$ಎದುರು ರೂಪಾಯಿ ಸಾಷ್ಟಾಂಗ: ಚಿನ್ನದ ದರ ನೇರ ನೆಗೆತ

ನವದೆಹಲಿ, ಆಗಸ್ಟ್ 28: ಅಮೆರಿಕನ್ ಡಾಲರ್ ಸುಭದ್ರಗೊಳ್ಳುತ್ತಿದ್ದು ರುಪಾಯಿ ಮೌಲ್ಯ ತರಗೆಲೆಯಂತೆ ಸಾಷ್ಟಾಂಗ ಬಿದ್ದಿದೆ. ಮಂಗಳವಾರ 32,677 ರೂ. ಗೆ ತಲುಪಿದ್ದ 10 ಗ್ರಾಂ ಚಿನ್ನದ ಬೆಲೆ ಇಂದು 35,000 ಗಡಿ ತಲುಪಿದೆ.

ಒಂದು ಡಾಲರಿಗೆ ರೂಪಾಯಿ ಇನ್ನೇನು 70 ರೂ. ಗೆ ಕುಸಿಯುವ ದಾಖಲೆ ಹಂತ ತಲುಪಿದೆ. ಈಗಿನ ಡಾಲರ್ ಬೆಲೆ 69 ರೂಪಾಯಿ ಅಂದರೆ ನಿನ್ನೆಗಿಂತ ಶೇ. 3.5ರಷ್ಟು ಕುಸಿತ.

rupee-value-to-cross-70-mark-gold-rates-surge-to-rs-35000

ಸರಕು ವಾಯಿದಾ ಮಾರುಕಟ್ಟೆಯಲ್ಲಿ (ಎಂಸಿಎಕ್ಸ್) ಅಕ್ಟೋಬರ್ ತಿಂಗಳ ವಾಯಿದಾ ಚಿನ್ನದ ಬೆಲೆ 2000 ರೂ ಏರಿಕೆಯಾಗಿದೆ. ನಿನ್ನೆ 32,677 ರೂ ನಷ್ಟಿದ್ದ ಚಿನ್ನದ ಬೆಲೆ ಇಂದು 34,600 ರೂ. ಗೆ ಏರಿದೆ. ಗಮನಿಸಿ, ಇದು ವಾಯಿದಾ ಮಾರುಕಟ್ಟೆಯಲ್ಲಿನ ಬೆಲೆ. ಆಭರಣ ಚಿನ್ನದ ಬೆಲೆಯಲ್ಲ.

ಅಂದಹಾಗೆ ಜುಲೈನಿಂದ ಚಿನ್ನದ ಆಮದು ಬುತೇಕ ಸ್ಥಗಿತಗೊಂಡಿದ್ದು, ವಾಯಿದಾ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 35 ಸಾವಿರ ತಲುಪುತ್ತಿರುವುದರಿಂದ ಮತ್ತು ರೂಪಾಯಿ ಎಪ್ಪತ್ತರ ಆಳಕ್ಕೆ ಕುಸಿದಿರುವುದರಿಂದ ಆಭರಣ ಚಿನ್ನದ ಬೆಲೆಯೂ ಹೆಚ್ಚಾಗಲಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಧಾರಣೆ ಆಗಸ್ಟ್ 28 ರಂದು ಹೀಗಿತ್ತು:
Bangalore - Rs 33,684
Chennai - Rs
Delhi - Rs 32,000
Hyderabad - Rs
Kolkata - 33,700
Mumbai - Rs 32,730

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಧಾರಣೆ ಆಗಸ್ಟ್ 27ರಂದು ಹೀಗಿತ್ತು:
Bangalore - Rs 30,150
Chennai - Rs 30,450
Delhi - Rs 30,460
Hyderabad - Rs 30,200
Kolkata - 30,330
Mumbai - Rs 30,130

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+