ಚಿತ್ರಗಳಲ್ಲಿ: ಸೈನಾಗೆ ಐಬಿಎಲ್ ಕಿರೀಟ, ಕೊಹ್ಲಿಗೆ ಅರ್ಜುನ
ಬೆಂಗಳೂರು, ಸೆ.1: ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ನ ಚೊಚ್ಚಲ ಆವೃತ್ತಿಯ ಪ್ರಶಸ್ತಿಯನ್ನು ಸೈನಾ ನೆಹ್ವಾಲ್ ನೇತೃತ್ವದ ಹೈದ್ರಾಬಾದ್ ಹಾಟ್ ಶಾಟ್ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಹೈದ್ರಾಬಾದ್ ತಂಡ ಅವಧ್ ವಾರಿಯರ್ಸ್ ತಂಡವನ್ನ ಮಣಿಸಿ ಚೊಚ್ಚಲ ಐಬಿಎಲ್ ಪ್ರಶಸ್ತಿ ಎತ್ತಿದೆ.
5 ಪಂದ್ಯಗಳಲ್ಲಿ ಹೈದ್ರಾಬಾದ್ ತಂಡ 3ರಲ್ಲಿ ಜಯ ಗಳಿಸಿದೆ. ಮಹಿಳೆಯರ ಸಿಂಗಲ್ಸ್ ನಲ್ಲಿ ಹೈದ್ರಾಬಾದ್ ನ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್, ವಾರಿಯರ್ಸ್ ನ ಪಿ.ಸಿಂಧುರನ್ನ 21-15, 21-7 ಅಂತರದಲ್ಲಿ ಸೋಲಿಸಿ ಮೊದಲ ಜಯ ತಂದುಕೊಟ್ರು. ಅಲ್ಲದೇ ಪುರುಷರ ಸಿಂಗಲ್ಸ್ ನಲ್ಲಿ ಹೈದ್ರಾಬಾದ್ ನ ಅಜಯ್ ಜಯರಾಮ್, ವಾರಿಯರ್ಸ್ ನ ಗುರುದತ್ ರನ್ನ ಮಣಿಸಿದ್ರು. ಆ ಮೂಲಕ ಪ್ರಶಸ್ತಿ ಹಾಗೂ 3.25 ಕೋಟಿ ರೂ. ಬಹುಮಾನ ಮೊತ್ತವನ್ನ ಹೈದ್ರಾಬಾದ್ ತಂಡ ತನ್ನದಾಗಿಸಿಕೊಂಡಿದೆ.
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ರಾಷ್ಟ್ರಪತಿಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರದಾನ ಮಾಡಲಾಗಿದೆ. ಶೂಟರ್ ರಂಜನ್ ಸಿಂಗ್ ಸೋಧಿ ದೇಶದ ಅತ್ಯುನ್ನತ ಕ್ರೀಡಾ ಗೌರವ ‘ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿಗೆ ಭಾಜನರಾದರು. ಕ್ರಿಕೆಟಿಗ ವಿರಾಟ್ ಕೊಹ್ಲಿ ಸಹಿತ 14 ಕ್ರೀಡಾಳುಗಳು ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇನ್ನಷ್ಟು ಚಿತ್ರಗಳು ಇಲ್ಲಿವೆ ನೋಡಿ...

ಐಬಿಎಲ್ ವಿಜೇತರು
ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ನ ಚೊಚ್ಚಲ ಆವೃತ್ತಿಯ ಪ್ರಶಸ್ತಿಯನ್ನು ಸೈನಾ ನೆಹ್ವಾಲ್ ನೇತೃತ್ವದ ಹೈದ್ರಾಬಾದ್ ಹಾಟ್ ಶಾಟ್ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಹೈದ್ರಾಬಾದ್ ತಂಡ ಅವಧ್ ವಾರಿಯರ್ಸ್ ತಂಡವನ್ನ ಮಣಿಸಿ ಚೊಚ್ಚಲ ಐಬಿಎಲ್ ಪ್ರಶಸ್ತಿ ಎತ್ತಿದೆ.

ಸೈನಾ ನೆಹ್ವಾಲ್
ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್, ವಾರಿಯರ್ಸ್ ನ ಪಿ.ಸಿಂಧುರನ್ನ 21-15, 21-7 ಅಂತರದಲ್ಲಿ ಸೋಲಿಸಿದರು

ಸೋತ ಸಿಂಧು
ಮಹಿಳೆಯರ ಸಿಂಗಲ್ಸ್ ನಲ್ಲಿ ಸೈನಾ ನೆಹ್ವಾಲ್ ವಿರುದ್ಧ ಸಿಂಧು ಆಟದ ಭಂಗಿ

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ
ಶೂಟರ್ ರಂಜನ್ ಸಿಂಗ್ ಸೋಧಿ ದೇಶದ ಅತ್ಯುನ್ನತ ಕ್ರೀಡಾ ಗೌರವ ‘ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿಗೆ ಭಾಜನರಾದರು. ಕ್ರಿಕೆಟಿಗ ವಿರಾಟ್ ಕೊಹ್ಲಿ ಸಹಿತ 14 ಕ್ರೀಡಾಳುಗಳು ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಫ್ರೀಡಾ ಪಿಂಟೋ
ಫ್ರೀಡಾ ಪಿಂಟೋ

ಪಾಕಿಸ್ತಾನ ವಿಜಯೋತ್ಸವ
ಜಿಂಬಾಬ್ವೆ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡ ಏಕದಿನ ಪಂದ್ಯಗಳನ್ನು ಗೆದ್ದು ಬೀಗಿದ್ದು ಹೀಗೆ

ಜಂಬೋ ಆಗಮನ
ಮೈಸೂರು ದಸರಾಗೆ ತಯಾರಿಗೊಂಡಿರುವ ಗಜಪಡೆ ಪುರ ಪ್ರವೇಶವಾಗಿದ್ದು ಹೀಗೆ

ಚೆನ್ನೈನಲ್ಲಿ ಮೆಕ್ ಗ್ರಾಥ್
ಚೆನ್ನೈ: ಬುಚ್ಚಿ ಬಾಬು ಆಹ್ವಾನ ಕ್ರಿಕೆಟ್ ಟೂರ್ನಿಮೆಂಟ್ ಅಂತ್ಯದಲ್ಲಿ ಆಸ್ಟ್ರೇಲಿಯಾದ ವೇಗಿ ಗ್ಲೆನ್ ಮೆಕ್ ಗ್ರಾಥ್ ಅವರನ್ನು ಸನ್ಮಾನಿಸಲಾಯಿತು.

ಭೂತನ್ ಅತಿಥಿಗಳು
ನವದೆಹಲಿ :ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಭೂತನ್ ಪ್ರಧಾನಿLyonchhen Tshering Tobgay ಹಾಗೂ ಅವರ ಪತ್ನಿ

ಪುಣೆಯಲ್ಲಿ
ಸ್ವಾಮಿ ವಿವೇಕಾನಂದ ಅವರ 150ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ 4000 ವಿದ್ಯಾರ್ಥಿಗಳು ಡೋಳು ಬಾರಿಸುತ್ತಾ ಹೊಸ ಗಿನ್ನೀಸ್ ದಾಖಲೆ ಬರೆದರು.












Click it and Unblock the Notifications