಮ್ಮಿ. ಈ ಭಾಗದಲ್ಲಿ 4 ಸಂಖ್ಯೆ ದುರಾದೃಷ್ಟದ ಸಂಖ್ಯೆ ಎಂದು ನಂಬಲಾಗಿದೆ

ಜನಪ್ರಿಯ ಬ್ರ್ಯಾಂಡ್

ಜನಪ್ರಿಯ ಬ್ರ್ಯಾಂಡ್

20ನೇ ಶತಮಾನದ ಅತ್ಯಂತ ವಿಶ್ವಸಾರ್ಹನೀಯ ಕಂಪನಿಯಾಗಿ ನೋಕಿಯಾವನ್ನು 2006ರಲ್ಲಿ ಫಾರ್ಚ್ಯೂನ್ಸ್ ಪಟ್ಟಿಯಲ್ಲಿ ಹೆಸರಿಸಲಾಗಿತ್ತು. ಅಮೆರಿಕದ ಹೊರಗಡೆಯ ಒಂದು ಟೆಲಿಕಾಂ ನೆಟ್ವರ್ಕ್ ಸಂವಹನ ಕಂಪನಿಯೊಂದು ಈ ಗೌರವಕ್ಕೆ ಪಾತ್ರವಾಗಿದ್ದು ಇದೇ ಮೊದಲು

ಕರೆ ಟೈಮರ್

ಕರೆ ಟೈಮರ್

ನೋಕಿಯಾ ಹ್ಯಾಂಡ್ ಸೆಟ್ ಕರೆಗಳಲ್ಲೂ ಒಂದು ವಿಶೇಷವಿದೆ. ಬೇರೆ ಫೋನ್ ಗಳಲ್ಲಿ ಕಾಲ್ ಟೈಮರ್ ಕಾಲ್ ಸಂಪರ್ಕಕ್ಕೆ ಸಿಕ್ಕ ತಕ್ಷಣ ಶುರುವಾಗುತ್ತದೆ. ನೋಕಿಯಾದಲ್ಲಿ ಕರೆ ಧ್ವನಿ ಮೂಲಕ ಏರ್ಪಟ್ಟಾಗ ಮಾತ್ರ ಕರೆ ಟೈಮರ್ ಚಾಲನೆಗೊಳ್ಳುತ್ತದೆ. (ನೋಕಿಯಾ 6600 ಮಾತ್ರ ಇದಕ್ಕೆ ಹೊರತಾಗಿದೆ)

ಬದಲಿ ನಾಮ

ಬದಲಿ ನಾಮ

Nokia ಹೆಸರನ್ನು aikon(ಹಿಂಬದಿಯಿಂದ ಓದಿದಾಗ) ಎಂದು ನೋಕಿಯಾ ಬಿಟ್ಟು ಬೇರೆ ಮೊಬೈಲ್ ಬಳಸುವ ಮೊಬೈಲ್ ಸಾಫ್ಟ್ ವೇರ್ ಡೆವೆಲಪರ್ ಗಳು ಕರೆಯುವುದುಂಟು. ನೋಕಿಯಾದ ಸಿಂಬಿಯಾನ್ S60 SDKಯಲ್ಲೂ ಇದೇ ರೀತಿ ಬಳಸಲಾಗಿದೆ.

ನೋಕಿಯಾ ಹೆಸರು

ನೋಕಿಯಾ ಹೆಸರು

Nokianvirta ಎಂಬ ಹೆಸರಿನ ನದಿಯಿಂದ 'ನೋಕಿಯಾ' ಪದವನ್ನು ಮೊಬೈಲ್ ಫೋನ್ ಕಂಪನಿಗೆ ಇಡಲಾಗಿದೆ. ಫಿನಿಷ್ ಪದ ವಿನಾಶಗೊಂಡಿರುವ ಒಂದು ಪ್ರಾಣಿಯನ್ನು ಸೂಚಿಸುತ್ತದೆ.

ಮೊದಲ ರಿಂಗ್ ಟೋನ್

ಮೊದಲ ರಿಂಗ್ ಟೋನ್

ಮೊದಲ ಭಾರತೀಯ ರಿಂಗ್ ಟೋನ್ Nokia 5110 ರಿಂಗ್ ಟೋನ್ ಹಾಡು ಸಾರೇ ಜಹಾನ್ ಸೆ ಅಚ್ಛಾ.

ಮೊದಲ ಫೋನ್

ಮೊದಲ ಫೋನ್

1982 ರಲ್ಲಿ Nokia Mobira Senator ಎಂಬ ಮೊದಲ ಕಾರ್ ಮೊಬೈಲ್ ಬಿಡುಗಡೆ ಮಾಡಿತ್ತು, ಇದರ ತೂಕ 10 ಕೆಜಿ ಇತ್ತು.

ಬಿಲಿಯನ್ ಫೋನ್

ಬಿಲಿಯನ್ ಫೋನ್

ನೋಕಿಯಾದ ಅತ್ಯಂತ ಜನಪ್ರಿಯ ಫೋನ್ 1100 2005ರಲ್ಲಿ ನೈಜೀರಿಯಾದಲ್ಲಿ 1 ಬಿಲಿಯನ್ ಮಾರಾಟದ ಗಡಿ ದಾಟಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+