ಬಟ್ಟೆ, ಟಯರ್ ಖರೀದಿಸಿದರೆ ಈರುಳ್ಳಿ ಉಚಿತ!

ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಜವಳಿ ಅಂಗಡಿಯೊಂದರಲ್ಲಿ ಈರುಳ್ಳಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದಕ್ಕಾಗಿ ನೀವು 2,000 ರೂ. ಅಥವ ಅದಕ್ಕೆ ಮೇಲ್ಟಟ್ಟ ಬಟ್ಟೆಯನ್ನು ಖರೀದಿಸಬೇಕು.
ಇಂತಹ ಆಫರ್ ನೀಡುವ ಮೂಲಕ ಅಂಗಡಿ ಮಾಲೀಕ ಗ್ರಾಹಕರನ್ನು ಸೆಳೆಯುವ ತಂತ್ರ ರೂಪಿಸಿದ್ದಾರೆ. ಇದರಿಂದ ವ್ಯಾಪಾರವೂ ಚೆನ್ನಾಗಿ ಆಗುತ್ತಿದ್ದು, ಸರ್ಕಾರವ ವಿರುದ್ಧ ಪ್ರತಿಭಟನೆ ಮಾಡಿದಂತೆಯೂ ಆಗುತ್ತಿದೆ ಎಂದು ಮಾಲೀಕರು ಹೇಳಿದ್ದಾರೆ.
ಟಯರ್ ಜೊತೆ ಈರುಳ್ಳಿ ಫ್ರೀ : ಜೆಮ್ ಶೆಡ್ ಪುರದ ಸತ್ ನಾಮ್ ಸಿಂಗ್ ಎಂಬ ಟಯರ್ ಡೀಲರ್ ವಿನೂತನ ಐಡಿಯಾ ಮಾಡಿದ್ದಾನೆ. ಇವರ ಅಂಗಡಿಯಲ್ಲಿ ಲಾರಿ ಟಯರ್ ಖರೀದಿಸಿದವರಿಗೆ 5 ಕೆ.ಜಿ.ಈರುಳ್ಳಿ ಮತ್ತು ಕಾರಿನ ಟಯರ್ ಖರೀದಿಸಿದರೆ, 1 ಕೆಜಿ ಈರುಳ್ಳಿ ನೀಡಲಾಗುತ್ತಿದೆ.
ಕೇಂದ್ರ ಸರ್ಕಾರ ಈರುಳ್ಳಿ ಬೆಲೆ ನಿಯಂತ್ರಿಸಲು ವಿಫಲವಾಗಿದೆ. ಜನರು ಇದರಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಇಂತಹ ಯೋಜನೆ ಜಾರಿಗೆ ತಂದಿರುವುದಾಗಿ ಸಾತ್ ನಾಮ್ ಸಿಂಗ್ ಹೇಳಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ಈರುಳ್ಳಿ ದರ ಹೆಚ್ಚಳದ ಬಿಸಿ ಜನರಿಗೆ ತಟ್ಟಿದ್ದು ಕೆಲವು ಹೋಟೆಲ್ ಗಳಲ್ಲಿ ಈರುಳ್ಳಿ ದೋಸೆ ಬೆಲೆ 50 ರೂ.ಗಳಿಗೆ ಏರಿಕೆಯಾಗಿದೆ. ಅಂದಹಾಗೆ ಬೆಂಗಳೂರಿನಲ್ಲಿ ಇಂದಿನ ಈರುಳ್ಳಿದರ ಹಾಪ್ ಕಾಮ್ಸ್ ನಲ್ಲಿ ಕೆಜಿಗೆ 65 ರೂ. ಚಿಲ್ಲರೆ ಅಂಗಡಿಗಳಲ್ಲಿ 65ರಿಂದ 70 ರೂ.(ಹೋಟೆಲ್ ಗಳಿಂದ ಕಾಣೆಯಾದ ಈರುಳ್ಳಿ ದೋಸೆ!)












Click it and Unblock the Notifications