ಗುಜರಾತ್ ಸಿಎಂ ಮೋದಿಗೆ ವೀಸಾ ಕೊಡಲ್ಲ

ನವದೆಹಲಿ, ಆ.16: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಭಾರಿ ಹಿನ್ನೆಡೆ ಉಂಟಾಗಿದೆ. ಮೋದಿ ಅವರಿಗೆ ಅಮೆರಿಕದ ವೀಸಾ ನೀಡಲಾಗುವುದಿಲ್ಲ ಎಂದು ಅಮೆರಿಕದ ಉನ್ನತ ಅಧಿಕಾರಿಗಳು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಯುಕೆಯಿಂದ ಬಂದಿರುವ ಅಹ್ವಾನಕ್ಕೂ ಕಲ್ಲು ಹಾಕುವ ಯತ್ನ ನಡೆದಿದೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವೀಸಾ ವಿಚಾರದ ಕುರಿತು ಅಮೆರಿಕ ಧಾರ್ಮಿಕ ಸ್ವಾತಂತ್ರ್ಯದ ಆಯೋಗದ ಅಧ್ಯಕ್ಷ ಕತ್ರಿನಾ ಲಾಂಟೋಸ್ ಸ್ವೆಟ್ ಅವರು ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದರು. ಮೋದಿ ಅವರಿಗೆ ವೀಸಾ ನೀಡಿಕೆ ವಿಚಾರವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಕತ್ರಿನಾ ಲಾಂಟೋಸ್ ಸ್ವೆಟ್ ಅವರು ಮಾತನಾಡಿದ್ದು, ಮೋದಿ ಅವರ ವೀಸಾ ನಿರಾಕರಣೆಯನ್ನು ಮುಂದುವರೆಸಲಾಗುತ್ತಿದೆ ಎಂದು ತಿಳಿಸಿದರು.

Narendra Modi shall not be granted US visa: American official

ನರೇಂದ್ರಮೋದಿ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗುವ ಸಾಧ್ಯತೆಗಳ ಕುರಿತು ಮಾತನಾಡಿದ ಸ್ವೆಟ್ ಅವರು, ಭಾರತದ ಮುಂದಿನ ಪ್ರಧಾನಿ ಯಾರಾಗಬೇಕೆಂಬುದನ್ನು ಆ ದೇಶದ ಹೊರಗಿನವನಾಗಿ ಅಥವಾ ವ್ಯಕ್ತಿಗತವಾಗಿ ನಾನು ಹೇಳಲು ಸಾಧ್ಯವಿಲ್ಲ. ಆದರೆ ಭಾರತದ ಪ್ರಜೆಗಳ ಮೇಲೆ ಅತಿ ದೊಡ್ಡ ಜವಾಬ್ದಾರಿ ಇದ್ದು, ಅವರೇ ತಮ್ಮ ಮುಂದಿನ ನಾಯಕರನ್ನು ಅತ್ಯಂತ ಎಚ್ಚರಿಕೆಯಿಂದ ಆರಿಸಬೇಕಿದೆ ಎಂದು ಹೇಳಿದರು.

ಅಂತೆಯೇ ಮೋದಿ ವೀಸಾ ನೀಡಿಕೆ ಕುರಿತು ಮಾತನಾಡಿರುವ ಸ್ವೆಟ್ ಅವರು, 2002ರ ಗುಜರಾತ್ ನರಮೇಧದ ಪ್ರಕರಣದಲ್ಲಿ ಮೋದಿ ಅವರ ಹಸ್ತಕ್ಷೇಪ ಕುರಿತು ಗಂಭೀರ ಸಂಶಯವಿದ್ದು, ಅದು ನಿವಾರಣೆಯಾಗುವವರೆಗೂ ವೀಸಾ ನಿರಾಕರಣೆಯನ್ನು ಮುಂದುವರೆಸಲಾಗುತ್ತದೆ ಎಂದು ತಿಳಿಸಿದರು.
ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯದ ಆಯೋಗವು ಒಂದು ಸರ್ಕಾರಿ ಸಂಸ್ಥೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಉಲ್ಲಂಘನೆ ಕುರಿತ ಪ್ರಕರಣಗಳನ್ನು ಅಧ್ಯಯನ ಮಾಡುತ್ತದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+