ಅಪ್ರಾಪ್ತೆ ಜೊತೆ ಒಪ್ಪಿಗೆಯ ಲೈಂಗಿಕತೆ ಕ್ರೈಂ ಅಲ್ಲ!

ನವದೆಹಲಿ, ಆ.26 : 18 ವರ್ಷದೊಳಗಿನ ಹುಡುಗಿ ಜೊತೆ ಸಮ್ಮತಿ ಪಡೆದು ನಡೆಸುವ ಸೆಕ್ಸ್ ಅಪರಾಧವಲ್ಲ ಎಂದು ದೆಹಲಿ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಪೊಕ್ಸೊ ಕಾನೂನಿನ ಅನ್ವಯ ಸಮ್ಮತಿಯ ಸೆಕ್ಸ್ ಅಪರಾಧವಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಅಪ್ರಾಪ್ತರ ಜೊತೆ ಯಾವುದೇ ರೀತಿಯ ಲೈಂಗಿಕ ಕ್ರಿಯೆ ನಡೆಸುವುದನ್ನು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (POSCO) ಕಾನೂನಿನ ಅನ್ವಯ ನಿಷೇಧ ಮಾಡಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

sex

ಅಪ್ರಾಪ್ತರ ಜೊತೆಗೆ ಲೈಂಗಿಕ ಕ್ರಿಯೆ ನಡೆಸುವುದನ್ನ ಪೊಕ್ಸೋ ಕಾಯ್ದೆಯಡಿ ನಿಷೇಧ ಮಾಡಬೇಕೆಂದು ದೆಹಲಿ ಪೊಲೀಸರು ಮತ್ತು ದೆಹಲಿಯ ಮಹಿಳಾ ಆಯೋಗ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದವು. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮನವಿಯನ್ನು ತಳ್ಳಿ ಹಾಕಿದೆ.

22 ವರ್ಷದ ಯುವಕನೊಬ್ಬ 15 ವರ್ಷದ ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದ . ಬಳಿಕ ಆತನೇ ಅವಳನ್ನು ವಿವಾಹವಾಗಿದ್ದ. ಇದರಿಂದ ಆತನನ್ನು ದೋಷ ಮುಕ್ತಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ POSCO ಕಾನೂನಿನ ಉಲ್ಲೇಖ ಮಾಡಲಾಗಿತ್ತು ಮತ್ತು ಲೈಂಗಿಕ ಕ್ರಿಯೆ ನಡೆಸುವುದನ್ನು ಅಪರಾಧ ಎಂದು ಪರಿಗಣಿಸುವಂತೆ ಕೋರಲಾಗಿತ್ತು.

ಹಲ್ಲೆ, ಮುಂತಾದ ಯಾವುದೇ ಒತ್ತಡಗಳಿಗೆ ಒಳಗಾಗದೆ, ಹುಡುಗಿಯ ಸಮ್ಮತಿ ಪಡೆದು ನಡೆಸುವ ಲೈಂಗಿಕ ಕ್ರಿಯೆ ಅಪರಾಧವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್ ದೆಹಲಿ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+