ಬೆಂಗಳೂರು ಗ್ರಾ: ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು
ರಾಮನಗರ, ಆಗಸ್ಟ್ 24: ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆ ತಾಜಾ ಫಲಿತಾಂಶ-ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸುರೇಶ್ ಗೆ ಗೆಲುವು. 1,36,996 ಮತಗಳ ಅಂತರದಿಂದ ಸುರೇಶ್ ಜಯ ದಾಖಲಿಸಿದ್ದಾರೆ.
ಡಿಕೆ ಸುರೇಶ್ (ಕಾಂಗ್ರೆಸ್): 5,78,696 ಮತ
ಅನಿತಾ ಕುಮಾರಸ್ವಾಮಿ (ಜೆಡಿಎಸ್): 4,41,600 ಮತ
11 AM: ಸುರೇಶ್ ಗೆ ಭರ್ಜರಿ ಜಯ; ದೊಡ್ಡಗೌಡ್ರ ಕುಟುಂಬಕ್ಕೆ ಹೀನಾಯ ಸೋಲು. ಜತೆಗೆ ಬಿಜೆಪಿಗೆ ಮುಖಭಂಗ. ಗೆಲುವಿನ ನಗೆ ಬೀರಿದ ಸುರೇಶ್, ತಮ್ಮ ಅಣ್ಣ ಶಿವಕುಮಾರ್ ಮತ್ತು ಮತದಾರರಿಗೆ ಜೈ ಜೈ ಎಂದಿದ್ದಾರೆ.
10.55 AM: ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರ. ಗೆಲುವಿನ ವಾಸನೆ ಕಂಡಿರುವ ಸುರೇಶ್ ಅವರು ತಮ್ಮ ಅಣ್ಣ ಶಿವಕುಮಾರ್ ಮತ್ತು ಮತದಾರರಿಗೆ ಜೈ ಜೈ ಎಂದಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು ರಾಮನಗರ, ಚನ್ನಪಟ್ಟಣ, ಕುಣಿಗಲ್, ಮಾಗಡಿ, ಕನಕಪುರ, ಆನೇಕಲ್, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿನಗರ.
10.30 AM: ಕಾಂಗ್ರೆಸ್ ಸತತ ಮುನ್ನಡೆ ಕಾಯ್ದುಕೊಂಡಿದ್ದು, ಡಿಕೆ ಸುರೇಶ್ ಅವರು 3,12,889 ಮತಗಳೊಂದಿಗೆ ಎಂಟನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದಾರೆ. ಇನ್ನು ಜೆಡಿಎಸ್ ಅನಿತಾ ಕುಮಾರಸ್ವಾಮಿ ಅವರು 2,70,028 ಮತಗಳನ್ನು ಪಡೆದುಕೊಂಡಿದ್ದಾರೆ.
10-25 AM: 7ನೇ ಸುತ್ತು ಆರಂಭ- 54 ಸಾವಿರ ಮತಗಳ ಅಂತರದಿಂದ ಸುರೇಶ್ ಭಾರಿ ಮುನ್ನಡೆ.
10.10 AM: ಸುರೇಶ್ 3,12,000 ಮತ, ಅನಿತಾಗೆ 2,70,000 ಮತ- ಡಿಕೆಶಿ ಸೋದರರು ಗೆಲುವಿನತ್ತ- ಅನಿತಾಗೆ ಸೋಲಿನ ಸರಮಾಲೆ!
9.45 AM: ಜೆಡಿಎಸ್ ಶಾಸಕರ ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ ಸ್ಥಗಿತ-ಇದರಿಂದಲೇ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ ಎಂಬ ಆರೋಪ. ಒಟ್ಟು ಗೊಂದಲದ ವಾತಾವಾರಣ.
9.35 AM: ಕಾಂಗ್ರೆಸ್ಸಿನ ಸುರೇಶ್ ಗೆ 95,000 ಮತ, ಅನಿತಾ ಕುಮಾರಸ್ವಾಮಿಗೆ 75,000 ಮತ. ಇದರೊಂದಿಗೆ ಗೌಡರ ಕುಟುಂಬದ ವಿರುದ್ಧ ತೊಡೆತಟ್ಟಿದ್ದ ಡಿಕೆ ಶಿವಕುಮಾರ್ ಅವರು ಗೆಲುವಿನ ನಗೆ ಬೀರುತ್ತಿದ್ದಾರೆ.
9.25 AM: ಸುರೇಶ್ 49 ಸಾವಿರ ಮತ ಮುನ್ನಡೆ; ಅನಿತಾ ಕುಮಾರಸ್ವಾಮಿ 36 ಸಾವಿರ ಮತ ಹಿನ್ನಡೆ. ಆರಂಭಿಕ ಫಲಿತಾಂಶ ನೋಡಿದರೆ ಶಿವಾಜಿನಗರದ ಗೋವಿಂದರಾಜು ಅವರ ಮೂಷಿಕ ಮಹಾರಾಜ ನುಡಿದಿರುವ ಭವಿಷ್ಯ ನಿಜವಾಗುವ ಲಕ್ಷಣಗಳಿವೆ.
9.20 AM- ಸುರೇಶ್ ಅವರು 6 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಸುರೇಶ್ 22,600 ಮತ್ತು ಅನಿತಾ 16,000 ಮತಗಳನ್ನು ಗಳಿಸಿದ್ದಾರೆ.
ಮೂರನೆಯ ಸುತ್ತಿನ ಮತ ಎಣಿಕೆ ಆರಂಭವಾಗಿದ್ದು ಕಾಂಗೈನ ಸುರೇಶ್ ಅವರು 1600 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಅನಿತಾ ಹಿಂದೆ ಬಿದ್ದಿದ್ದಾರೆ.
ಮೂರು ವಿಧಾನಸಭಾ ಕ್ಷೇತಗಳಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದ್ದರೆ ಕಾಂಗ್ರೆಸ್ ರಾಜರಾಜೇಶ್ವರಿ ನಗರ, ಆನೇಕಲ್ ಮತ್ತು ಕನಕಪುರದಲ್ಲಿ ಮುನ್ನಡೆಯುತ್ತಿದೆ. ಒಟ್ಟಾರೆಯಾಗಿ ಕಾಂಗ್ರೆಸ್ಸಿನ ಸುರೇಶ್, ಅನಿತಾ ಅವರಿಗಿಂತ ಮುಂದಿದ್ದಾರೆ. neck to neck fight ಕಂಡುಬರುತ್ತಿದೆ.
ಹಿಂದಿನ ಸುದ್ದಿ: ದೊಡ್ಡಗೌಡರ ಕುಟುಂಬದ ಕುಡಿ ಎಚ್ ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದಾಗಿ ತೆರವಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭೆ ಸ್ಥಾನಕ್ಕೆ ಮೂರು ದಿನಗಳ ಹಿಂದೆ ನಡೆದಿದ್ದ ಉಪಚುನಾವಣೆಯ ಫಲಿತಾಂಶ ವಿವರ:
ಜೆಡಿಎಸ್ ಪಕ್ಷ ಸ್ಥಾನವನ್ನು ಉಳಿಸಿಕೊಳ್ಳುತ್ತದಾ ಅಥವಾ ಕಾಂಗ್ರೆಸ್ ಅಧಿಪತ್ಯ ಸ್ಥಾಪಿಸುತ್ತದಾ ಎಂಬುದೇ ಇಂದಿನ ಕುತೂಹಲ. ಒಟ್ಟು 30 ಸುತ್ತುಗಳಲ್ಲಿ ಮತ ಎಣಿಕೆ ಮಾಡಲಾಗುವುದು.
ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಮತ್ತು ಕಾಂಗ್ರೆಸ್ ಅಭ್ಯರ್ಥಿ, ಡಿಕೆ ಶಿವಕುಮಾರ್ ಅವರ ತಮ್ಮ ಡಿಕೆ ಸುರೇಶ್ ನಡುವಣ ನೇರ ಕಾಳಗ ಇದಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದರೆ ಬಿಜೆಪಿಗೆ ನಾಮ್ ಕಾ ವಾಸ್ತೆಯಾದರೂ ಹೋರಾಡುವ ಛಾತಿ ತೋರಿಲ್ಲ. ಬಿಜೆಪಿ ಅಭ್ಯರ್ಥಿಯನ್ನು ನಿಲ್ಲಿಸುವ ಗೋಜಿಗೂ ಹೋಗಿಲ್ಲ.
ಜೆಡಿ ಎಸ್ಸಿಗೆ ಅಂಗೈ ತೋರಿಸಿ ಅವಲಕ್ಷಣ ಎನಿಸಿಕೊಂಡ ಬಿಜೆಪಿ:
ಆದರೂ ಬಿಜೆಪಿಯ ಬೆಂಬಲ/ ನಿಷ್ಠೆ ಜೆಡಿಎಸ್ ಪಾಲಾಗಿದೆ. ಬಿಜೆಪಿಯ ಈ ನೀತಿ ಬಗ್ಗೆ ಜೆಡಿಎಸ್ ಶಾಸಕ ವೈಎಸ್ ವಿ ದತ್ತಾ ಅವರು ಮಾರ್ಮಿಕವಾಗಿ ಹೇಳಿರುವುದು ಇಲ್ಲಿ ಉಲ್ಲೇಖಾರ್ಹ: ಬಿಜೆಪಿ ಜತೆಗಿನ ಮೈತ್ರಿ ಈ ಎರಡು ಉಪಚುನಾವಣೆಗೆ ಸೀಮಿತವೇ ಹೊರತು, ಅದು ಶಾಶ್ವತವಲ್ಲ. ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ನೆಲೆ ಇಲ್ಲ. ಅಂಗೈ ತೋರಿಸಿ ಅವಲಕ್ಷಣ ಹೇಳಿಸಿಕೊಳ್ಳುವುದು ಏಕೆ ಎಂಬ ಉದ್ದೇಶದೊಂದಿಗೆ ಬಿಜೆಪಿ ನಾಯಕರು ನಮಗೆ ನೆರವು ನೀಡಿದ್ದಾರಷ್ಟೆ.- Any commnets !?












Click it and Unblock the Notifications