ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಟೆಲ್ ಗಳಿಂದ ಕಾಣೆಯಾದ ಈರುಳ್ಳಿ ದೋಸೆ!

|
Google Oneindia Kannada News

onion
ಬೆಂಗಳೂರು, ಆ.17 : ಭಾನುವಾರ ಕುಟುಂಬದವರೊಂದಿಗೆ ಕುಳಿತು ಬಿಸಿ-ಬಿಸಿ ಈರುಳ್ಳಿ ದೋಸೆ ತಿನ್ನುವ ಯೋಜನೆ ಹಾಕಿದ್ದರೆ ಅದನ್ನು ಬಿಟ್ಟು ಬಿಡುವುದು ಉತ್ತಮ. ಈರುಳ್ಳಿ ಬೆಲೆ ಗಗನಕ್ಕೆ ಏರಿರುವುದರಿಂದ ನಗರದ ಕೆಲವು ಹೋಟೆಲ್ ಗಳಿಂದ ಈರುಳ್ಳಿ ದೋಸೆ ಕಾಣೆಯಾಗಿದೆ.

ಈರುಳ್ಳಿ ಬೆಲೆ ಹೆಚ್ಚಾಗಿರುವುದು ಕೇವಲ ಜನರನ್ನು ಕಂಗೆಡಿಸಿಲ್ಲ. ಹೋಟೆಲ್ ಉದ್ಯಮಕ್ಕೂ ಆತಂಕ ತಂದಿದೆ. ಆದ್ದರಿಂದ, ಈರುಳ್ಳಿ ಬೆಲೆ ಇಳಿಯುವ ವರೆಗೆ ಈರುಳ್ಳಿ ದೋಸೆಗೆ ಹೋಟೆಲ್ ನಿಂದ ಕೋಕ್ ನೀಡಲಾಗಿದೆ. ಕೆಲವು ಹೋಟೆಲ್ ಗಳ ಮೆನು ಕಾರ್ಡ್ ನಿಂದ ಈರುಳ್ಳಿ ದೋಸೆ ಎರಡು ದಿನದಿಂದ ಕಾಣೆಯಾಗಿದೆ.

ನಗರದ ಪ್ರತಿಷ್ಠಿತ ಕೋನಾರ್ಕ್ ಹೋಟೆಲ್ ನಲ್ಲಿ ಈರುಳ್ಳಿ ದೋಸೆ ದೊರೆಯುತ್ತಿಲ್ಲ. ಈರುಳ್ಳಿ ಅನಿವಾರ್ಯವಾಗಿರುವ ಕೆಲವು ಉತ್ತರ ಭಾರತದ ತಿಂಡಿಗಳೂ ಮೆನು ಕಾರ್ಡ್ ನಿಂದ ಮಾಯವಾಗಿವೆ. ಈರುಳ್ಳಿ ಬೆಲೆ ಕೆಳಗೆ ಬಂದ ಮೇಳೆ ಈ ತಿಂಡಿಗಳು ಮತ್ತೆ ಹೋಟೆಲ್ ಪ್ರವೇಶಿಸಲಿವೆ.

ಕೋನಾರ್ಕ್ ಹೋಟೆಲ್ ಸಿಬ್ಭಂದಿ ಹೇಳುವಂತೆ "ಈರುಳ್ಳಿ ಬೆಲೆ ಏರಿಕೆ ಆಗಿರುವುದರಿಂದ ಈರುಳ್ಳಿ ದೋಸೆ ಸೇರಿದಂತೆ ಕೆಲವೊಂದು ತಿಂಡಿಗಳನ್ನು ನಿಲ್ಲಿಸಿದ್ದೇವೆ. ಆದರೆ, ಪ್ರತಿದಿನ ಬರುವ ಗ್ರಾಹಕರಿಗೆ ನಾವು ಈರುಳ್ಳಿ ದೋಸೆ ನೀಡುತ್ತಿದ್ದೇವೆ" ಎನ್ನುತ್ತಾರೆ.

ಕೆಲವು ಹೋಟೆಲ್ ಗಳಲ್ಲಿ ಸಂಜೆ ದೊರೆಯುತ್ತಿದ್ದ ಚಾಟ್ಸ್ ಗಳನ್ನು ಈರುಳ್ಳಿ ಬೆಲೆ ಹೆಚ್ಚಾಗಿದ್ದರಿಂದ ನಿಲ್ಲಿಸಲಾಗಿದೆ. ಊಟದೊಂದಿಗೆ ನೀಡುತ್ತಿದ್ದ ಈರುಳ್ಳಿ ಸಾಲಾಡ್ ಗಳು ತಟ್ಟೆಯಿಂದ ಮಾಯವಾಗಿವೆ. ಈರುಳ್ಳಿ ಜೊತೆಗೆ ತರಕಾರಿ ಬೆಲೆಗಳು ಹೆಚ್ಚಾಗಿದ್ದು, ಹೋಟೆಲ್ ಮಾಲೀಕರನ್ನು ಕಂಗೆಡಿಸಿದೆ.

ಮಯ್ಯಾಸ್ ಹೋಟೆಲ್ ನಲ್ಲಿ ಈರುಳ್ಳಿ ದೋಸೆ ಸದ್ಯಕ್ಕೆ ಲಭ್ಯವಿದೆ. ಬೆಲೆ ಏರಿಕೆ ಆಗಿರುವುದು ಹೌದು. ಆದರೆ, ಗ್ರಾಹಕರು ಈರುಳ್ಳಿ ದೋಸೆ ಕೇಳುತ್ತಿದ್ದಾರೆ. ಆದ್ದರಿಂದ ದೋಸೆಯನ್ನು ನೀಡುತ್ತಿದ್ದೇವೆ ಎಂದು ಹೋಟೆಲ್ ವ್ಯವಸ್ಥಾಪಕರು ಹೇಳುತ್ತಾರೆ.

ದೋಸೆಮನೆಯಲ್ಲಿಯೂ ಈರುಳ್ಳಿ ದೋಸೆ ಸದ್ಯಕ್ಕೆ ಲಭ್ಯವಿದೆ. ಈರುಳ್ಳಿ ದೋಸೆಗೆ ಬೇಡಿಕೆ ಸಲ್ಲಿಸುವ ಗ್ರಾಹಕರು ಕಡಿಮೆ ಆಗಿದ್ದಾರೆ ಎಂದು ಮಾಲೀಕ ವೆಂಕಟರಾಜು ಭಟ್ ಹೇಳಿದ್ದಾರೆ. ಈರುಳ್ಳಿ ಬೆಲೆ ಹೆಚ್ಚಾಗಿದೆ ಎಂದು ಈರುಳ್ಳಿ ದೋಸೆಯ ಬೆಲೆಯನ್ನು ನಾವು ಹೆಚ್ಚಿಗೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಂದಹಾಗೆ ಬೆಂಗಳೂರಿನಲ್ಲಿ ಶುಕ್ರವಾರ ಸಂಜೆಯ ಈರುಳ್ಳಿ ದರ ಹಾಪ್ ಕಾಮ್ಸ್ ನಲ್ಲಿ 65 ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಕೆಜಿಗೆ 70-75 ಆಗಿದೆ. ಈರುಳ್ಳಿ ಬೆಲೆ ಇಳಿಯುವ ತನಕ ಈರುಳ್ಳಿ ದೋಸೆ ತಿನ್ನದಿರುವುದೇ ಉತ್ತಮ.

English summary
If you were looking forward to a piping hot onion dosa in a restaurant in Bangalore, you’re probably in for a disappointment. The sudden rise in onion prices seems to have hit local eateries and hotels just as hard as households, forcing some restaurants to take dishes like onion-dosas off the menu for the time being. Konarak a wellknown restaurant chain, has taken onion dosa off its menu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X