ಲಿಂಗ ಪರೀಕ್ಷೆ ಬೇಡವೆಂದ ಗರ್ಭಿಣಿ ಪತ್ನಿ ಮೇಲೆ ಆಸಿಡ್ ದಾಳಿ

ಹೊಟ್ಟೆಯಲ್ಲಿರುವುದು ಗಂಡಾಗಿದ್ದರೆ ಉಳಿಯಲಿ. ಇಲ್ಲಾಂದ್ರೆ ಮತ್ತೆ ಹೆಣ್ಣು ಮಗುವಾಗುವುದು ಬೇಡ ಎಂದು ಎಂದು ದುಂಬಾಲು ಬಿದ್ದಿದ್ದಾನೆ. ಆದರೆ ಆಕೆ ಸುತರಾಂ ಒಪ್ಪಿಲ್ಲ. ಅದಕ್ಕೆ ಪಾಪಿ ಪತಿರಾಯ ಆಕೆಯ ಮೇಲೆ ಆಸಿಡ್ ಎರಚಿ ಸೇಡು ತೀರಿಸಿಕೊಂಡಿದ್ದಾನೆ.
ಇಲ್ಲಿನ ಬಾಜಾರ್ ಖಾಲಾ ಪ್ರದೇಶದಲ್ಲಿ ಇತ್ತೀಚೆಗೆ ಈ ಕಹಿ ಘಟನೆ ನಡೆದಿದೆ. ಆದರೆ ಮಹಿಳೆಯ ಮನೆಯವರು ನಿನ್ನೆ ಮಂಗಳವಾರ ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಆರೋಪಿ ನಯೀಂನನ್ನು ಬಂಧಿಸಲಾಗಿದೆ. ವೈದ್ಯರ ವರದಿ ಮತ್ತು ಬಾಧಿತ ಮಹಿಳೆಯ ಹೇಳಿಕೆಯನ್ನು ಪರಿಗಣಿಸಿ ಪೊಲೀಸರು ಆರೋಪಿಯ ವಿರುದ್ಧ ನಾನಾ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಬಾಜಾರ್ ಖಾಲಾದ ತುಡಿಯಾಗಂಜಿನಲ್ಲಿ ದಂಪತಿಯ ಮನೆಯಲ್ಲಿ ಈ ಘಟನೆ ನಡೆದಿದೆ. ಐದು ಹೆಣ್ಣು ಮಕ್ಕಳ ತಂದೆಯ ಆರ್ಥಿಕ ಪರಿಸ್ಥಿತಿಯೂ ದುಸ್ಥಿತಿಯಲ್ಲಿತ್ತು. ಈಗ ಮತ್ತೆ ಹೆಣ್ಣಾದರೆ ಗತಿಯೇನು ಎಂದು ಯೋಚನೆಗೆ ಬಿದ್ದ ನಯೀಂ, ಮೊದಲು ತನ್ನ ಹೆಂಡತಿಗೆ ಹೆದರಿಸಿ ಬೆದರಿಸಿ ಮಾಡಿದ್ದಾನೆ. ಆದರೆ ಆಕೆ ಬಗ್ಗದಿದ್ದಾಗ ಆಸಿಡ್ ಎರಚಿದ್ದಾನೆ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications