ಕಾಫಿ ಕಪ್ಪಿಂದ ಪಾಪಿ ಗಂಡನ ಮುಖ ಜಜ್ಜಿ ಜಜ್ಜಿ ಕೊಂದಳು

Yokohama National Universityಯಲ್ಲಿ ಪ್ರೊಫೆಸರ್ ಆಗಿದ್ದ 70 ವರ್ಷದ ಯಾಸೋ ಹಿರೋಸೆ ಸಾವಿಗೀಡಾದ ಪತಿರಾಯ. ಭಂಡಗಂಡ ಯಾಸೋ ಹಿರೋಸೆನನ್ನು ಮೂತಿಮುಖ ನೋಡದೆ ಕಾಪಿ ಕಪ್ಪಿನಲ್ಲಿ ಹತ್ತಾರು ಬಾರಿ ಗುದ್ದಿ ಸಾಯಿಸಿದೆ ಎಂದು 61 ವರ್ಷದ ಹೆಂಡತಿ ಪೊಲೀಸರಿಗೆ ತಿಳಿಸಿದ್ದಾಳೆ.
ಅವನು ನನಗೆ ಮೋಸ ಮಾಡುತ್ತಿದ್ದಾನೆ ಎಂಬುದು ತಿಳಿಯಿತು. ಅದೂ ನಾನು ದ್ವೇಷಿಸುವ ಮಹಿಳೆಯ ಜತೆ ಅವನು ಸಂಬಂಧವಿಟ್ಟುಕೊಂಡಿದ್ದ ಎಂಬುದು ತಿಳಿದು ಪಿತ್ತ ನೆತ್ತಿಗೇರಿತು. ಹಾಗಾಗಿ ಅವನನ್ನು ಮುಗಿಸಿಬಿಟ್ಟೆ ಎಂದು ಯಾಸೋ ಹಿರೋಸೆಯ ಪತ್ನಿ Emiko Hirose ತಿಳಿಸಿದ್ದಾಳೆ.
ಟೋಕಿಯೋದಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ತೀವ್ರ ಪೆಟ್ಟು ತಿಂದ ಯಾಸೋ ಹಿರೋಸೆನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಆತ ಅಸುನೀಗಿದ ಎಂದು ಪೊಲೀಸರು ತಿಳಿಸಿದ್ದಾರೆ. ಹಿರೋಸೆಯ ಪತ್ನಿ Emikoಳನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications