ಆಟದ ನೆಪದಲ್ಲಿ ಬಾಲಕನ ಮೇಲೆ ಬಾಲಕಿ ರೇಪ್!

ಆದರೆ, ಆಸ್ಟ್ರೇಲಿಯಾದಲ್ಲಿ ಬಾಲಕಿಯೊಬ್ಬಳು ಬಾಲಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಮೇಲ್ಬೋರ್ನ್ ನ 10 ವರ್ಷದ ಬಾಲಕಿಯೊಬ್ಬಳು ನೆರೆಮನೆಯ 4 ವರ್ಷದ ಬಾಲಕನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು, ಆಕೆ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು News.com.au ವರದಿ ಮಾಡಿದೆ.
KRIV-TV ಮೊದಲಿಗೆ ಸುದ್ದಿ ಪ್ರಸಾರ ಮಾಡಿ, ಆಶ್ಲ್ಯೆ ಎಂಬ ಬಾಲಕಿ ತನ್ನ ನೆರಮನೆಯ ಹುಡುಗ ಹುಡುಗಿಯರೊಂದಿಗೆ ಕೆಲ ತಿಂಗಳ ಹಿಂದೆ ಆಟವಾಡುತ್ತಿದ್ದಳು. ಒಂದೇ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ನಲ್ಲಿದ್ದ ಈ ಮಕ್ಕಳು ನಿತ್ಯ ಒಟ್ಟಿಗೆ ಕಲೆತು ಆಟವಾಡುತ್ತಿದ್ದರು. ಹೀಗಾಗಿ ಪೋಷಕರು ಸಹ ಇವರ ಬಗ್ಗೆ ಆತಂಕವಿಲ್ಲದೆ ಹೆಚ್ಚಿನ ನಿಗಾ ವಹಿಸಿರಲಿಲ್ಲ.
ಆದರೆ, 4 ವರ್ಷದ ಬಾಲಕನೊಬ್ಬ ತನ್ನ ತಾಯಿಯ ಬಳಿ ಆಶ್ಲ್ಯೆ ಇಲ್ಲಿ ಇಲ್ಲಿ ಮುಟ್ಟಿದಳು ಹೀಗೆ ಮಾಡು ಹಾಗೆ ಮಾಡು ಎಂದಳು ಎಂದು ತೊದಲುತ್ತಾ ವಿವರಿಸಿದ್ದಾನೆ. ಇದರಿಂದ ಬಾಲಕನ ತಾಯಿ ಕಂಗಾಲಾಗಿದ್ದಾರೆ. ನಂತರ ಮರುದಿನ ಅದೇ ಸಮಯಕ್ಕೆ ಆಶ್ಲ್ಯೆ 'ಡಾಕ್ಟರ್ ಆಟ' ಆಡುವಾಗ ಬಾಲಕನನ್ನು ಲೈಂಗಿಕವಾಗಿ ಬಳಸಿಕೊಳ್ಳುವ ದೃಶ್ಯವನ್ನು ಕಂಡ ಪೋಷಕರು ಹೌಹಾರಿದ್ದಾರೆ.
ತಕ್ಷಣವೇ ಪೊಲೀಸರಿಗೆ ಬಾಲಕನ ಪೋಷಕರು ದೂರು ನೀಡಿದ್ದಾರೆ. ಹ್ಯಾರೀಸ್ ಕೌಂಟಿ ಬಾಲಾಪರಾಧಿಗಳ ಕೇಂದ್ರದಲ್ಲಿ ನಾಲ್ಕುದಿನ ಬಾಲಕಿಯನ್ನು ಇರಿಸಿಕೊಂಡು ಕೌನ್ಸಲಿಂಗ್ ನಡೆಸಿ ಕಳಿಸಲಾಗಿದೆ.
ನಂತರ ಹೌಸ್ಟನ್ ಸೆಕ್ಸ್ ಕ್ರೈಂ ತನಿಖಾಧಿಕಾರಿಗಳು ಸುಮಾರು 45 ನಿಮಿಷಗಳ ಕಾಲ ಬಾಲಕಿಯನ್ನು ಕೂರಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಬಾಲಕಿ ಆಶ್ಲ್ಯೆ ಜತೆ ಆಕೆ ತಾಯಿಯನ್ನು ಕೂರಲು ಬಿಟ್ಟಿಲ್ಲ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಆಶ್ಲ್ಯೆ ತಾಯಿ ಇದೊಂದು 'ಕರಾಳ ಕನಸು' ಎಂದಿದ್ದಾರೆ. ಆಶ್ಲ್ಯೆ ವಿಚಾರಣೆ ಮುಗಿದಿದ್ದು, ಅತ್ಯಾಚಾರ ಆರೋಪಿಯಾಗಿ ಆಕ್ಟೋಬರ್ ನಲ್ಲಿ ಆಶ್ಲ್ಯೆ ವಿಚಾರಣೆ ಎದುರಿಸಬೇಕಾಗಿದೆ












Click it and Unblock the Notifications