ನಾಲ್ಕಿಂಚಿನ ಫೋರ್ಕ್ ಅಲ್ಲಿ ಹೊಕ್ಕಿತ್ತು !

Australian lodges fork in penis for sexual pleasure
ಸಿಡ್ನಿ, ಆ.20: ಎಮೆರ್ಜೆನ್ಸಿ ಕೇಸ್ ಎಂದು ಆಪರೇಷನ್ ಕೊಠಡಿ ಹೊಕ್ಕ ವೈದ್ಯರು ಒಂದು ಕ್ಷಣ ಅವಾಕ್ಕಾಗಿದ್ದಾರೆ. ಬೆಡ್ ಮೇಲೆ ಮಲಗಿದ್ದ ವ್ಯಕ್ತಿಯ ಶಿಶ್ನದೊಳಗೆ ನಾಲ್ಕು ಇಂಚಿನ ಉಕ್ಕಿನ ಫೋರ್ಕ್ ಹೊಕ್ಕಿತ್ತು.

ಇಷ್ಟಕ್ಕೂ ಉಕ್ಕಿನ ಫೋರ್ಕ್ ಶಿಶ್ನದೊಳಗೆ ಹೊಕ್ಕಿದ್ದು ಆಕಸ್ಮಿಕವಾಗಿ ಅಲ್ಲ, ಕೆನ್ ಬೆರಾ ಮೂಲದ ವ್ಯಕ್ತಿ ತಾನೇ ಫೋರ್ಕ್ ಚುಚ್ಚಿ ಕೊಂಡಿದ್ದಾನೆ. ಕಾರಣ ಲೈಂಗಿಕ ತೃಪ್ತಿಗಾಗಿ ಅಂತೆ !

ಹೀಗೊಂದು ವಿಚಿತ್ರ ಘಟನೆ ಬಗ್ಗೆ AFP ವರದಿ ಮಾಡಿದೆ. ಈ ರೀತಿ ಲೈಂಗಿಕ ತೃಪ್ತಿ ಹೊಂದಲು ಸಾಹಸ ಮಾಡಿದ ವ್ಯಕ್ತಿಯ ವಯಸ್ಸು 70 ದಾಟಿರುವುದು ವಿಶೇಷ. An Unusual Urethral Foreign Body ಹೆಸರಿನಲ್ಲಿ ವಿಶೇಷ ವರದಿಯನ್ನು ಪ್ರಕಟಿಸಲಾಗಿದೆ. ಕೆನ್ ಬೆರಾದ ಆಸ್ಪತ್ರೆಯಲ್ಲಿ ರಕ್ತ ಸೋರುತ್ತಿದ್ದ ಮೂತ್ರ ವಿಸರ್ಜನಾ ನಾಳ ಹಾಗೂ ಉಕ್ಕಿನ ಫೋರ್ಕ್ ಹಿಡಿದುಕೊಂಡು ಬಂದ ವ್ಯಕ್ತಿಯನ್ನು ತಕ್ಷಣವೇ ದಾಖಲಿಸಿಕೊಂಡು ಚಿಕಿತ್ಸೆಗೆ ಒಳಪಡಿಸಲಾಗಿದೆ. ಹೀಗಾಗಿ ವ್ಯಕ್ತಿ ಪ್ರಾಣಾಪಯದಿಂದ ಪಾರಾಗಿದ್ದಾರೆ.

'Autoerotic stimulation ಗಾಗಿ 12 ಗಂಟೆಗಳ ಮುಂಚೆ ನಾನು ಫೋರ್ಕ್ ಚುಚ್ಚಿಕೊಂಡೆ ಆದರೆ, ಹೊರ ತೆಗೆಯಲು ಆಗಲಿಲ್ಲ' ಎಂದು ರೋಗಿ ಹೇಳಿಕೆ ನೀಡಿದ್ದಾನೆ.

ಕಳೆದ ಒಂಭತ್ತು ವರ್ಷಗಳಲ್ಲಿ ಈ ರೀತಿ ಕಿಬ್ಬೊಟ್ಟೆ, ಶಿಶ್ನದ ಭಾಗದಲ್ಲಿ ಚುಚ್ಚಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿರುವ ಬಗ್ಗೆ ಆಸ್ಟ್ರೇಲಿಯಾದ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸೂಜಿ, ಪೆನ್ಸಿಲ್, ವೈರು, ಟೂತ್ ಬ್ರಷ್, ಬ್ಯಾಟರಿ, ವಿದ್ಯುತ್ ಬಲ್ಬ್, ಥರ್ಮೋಮೀಟರ್, ತರಕಾರಿ, ಗಿಡಗಳು ಮುಂತಾದವುಗಳನ್ನು ದೇಹದೊಳಗೆ ತೂರಿಸಿಕೊಳ್ಳುವ ಅಭ್ಯಾಸದ ಬಗ್ಗೆ ಅನೇಕ ಕೇಸ್ ಗಳನ್ನು ಕಾಣಲಾಗಿದೆ. ಆದರೆ, ಉಕ್ಕಿನ ಫೋರ್ಕ್ ಚುಚ್ಚಿಕೊಂಡಿರುವುದು ವಿರಳ.

ಹಸ್ತಮೈಥುನ, ಸ್ವಪ್ನ ಮೈಥುನ ಮುಂತಾದ ಕ್ರಿಯೆಯಲ್ಲಿ ತೊಡಗಿರುವ ಪುರುಷರು ಈ ರೀತಿ ಮಾಡಿಕೊಳ್ಳುವುದಿದೆ. ಆದರೆ, ಸರಿಯಾದ ವೈದ್ಯಕೀಯ ನೆರವು ಸಿಗದಿದ್ದರೆ ಸಾವು ಖಚಿತ ಎಂದು ವೈದ್ಯರು ಎಚ್ಚರಿಸಿದ್ದಾರೆ. (ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+