ಮೈಸೂರು ಜೂ ಪ್ರವೇಶ ದರ 10 ರೂ. ಹೆಚ್ಚಳ

zoo
ಮೈಸೂರು, ಆ.27 : ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರವೇಶದರವನ್ನು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಮೃಗಾಲಯದ ಪ್ರವೇಶ ದರ 10 ರೂ. ಹೆಚ್ಚಳವಾಗಲಿದ್ದು, ಸೆ.1ರಿಂದ ನೂತನ ದರ ಜಾರಿಗೆ ಬರಲಿದೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರವು ಆ.17ರಂದು ನಡೆಸಿದ ಸಭೆಯಲ್ಲಿ ಚಾಮರಾಜೇಂದ್ರ ಮೃಗಾಲಯ ಪ್ರವೇಶ ದರವನ್ನು 40 ರೂ.ಗಳಿಂದ 50 ರೂ.ಗೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಸಭೆ ಇದಕ್ಕೆ ಅನುಮೋದನೆ ನೀಡಿದ್ದು, ದರ 10 ರೂ. ಹೆಚ್ಚಳವಾಗಲಿದೆ.

ಮೃಗಾಲಯದ ಸಿಬ್ಬಂದಿ ವೆಚ್ಚ, ಪ್ರಾಣಿಗಳ ಆಹಾರ ಹಾಗೂ ಇನ್ನಿತರ ಖರ್ಚು ವೆಚ್ಚಗಳ ನಿರ್ವಹಣೆ ಶೇ.50ಕ್ಕಿಂತ ಅಧಿಕವಾಗಿದ್ದು, ಆದ್ದರಿಂದ ದರ ಹೆಚ್ಚಳ ಮಾಡಲಾಗುತ್ತಿದೆ ಎಂದು ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ.

ಪರಿಷ್ಕೃತ ಪ್ರವೇಶ ದರ ಸೆ.1ರಿಂದ ಜಾರಿಗೆ ಬರಲಿದೆ. ಆದರೆ, ಮಕ್ಕಳ ಪ್ರವೇಶ ಶುಲ್ಕದಲ್ಲಿ ರೂ. 20 ಇದ್ದು ಅದರಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ದರ ಹೆಚ್ಚಳ ವಯಸ್ಕರಿಗೆ ಮಾತ್ರ ಅನ್ವಯಿಸಲಿದೆ ಎಂದು ಮೃಗಾಲಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಬಿ.ಪಿ.ರವಿ ಹೇಳಿದ್ದಾರೆ.(ಮೈಸೂರು ಜೂ)

ವಿಶ್ವವಿಖ್ಯಾತ ಮೈಸೂರು ದಸರಾ ಆರಂಭವಾಗುವ ಹೊತ್ತಿನಲ್ಲೇ ಮೃಗಾಲಯದ ಪ್ರವೇಶ ಶುಲ್ಕ ಹೆಚ್ಚಾಗಿದ್ದು, ದಸರಾ ನೋಡಲು ಬರುವ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡುತ್ತಾರೆ. ಇದರಿಂದ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ. (ಚಂದ್ರಶೇಖರ ಕಂಬಾರರಿಂದ ದಸರಾ ಉದ್ಘಾಟನೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+