Get Updates
Get notified of breaking news, exclusive insights, and must-see stories!

ವಿಧಾನಸೌಧದಲ್ಲಿ ಬ್ಲೂ ಫಿಲಂ ವೀಕ್ಷಣೆ: ಸಿಎಂ ಪ್ರತಿಕ್ರಿಯೆ

ಬೆಂಗಳೂರು, ಆಗಸ್ಟ್ 22: ಯಥಾ ರಾಜಾ ತಥಾ ಮಂತ್ರಿ! ಇದು ಕರ್ನಾಟಕದ ಅಧಿಕಾರ ಕೇಂದ್ರವಾದ ವಿಧಾನಸೌಧದಲ್ಲಿರುವ ಒಂದಷ್ಟು ನೌಕರರನ್ನು ಕುರಿತು ಹೇಳಬಹುದಾದ ಮಾತು.

ಏನಪ್ಪಾ ಅಂದರೆ ಈ ಹಿಂದಿನ ಸರಕಾರದಲ್ಲಿ ಸಚಿವರು/ ಶಾಸಕರು ಆಗಿದ್ದ ಕೆಲವರು ವಿಧಾನಸೌಧದ ಒಳಗೂ/ ಹೊರಗೂ ಮಾಡಬಾರದ ಅನಾಚರವನ್ನೆಲ್ಲ ಮಾಡಿದ್ದರು. ಕೆಲವರಂತೂ ಬಿಡಿ ಸಾಕ್ಷಾತ್ ವಿಧಾನಸೌಧದಲ್ಲೇ ತಮ್ಮ ಮೊಬೈಲಿನಲ್ಲಿ ಅಶ್ಲೀಲ ವಿಡಿಯೋಗಳನ್ನೇ ನೋಡಿದ್ದರು. ಕೊನೆಗೆ ಅದರಿಂದ ಅಧಿಕಾರವನ್ನೂ ಕಳೆದುಕೊಂಡಿದ್ದರು.

ಈ ಮಧ್ಯೆ, ವಿಧಾನಸೌಧದಲ್ಲಿ ಅಧಿಕಾರಿಗಳು ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದಾರೆ ಎಂದು ಸಿಒಡಿ/ಸಿಬಿಐ ಮೂಲಗಳನ್ನು ಉಲ್ಲೇಖಿಸಿ ಬಿತ್ತರಗೊಂಡ ಮಾಧ್ಯಮ ವರದಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕೈಗೊಳ್ಳುವುವುದಾಗಿ ತಿಳಿಸಿದ್ದಾರೆ. ವಿಧಾನಸೌಧ ಸೇರಿದಂತೆ ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಅಶ್ಲೀಲ ಸರಕನ್ನು ನೋಡುತ್ತಾರೆ ಎಂಬ ವರದಿಯ ಸಮಗ್ರ ಚಿತ್ರಣವನ್ನು ಸ್ಲೈಡುಗಳಲ್ಲಿ ನೋಡಿ...

ಕಚೇರಿಗಳಲ್ಲಿ ಅಶ್ಲೀಲ ಸರಕು ವೀಕ್ಷಿಸುವ ಸರಕಾರಿ ಸಿಬ್ಬಂದಿ

ಕಚೇರಿಗಳಲ್ಲಿ ಅಶ್ಲೀಲ ಸರಕು ವೀಕ್ಷಿಸುವ ಸರಕಾರಿ ಸಿಬ್ಬಂದಿ

ಸೋ, ಯಥಾ ರಾಜ ಅಂದರೆ - ಜನರನ್ನು ಆಳುವ ಮಂದಿಯೆ ಹೀಗೆ 'ಮಾದರಿ' ಆಗಿರುವಾಗ ಅವರ ಅಧೀನದಲ್ಲಿ ಕೆಲಸ ಮಾಡುವವರು ನಾವೇನು ಪಾಪ ಮಾಡಿದ್ದೇವೆ. ನಾವ್ಯಾಕೆ ಅಂತ ಅವಕಾಶದಿಂದ ವಂಚಿತಗಾಬೇಕು ಎಂದು ಪ್ರಶ್ನಿಸಿಕೊಂಡು ತಮ್ಮೆದುರಿಗಿರುವ ಕಂಪ್ಯೂಟರುಗಳಲ್ಲಿ ಯಾವುದೇ ಎಗ್ಗುಸಿಗ್ಗಿಲ್ಲದೆ ಅಶ್ಲೀಲ ಸರಕನ್ನು ಧಾರಾಳವಾಗಿ ನೋಡುತ್ತಿರುತ್ತಾರಂತೆ.

ಸರಕಾರಿ ಕಚೇರಿಗಳು ಬಿಸಿಬಿಸಿ ಬಿಜಿ

ಸರಕಾರಿ ಕಚೇರಿಗಳು ಬಿಸಿಬಿಸಿ ಬಿಜಿ

ದೂರದೂರುಗಳಿಂದ ಬಂದ ಬಡಪಾಯಿ ಜನಕ್ಕೆ 'ತಾವು ಬಿಜಿಯಾಗಿದ್ದೇವೆ' ಎಂದು ಉಪಾಯವಾಗಿ ಸಾಗಹಾಕುವ ಕೆಲ ಮಂದಿ ಬಿಜಿಯಾಗಿದ್ದುಕೊಂಡು ಸರಕಾರಿ ಕಚೇರಿಯಲ್ಲಿ ಮಾಡುವುದೇನೆಂದರೆ ಅಶ್ಲೀಲ ಚಿತ್ರಗಳನ್ನು ನೋಡಿ ತೃಪ್ತಿಪಡುವುದು.

ಹೆಚ್ಚಾಗಿ ಅಧಿಕಾರಿಗಳೆ ಬ್ಲೂ ಫಿಲಂ ಪ್ರಭೃತಿಗಳು

ಹೆಚ್ಚಾಗಿ ಅಧಿಕಾರಿಗಳೆ ಬ್ಲೂ ಫಿಲಂ ಪ್ರಭೃತಿಗಳು

ಸಾಮಾನ್ಯವಾಗಿ ಅಧಿಕಾರಿಮಟ್ಟದ ಸಿಬ್ಬಂದಿಗೆ ಕಂಪ್ಯೂಟರ್ ಮತ್ತು ಇಂಟರ್ನೆಟ್ ಸೌಲಭ್ಯ ದಕ್ಕುತ್ತದೆ. ಕೆಳ ಹಂತದ ಸಿಬ್ಬಂದಿಗೆ ಕಂಪ್ಯೂಟರ್ ಸವಲತ್ತು ಇರುವುದಿಲ್ಲ. ಹಾಗಾಗಿ ಹೆಚ್ಚಾಗಿ ಅಧಿಕಾರಿಗಳೆ ಬ್ಲೂ ಫಿಲಂ ಅಶ್ಲೀಲ ಸರಕನ್ನು ವೀಕ್ಷಿಸುತ್ತಾರೆ ಎನ್ನಲಾಗಿದೆ.

ಇದೆಲ್ಲಾ ಐಟಿ ಪರಿಣಾಮ/ ಪ್ರಭಾವ

ಇದೆಲ್ಲಾ ಐಟಿ ಪರಿಣಾಮ/ ಪ್ರಭಾವ

ಅದೊಂದು ಕಾಲವಿತ್ತು. ಟೈಪ್ ರೈಟರುಗಳ ಮುಂದೆ ಕುಳಿತು ಸಿಬ್ಬಂದಿ ತಮ್ಮ ಕೆಸಲ ಕಾರ್ಯಗಳಲ್ಲಿ ಮಗ್ನರಾಗುತ್ತಿದ್ದರು. ಆದರೆ ಈಗ ಅದೇ ಟೈಪ್ ರೈಟರ್ ಜಾಗದಲ್ಲಿ ಕಂಪ್ಯೂಟರ್ ಬಂದು ಕುಳಿತಿದೆ. ಆ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವ ಮರ್ಕಟ ಮನಸ್ಸಿನ ಕೆಲ ಉದ್ಯೋಗಿಗಳು ಹೀಗೆ ನಗ್ನರಾಗುತ್ತಿರುವುದು ನೈತಿಕತೆಯ ಅಂಧಃಪತನವೇ ಸರಿ.

ಸಿಬಿಐ ತನಿಖಾ ಸಂಸ್ಥೆಯ ವರದಿಯಿದು

ಸಿಬಿಐ ತನಿಖಾ ಸಂಸ್ಥೆಯ ವರದಿಯಿದು

ಇದು ಯಾರೋ ಅನಾಮಧೇಯರು ಆಕಸ್ಮಾತ್ತಾಗಿ ನೋಡಿ ಹೇಳಿರುವ ವಿಷಯವಲ್ಲ. ನಮ್ಮ ಸಿಬಿಐ ತನಿಖಾ ಸಂಸ್ಥೆಯೇ ಹೇಳಿದೆ. ಇದು ಒಂದು ವಿಧಾನಸೌಧದ ವಿಷಯವಲ್ಲ. ದೇಶದಲ್ಲಿ ಬಹುತೇಕ ಎಲ್ಲ ಸರಕಾರಿ ಕಚೇರಿಗಳಲ್ಲೂ ಇತ್ತೀಚೆಗೆ ಕಾಣಿಸಿಕೊಂಡಿರುವ ಅಂಟುಜಾಡ್ಯ.
ಮಾಹಿತಿ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಆಡಳಿತಯಂತ್ರ ಚುರುಕಾಗಿ ಕೆಲಸ ಮಾಡಲಿ ಎಂದು ಕಚೇರಿಗಳಲ್ಲಿ ಕೆಲವರಿಗೆ ಕಂಪ್ಯೂಟರ್ ವಿತ್ ಇಂಟರ್ನೆಟ್ ಸೌಲಭ್ಯ ನೀಡಿದ್ದರೆ ಬೇಜವಾಬ್ದಾರಿಯ ಸಿಬ್ಬಂದಿ ಅದನ್ನು ಹೀಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

CID- ಸರಿ ಮುಂದೇನು?

CID- ಸರಿ ಮುಂದೇನು?

ಏನಿಲ್ಲ. ಸಿಬಿಐ ಅಧಿಕಾರಿಗಳು ಗುಪ್ತ ವರದಿಯೊಂದನ್ನು ಸಿದ್ಧಪಡಿಸಿ, 'ಹೀಗೆ, ನಿಮ್ಮ ವಿಧಾನಸೌಧ ಸೇರಿದಂತೆ ಕೆಲವೊಂದು ಸರಕಾರಿ ಕಚೇರಿಗಳಲ್ಲಿ ಕಂಪ್ಯೂಟರುಗಳಲ್ಲಿ ಕೆಲಸ ಮಾಡುವವರು ಅಶ್ಲೀಲ ದೃಶ್ಯಾವಳಿಗಳನ್ನು ವೀಕ್ಷಿಸುತ್ತಿದ್ದಾರೆ. ನೋಡಿ, ಏನಾದರೂ ಕ್ರಮ ಕೈಗೊಳ್ತೀರೇನೋ?' ಎಂದು ರಾಜ್ಯ ಸಿಐಡಿಗೆ ಕಳುಹಿಸಿಕೊಟ್ಟಿದೆ. ಸಿಐಡಿ ಅಧಿಕಾರಿಗಳು ಈ ಮಾಹಿತಿಯನ್ನು ಖಚಿತಪಡಿಸಿದ್ದಾರಾದರೂ ಇನ್ನೂ ಯಾವುದೇ ಕ್ರಮ ಕೈಗೊಂಡ ಲಕ್ಷಣಗಳು ಇಲ್ಲ.

ವಿಧಾನಸೌಧದ ಹಣೆಬರಹ

ವಿಧಾನಸೌಧದ ಹಣೆಬರಹ

'ಸರಕಾರಿ ಕೆಲಸ ದೇವರ ಕೆಲಸ' ಎಂಬ ಹಣೆಬರಹ ವಿಧಾನಸೌಧದ ಮುಖ್ಯದ್ವಾರದ ಮೇಲಿದೆ. ದೇವರ ಕೆಲಸ ಅಂದರೆ ಇದೇನಾ? ನಮ್ಮ ಗಾಂಧಿನಗರದಲ್ಲಿ ಇದಕ್ಕೆ 'ದೇವರ ಚಿತ್ರಗಳು' ಎಂದೂ ಕರೆಯುತ್ತಾರೆ ಅಲ್ವಾ!?

filter - firewalls ಕಡಿವಾಣ ಇನ್ನೂ ಇಲ್ಲ

filter - firewalls ಕಡಿವಾಣ ಇನ್ನೂ ಇಲ್ಲ

ಸರಕಾರಿ ಕಚೇರಿಗಳಲ್ಲಿ ಉದ್ಯೋಗಿಗಳು ಕಂಪ್ಯೂಟರಿನಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು CBI ಗುಪ್ತವಾಗಿ ತಿಳಿದುಕೊಂಡಿದೆ. ಕಂಪ್ಯೂಟರಿನಲ್ಲಿ ಇದು ಸಾಧ್ಯವಾಗುತ್ತದೆ. ಅನೇಕ ಖಾಸಗಿ ಕಂಪನಿಗಳು ಗುಪ್ತವಾಗಿ ಇಂತಹ ಪ್ರವೃತ್ತಿಯನ್ನು ಪತ್ತೆಹಚ್ಚಿ ತಮ್ಮ ನೌಕರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದುಂಟು. ಇಲ್ಲವಾದರೆ ಆ ರಗಳೆಯೇ ಬೇಡ ಎಂದು ಪಾರ್ನ್ ಸೈಟುಗಳನ್ನು filter - firewalls ಮೂಲಕ ಬ್ಲಾಕ್ ಮಾಡುವುದೂ ಉಂಟು. ಅದೇ ಸರಕಾರಿ ಕಚೇರಿಗಳಲ್ಲಿ ಇನ್ನೂ ಅಂತಹ ಕ್ರಮಗಳನ್ನು ಕೈಗೊಂಡಿಲ್ಲ. ಅದಕ್ಕೇ ನಮ್ಮ ಸರಕಾರಿ ಉದ್ಯೋಗಿಗಳು ಸಿಕ್ಕ ಛಾನ್ಸ್ ಬಿಡೋದು ಯಾಕೆ ಎಂದು ಪಾರ್ನ್ ವೀಕ್ಷಣೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ.

ಯಾವುದದು ಐಪಿ ಸರ್ವರ್

ಯಾವುದದು ಐಪಿ ಸರ್ವರ್

kar.nic.in ಎಂಬ ವೆಬ್ ಸೈಟಿನ ಐಪಿ ಬಳಸಿ ಸರಕಾರಿ ಕಚೇರಿಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ. ಆ ಸವಲತ್ತಿನಿಂದಲೇ ಪೋರ್ನೋಗ್ರಫಿಯನ್ನು ವ್ಯಾಪಕವಾಗಿ ನೋಡಲಾಗುತ್ತಿದೆ. ಅದರಲ್ಲೂ ಹೆಚ್ಚಾಗಿ ವಿಧಾನಸೌಧದಲ್ಲಿ.

ಬೆತ್ತಲೆ ಜಗತ್ತು ಅನಾವರಣ

ಬೆತ್ತಲೆ ಜಗತ್ತು ಅನಾವರಣ

ಹಾಗಂತ CBIನವರು ಅನುಮಾನ ಬಂದು ಬೇಕಂತಲೇ ಈ 'ಗುಪ್ತ' ಮಾಹಿತಿಯನ್ನು ಹೆಕ್ಕಿಲ್ಲ. ಇತ್ತೀಚೆಗೆ ಕರ್ನಾಟಕದಲ್ಲೂ ಭಯೋತ್ಪಾದನೆ ಕೃತ್ಯಗಳು ಹೆಚ್ಚಾಗತೊಡಗಿದಾಗ ಸೈಬರ್ ಪರಿಣತರು ಸರಕಾರಿ ಕಚೇರಿಗಳಲ್ಲಿರುವ ಕಂಪ್ಯೂಟರುಗಳ ಮೇಲೆ ಒಂದು ಕಣ್ಣಿಟ್ಟರು. ಆಗ ಬೆತ್ತಲೆ ಜಗತ್ತು ಅನಾವರಣಗೊಂಡಿದೆ!

ಇದೆಲ್ಲಾ ಹೇಗೆ ಬಹಿರಂಗವಾಯ್ತು

ಇದೆಲ್ಲಾ ಹೇಗೆ ಬಹಿರಂಗವಾಯ್ತು

ಇದೆಲ್ಲಾ ಹೇಗೆ ಬಹಿರಂಗವಾಯ್ತು ಅಂದರೆ ಹಿರಿಯ ಪತ್ರಕರ್ತರಾದ ಎಂಕೆ ಮಧುಸೂಧನ್ ಅವರು ಇಂದಿನ ಟೈಮ್ಸ್ ಆಫ್ ಇಂಡಿಯಾ ಆಂಗ್ಲ ಪತ್ರಿಕೆಯಲ್ಲಿ ಈ ಕುರಿತು ಸಮಗ್ರ ವರದಿ ಮಾಡಿದ್ದಾರೆ.

ಅಶ್ಲೀಲ ಸರಕು ನೋಡುವುದು ಅಶಿಸ್ತು

ಅಶ್ಲೀಲ ಸರಕು ನೋಡುವುದು ಅಶಿಸ್ತು

ಸರಕಾರ ಒದಗಿಸಿರುವ ಕಂಪ್ಯೂಟರುಗಳಲ್ಲಿ ಅಶ್ಲೀಲ ಸರಕನ್ನು ನೋಡುವುದು ಅಶಿಸ್ತು ಎನಿಸಿಕೊಳ್ಳುತ್ತದೆ. ಈ ಅಪರಾಧಕ್ಕೆ ಸೂಕ್ತ ಶಿಕ್ಷೆಯೂ ಇದೆ.

ಅಶ್ಲೀಲ ಸರಕು ವೀಕ್ಷಣೆ ಶಿಕ್ಷಾರ್ಹ ಅಪರಾಧ

ಅಶ್ಲೀಲ ಸರಕು ವೀಕ್ಷಣೆ ಶಿಕ್ಷಾರ್ಹ ಅಪರಾಧ

ಮಾಹಿತಿ ತಂತ್ರಜ್ಞಾನ ಕಾಯಿದೆ ಏನು ಹೇಳುತ್ತದೆ ಅಂದರೆ ಯಾವುದೇ ವ್ಯಕ್ತಿ ತನ್ನ ಖಾಸಗಿ ಕಂಪ್ಯೂಟರಿನಲ್ಲಿ ಅಶ್ಲೀಲ ಸರಕನ್ನು ಅವರವರ ಇಚ್ಛಾನುಸಾರ ನೋಡಬಹುದು. ಆದರೆ ಸಾರ್ವಜನಿಕವಾಗಿ ಅಥವಾ ಸರಕಾರಿ ಕಂಪ್ಯೂಟರುಗಳಲ್ಲಿ ಇಂತಹುದಕ್ಕೆ ಅವಕಾಶವೇ ಇಲ್ಲ. ಒಂದು ವೇಳೆ ಹಾಗೆ ನೋಡಿದ್ದೇ ಆದರೆ ಅದು ಶಿಕ್ಷಾರ್ಹ ಅಪರಾಧ.

ಮಾರಾಯ್ರೆ! ಬ್ರಿಟನ್ ಸಂಸತ್ತಿನಲ್ಲೂ ಅಶ್ಲೀಲಚಿತ್ರ ವೀಕ್ಷಣೆ

ಮಾರಾಯ್ರೆ! ಬ್ರಿಟನ್ ಸಂಸತ್ತಿನಲ್ಲೂ ಅಶ್ಲೀಲಚಿತ್ರ ವೀಕ್ಷಣೆ

ಲಂಡನ್, ಫೆ.11-2013‌: ಹೌದು ಬ್ರಿಟನ್ ಸಂಸತ್ತಿನಲ್ಲೂ ಅಶ್ಲೀಲ ಚಿತ್ರಗಳನ್ನು ಯಾವುದೇ ಎಗ್ಗುಸಿಗ್ಗು ಇಲ್ಲದೆ ಧಾರಾಳವಾಗಿ ವೀಕ್ಷಿಸುತ್ತಾರೆ. ಅದೂ ಬ್ರಿಟನ್ನಿನ ಸಂಸದರು ಮತ್ತು ಅವರ ಸಿಬ್ಬಂದಿ ತಾವು ಬಳಸುವ ಕಂಪ್ಯೂಟರಿನಲ್ಲಿ ಈ ಸಾಧನೆ ಮಾಡಿದ್ದಾರೆ.

Section 67 of the IT Act ಹೇಳುವುದೇನು?

Section 67 of the IT Act ಹೇಳುವುದೇನು?

Whoever publishes or transmits or causes to be published in electronic form any material which is lascivious or appeals to the prurient interest, or if its effect is such as to tend to deprave and corrupt persons who are likely... to read, see or hear the matter contained or embodied in it, shall be punished on first conviction with imprisonment of either description for a term which may extend to five years and with fine which may extend to Rs 1 lakh. In the event of a second or subsequent conviction, with imprisonment of either description for a term which may extend to ten years and also with fine which may extend to Rs 2 lakh.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+