ಹೆಂಡ್ತಿ-ಮಗು ಜತೆ ಶಾಪಿಂಗ್ ಮುಗಿಸಿ ನೇಣಿಗೆ ಶರಣು

bangalore-business-consultant-santosh-suicide-after-shopping-spree
ಬೆಂಗಳೂರು,ಆಗಸ್ಟ್ 13: ಆತ ಸಿವಿ ರಾಮನ್ ನಗರದಲ್ಲಿರುವ ಕಂಪನಿಯೊಂದರಲ್ಲಿ ಬಿಸಿನೆಸ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಮೊನ್ನೆ ವಾರಾಂತ್ಯ ಹೆಂಡತಿ-ಮಗು ಜತೆ ಚೆನ್ನಾಗಿ ಶಾಪಿಂಗ್ ಮಾಡಿ, ಸುತ್ತಾಡಿ ಮನೆಗೆ ಬಂದವನೇ ತನ್ನ ಕೊಠಡಿಗೆ ತೆರಳಿ, ಫ್ಯಾನಿಗೆ ನೇಣು ಹಾಕಿಕೊಂಡು ಮೃತಟಪಟ್ಟಿದ್ದಾನೆ.

32 ವರ್ಷದ ಸಂತೋಷ್ ರೆಡ್ಡಿ ಹೀಗೆ ಆತ್ಮಹತ್ಯೆ ಮಾಡಿಕೊಂಡವರು. 2009ರಲ್ಲಿ ರೇಖಾ ಎಂಬುವವರನ್ನು ಮದುವೆಯಾಗಿದ್ದರು. ರೆಡ್ಡಿ ದಂಪತಿಗೆ 1 ವರ್ಷದ ಗಂಡು ಮಗು ಸಹ ಇದೆ. ಜೆಪಿ ನಗರದ ಕೊತ್ತನೂರು ದಿಣ್ಣೆ ಬಳಿ ವಾಸ. ಚಿಕ್ಕ ಸಂಸಾರ ಚುಕ್ಕವಾಗಿಯೇ ಇತ್ತು.

ಆದರೆ ಸಂತೋಷ್ ರೆಡ್ಡಿಗೆ ಅದೇನನ್ನಿಸಿತೋ ಏನೋ. ಮೊದಲೇ ನಿರ್ಧರಿಸಿದವನಂತೆ ಹೆಂಡ್ತಿ-ಮಗುವನ್ನು ರಜಾ ದಿನವಾದ ಭಾನುವಾರ ಚೆನ್ನಾಗಿ ಸುತ್ತಾಡಿಸಿ, ಅದೂ ಇದೂ ಕೊಡಿಸಿದ್ದಾನೆ. ಮೂವರೂ ಉಸ್ಸಪ್ಪಾ ಅಂತ ರಾತ್ರಿ 9 ಗಂಟೆಗೆ ಮನೆಗೆ ಮರಳಿದ್ದಾರೆ. ಆಗಲೇ ರೆಡ್ಡಿ ಅಂತಿಮ ಕಾರ್ಯಾಚರಣೆಗೆ ಇಳಿದಿದ್ದು.

ಸೀದಾ ಮೊದಲ ಮಹಡಿಯಲ್ಲಿದ್ದ ಕೊಠಡಿಗೆ ತೆರಳಿದವನೆ ಚಿಲಕ ಹಾಕಿಕೊಂಡು, ಈ ಲೋಕದ ಬಂಧವನ್ನು ಬಿಡಿಸಿಕೊಂಡಿದ್ದಾನೆ. ಇತ್ತ ಎಷ್ಟು ಹೊತ್ತಾದರೂ ಕೆಳಗೆ ಬಾರದ ಪತಿರಾಯನ ಬಗ್ಗೆ ಅನುಮಾನಗೊಂಡು ಪತ್ನಿ, ಮೇಲ್ಗಡೆ ಹೋಗಿ ನೋಡಿದ್ದಾಳೆ. ಆದರೆ ನೋ ರಿಪ್ಲೆ. ಪತಿಯ ಮೊಬೈಲಿಗೂ ಕಾಲ್ ಮಾಡಿದ್ದಾಳೆ. ಅದಕ್ಕೂ ಉತ್ತರವಿಲ್ಲ. ತಡಮಾಡದೆ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾಳೆ.

ಅವರೂ ಇವರೂ ಬಂದು ಬಾಗಿಲು ಹೊಡೆದು ನೋಡಲಾಗಿ ಸಂತೋಷ್ ರೆಡ್ಡಿ ಫ್ಯಾನಿಗೆ ಗೋಣು ಒಡ್ಡಿರುವುದು ಕಂಡಿದೆ. ಆತ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ. ಹಾಗಾಗಿ ಸಂತೋಷ್ ರೆಡ್ಡಿಗೆ ಆತ್ಮಹತ್ಯೆ ನಿಗೂಢವಾಗಿದೆ. ಆದರೆ ಇತ್ತೀಚೆಗೆ ಪತಿ-ಪತ್ನಿ ಮಧ್ಯೆ ಸಣ್ಣಪುಟ್ಟ ವಿಷಯಕ್ಕೂ ಜಗಳಗಳಾಗುತ್ತಿದ್ದವು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+