ಅನಿತಾ, ರಮ್ಯಾ ಭವಿಷ್ಯ ಹೇಳಿದ ಶಿವಾಜಿನಗರದ ಇಲಿ!
ಬೆಂಗಳೂರು, ಆಗಸ್ಟ್ 2: ಶಿವಾಜಿನಗರದಲ್ಲಿ ಜ್ಯೋತಿಷಿಯೊಬ್ಬರು ಜನರ ಭವಿಷ್ಯ ಹೇಳಲು ಇಲಿಯೊಂದನ್ನು ಸಾಕಿಕೊಂಡಿದ್ದಾರೆಂದೂ, ಜನ ಮುಗಿಬಿದ್ದು ಇಲಿ ಶಾಸ್ತ್ರ ಕೇಳುತ್ತಿದ್ದಾರೆಂದು 20 ದಿನಗಳ ಹಿಂದೆ ಓದಿ ತಿಳಿದುಕೊಂಡಿರಿ.
ಶಿವಾಜಿನಗರ ಬಿಟಿಎಸ್ ಬಸ್ ಸ್ಟಾಂಡ್ ಸಮೀಪ ಬೀದಿ ಬದಿ ತಮ್ಮ ಮೂಷಿಕನಿಗೆ ಕಡಲೆ ಚೆರ್ಪು ತಿನ್ನಿಸುತ್ತಾ ಭವಿಷ್ಯ ನುಡಿಯುವ 68 ವರ್ಷದ ಗೋವಿಂದರಾಜು ಅವರು ಹಾಲಿ ಲೋಕಸಭಾ ಉಪಚುನಾವಣೆಯ ಫಲಿತಾಂಶದ ಬಗ್ಗೆಯೂ ತಮ್ಮ 'ಗಣೇಶ'ನಿಂದ ಭವಿಷ್ಯ ಹೇಳಿಸಿದ್ದಾರೆ.
ಗಮನಿಸಿ- ಇದು ಮೂಷಿಕ ನುಡಿದಿರುವ ಭವಿಷ್ಯ. ಇದರ ಸತ್ಯಾಸತ್ಯತೆ ಆ ಗಣೇಶನಿಗೇ ಸಲ್ಲುತ್ತದೆ. ಅಧಿಕೃತ ಫಲಿತಾಂಶಕ್ಕಾಗಿ ನೀವು ಇನ್ನೂ 48 ಗಂಟೆ ಕಾಯಬೇಕು (ಶನಿವಾರದವರೆಗೂ).

ರಮ್ಯಾ, ಅನಿತಾ, ಸುರೇಶ್, ಪುಟ್ಟರಾಜು: ಬೆಟ್ಟಿಂಗ್ ಶುರು
ಚುನಾವಣೆ ಬಳಿಕ ಇದೀಗ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಯಾರು ಎಂಬುದರ ಕುರಿತು ಭಾರಿ ಬೆಟ್ಟಿಂಗ್ ಶುರುವಾಗಿದೆ. ರಮ್ಯಾ, ಅನಿತಾ ಕುಮಾರಸ್ವಾಮಿ, ಡಿಕೆ ಸುರೇಶ್ ಮತ್ತು ಸಿಎಸ್ ಪುಟ್ಟರಾಜು ನಡುವಣ ನೇರ ಕದನ ಇದಾಗಿದೆ. ಹಾಗಾಗಿ ಇವರುಗಳ ಹೆಸರಿನಲ್ಲಿ ಜನ ಬಾಜಿ ಕಟ್ಟಿ ಅಧಿಕೃತ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.

ಗೋವಿಂದರಾಜು 'ಗಣೇಶ' ನುಡಿದಿರುವ ಭವಿಷ್ಯ
ಇದೇ ವೇಳೆ, ನಿನ್ನೆ ಲೋಕಸಭಾ ಉಪಚುನಾವಣೆ ಮಗಿಯುತ್ತಿದ್ದಂತೆ ಜನಶ್ರೀ ನ್ಯೂಸ್ ಚಾನೆಲ್ಲಿನವರು ಸದರಿ ಮೂಷಿಕ ಮಹಾರಾಜನಿಂದ ಚುನಾವಣೆಯ ಫಲಿತಾಂಶವೇನು ಎಂದು ಕೇಳಿದ್ದಾರೆ. ಅದಕ್ಕೆ ಗೋವಿಂದರಾಜುವಿನ 'ಗಣೇಶ' ನುಡಿದಿರುವ ಭವಿಷ್ಯ ಹೀಗಿದೆ:

ಅನಿತಾ ಕುಮಾರಸ್ವಾಮಿಗೆ ಅಪಜಯ
ಅನಿತಾ ಕುಮಾರಸ್ವಾಮಿ ಅವರದ್ದು ಮೇಷ ರಾಶಿ. ಅವರ ಕುಂಡಲಿ ಪ್ರಭಾವ ವ್ಯತಿರಿಕ್ತವಾಗಿದೆ. ಆಕೆಗೆ ಗ್ರಹಗತಿ ಚೆನ್ನಾಗಿಲ್ಲ. ಹಾಗಾಗಿ ಅನಿತಾ ಕುಮಾರಸ್ವಾಮಿ ಸೋಲು ಖಚಿತ.

ದಿವ್ಯಸ್ಪಂದನಗೆ ದಿವ್ಯ ಗೆಲುವು
ರಮ್ಯಾದು ತುಲಾ ರಾಶಿ. ಆಕೆಯ ಗ್ರಹಗತಿಗಳು ಉತ್ತಮವಾಗಿವೆ. ಗುರು ಬಲಗಳು ಜೋರಾಗಿವೆ. ಹಾಗಾಗಿ ರಮ್ಯಾ ಗೆಲ್ಲುವುದು ಖಚಿತ












Click it and Unblock the Notifications