ನವೆಂಬರ್ ನಲ್ಲಿ ಓಡಲಿದೆ ಪೀಣ್ಯ-ಸ್ವಸ್ತಿಕ್ ಮೆಟ್ರೋ ರೈಲು
ಬೆಂಗಳೂರು, ಆ.20 : ತುಮಕೂರು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಇನ್ನು ಮುಂದೆ ಸ್ಪಲ್ಪ ನಿರಾಳವಾಗಬಹುದು. ಪೀಣ್ಯ ಸ್ವಸ್ತಿಕ್ ನಡುವಿನ ನಮ್ಮ ಮೆಟ್ರೋ ರೀಚ್ 3 ರೈಲು ಅಕ್ಟೋಬರ್ ಅಥವ ನವೆಂಬರ್ ವೇಳೆಗೆ ಸಂಚಾರ ಪ್ರಾರಂಭಿಸಲಿದೆ.
ಅಕ್ಟೋಬರ್ ಕೊನೆ ಅಥವ ನವೆಂಬರ್ ಮೊದಲ ವಾರದಲ್ಲಿ ಪೀಣ್ಯ ಮತ್ತು ಸ್ವಸ್ತಿಕ್ ನಡುವೆ ರೈಲು ಸಂಚಾರ ಆರಂಭಿಸಿಲು ಬಿಎಂಆರ್ ಸಿಎಲ್ ಸಕಲ ರೀತಿಯಲ್ಲಿ ಸಜ್ಜಾಗಿದೆ. ರೈಲು ಸಂಚಾರ ಪ್ರಾರಂಭವಾದರೆ, ತುಮಕೂರು ರಸ್ತೆಯ ಟ್ರಾಫಿಕ್ ಸಮಸ್ಯೆ ಸ್ಪಲ್ಪ ಕಡಿಮೆಯಾಗಲಿದೆ.

ಬಿಎಂಆರ್ ಸಿಎಲ್ ಇತ್ತೀಚೆಗೆ ಪೀಣ್ಯ-ಶ್ರೀರಾಮಪುರ ನಿಲ್ದಾಣಗಳ ನಡುವಿನ 9.3 ಕಿ.ಮೀ.ಉದ್ದದ ರೈಲು ಸಂಚಾರವನ್ನು ಯಶಸ್ವಿಯಾಗಿ ಮುಗಿಸಿದೆ. ಮೆಟ್ರೋ ರೈಲು ಸುರಕ್ಷತಾ ತಂಡ ಪೀಣ್ಯ-ಸ್ವಸ್ತಿಕ್ ನಡುವಿನ ಸಂಚಾರಕ್ಕೆ ಒಪ್ಪಿಗೆ ನೀಡಿದೆ.
ರೈಲ್ವೆ ಇಲಾಖೆಯ ಆರ್ ಎಇಎಸ್ಓ ತಂಡ ಆಗಸ್ಟ್ ಅಂತ್ಯ ಅಥವ ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದು, ಸ್ವಸ್ತಿಕ್ ಮತ್ತು ಪೀಣ್ಯ ನಡುವಿನ ಪರೀಕ್ಷಾರ್ಥ ಸಂಚಾರ ನಡೆಸಲಿದೆ. ಸಂಚಾರದ ನಂತರ ಕೇಂದ್ರಕ್ಕೆ ವರದಿ ಸಲ್ಲಿಸಲಿದ್ದು, ನಂತರ ರೈಲು ಓಡಾಟಕ್ಕೆ ಅನುಮತಿ ದೊರೆಯಲಿದೆ.
ಆರ್ ಎಇಎಸ್ಓ ತಂಡದ ಅನುಮತಿ ದೊರೆತರೆ ನಮ್ಮ ಮಟ್ರೋ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ. ಈ ಮಾರ್ಗದಲ್ಲಿ ಬರುವ ನಿಲ್ದಾಣಗಳ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿದ್ದು, ಎರಡು ತಿಂಗಳಿನಲ್ಲಿ ನಿಲ್ದಾಣ ದ ಕಾಮಗಾರಿ ಪೂರ್ಣಗೊಳ್ಳಲಿದೆ.(ಶೀಘ್ರವೇ ಯಶವಂತಪುರ-ಸ್ವಸ್ತಿಕ್ ಮೆಟ್ರೋ ಪರೀಕ್ಷೆ)
ಪೀಣ್ಯ-ಸ್ವಸ್ತಿಕ್ ನಡುವಿನ ಪ್ರಾಯೋಗಿಕ ರೈಲು ಸಂಚಾರ ಜುಲೈ ಅಂತ್ಯಕ್ಕೆ ನಡೆಯಬೇಕಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಂಡಿರದ ಕಾರಣ ತಡವಾಗಿದೆ. ಸೆಪ್ಟೆಂಬರ್ ನಲ್ಲಿ ನಡೆಯುವ ಪರೀಕ್ಷಾರ್ಥ ಸಂಚಾರ ಯಶಸ್ವಿಯಾದರೆ, ಅಕ್ಟೋಬರ್ ಅಥವ ನವೆಂಬರ್ ನಲ್ಲಿ ರೈಲು ಸಂಚಾರಕ್ಕೆ ಮುಕ್ತವಾಗಲಿದೆ.












Click it and Unblock the Notifications