ನರೇಂದ್ರ ಮೋದಿ ಸಮಾವೇಶಕ್ಕೆ ಹೈದರಾಬಾದ್ ಸಜ್ಜು

ತೆಲಂಗಾಣ ರಾಜ್ಯ ರಚನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ ಬಳಿಕ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮೊದಲಬಾರಿ ಹೈದರಾಬಾದ್ ಗೆ ಆಗಮಿಸುತ್ತಿದ್ದಾರೆ. ಆಂಧ್ರಪ್ರದೇಶ ಬಿಜೆಪಿ ಘಟಕ ಸಮಾವೇಶದ ಯಶಸ್ಸಿಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ನರೇಂದ್ರ ಮೋದಿ ಸಮಾವೇಶವನ್ನು ಹಲವು ಥಿಯೇಟರ್ ಗಳು ನೇರ ಪ್ರಸಾರ ಮಾಡಲಿವೆ. ಆನ್ ಲೈನ್ ನಲ್ಲಿ yuvauindia.com. ನಲ್ಲಿ ಮೋದಿ ಭಾಷಣವನ್ನು ನೇರವಾಗಿ ವೀಕ್ಷಿಸಬಹುದಾಗಿದೆ.
ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸಿ ಎಂದು ನರೇಂದ್ರ ಮೋದಿ ಕರೆ ನೀಡುವ ಮೂಲಕ ಲೋಕಸಭೆ ಚುನಾವಣಾ ಪ್ರಚಾರಕಾರ್ಯವನ್ನು ಹೈದರಾಬಾದ್ ನಿಂದ ಆರಂಭಿಸಲಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ನವಭಾರತ ಯುವ ಭೇರಿ ಎಂಬ ಘೋಷವಾಕ್ಯದಡಿ ನಡೆಯಲಿರುವ ಸಮಾವೇಶ ಹೈದರಾಬಾದ್ ನ ಲಾಲ್ ಬಹದ್ದೂರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಬಿಜೆಪಿ ಸಮಾವೇಶಕ್ಕೆ ಆಗಮಿಸುವ ಜನರಿಂದ 5ರೂ.ಗಳನ್ನು ಸಂಗ್ರಹಿಸಿ, ಉತ್ತರಾಖಂಡ್ ಪ್ರವಾಹ ಸಂತ್ರಸ್ತರಿಗೆ ನೀಡಲು ಸಿದ್ಧಗೊಂಡಿದೆ.
ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷ ಜಿ.ಕೃಷ್ಣಾ ರೆಡ್ಡಿ ಅವರ ಪ್ರಕಾರ ಸಮಾವೇಶಕ್ಕೆ 1 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಕ್ರೀಡಾಂಗಣದ ಸುತ್ತಲೂ ಎಲ್ ಇಡಿ ಸ್ಕ್ರೀನ್ ಗಳನ್ನು ಆಳವಡಿಸಲಾಗಿದೆ. ಸಮಾವೇಶಕ್ಕೆ ಬಿಜೆಪಿ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಹೇಳಿದ್ದಾರೆ. (ಇಂಡಿಯಾ272+ : ಅಂತರ್ಜಾಲದಲ್ಲಿ ಬಿಜೆಪಿ ಭರ್ಜರಿ ಅಭಿಯಾನ)
ತೆಲಂಗಾಣ ಪ್ರತಿಭಟನೆ ಹಿನ್ನಲೆಯಲ್ಲಿ ಹೈದರಾಬಾದ್ ನಲ್ಲಿ ನಡೆಯಲಿರುವ ನರೇಂದ್ರ ಮೋದಿ ಸಮಾವೇಶಕ್ಕೆ ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಚುನಾವಣಾ ಪ್ರಚಾರ ಕಾರ್ಯ ಆರಂಭಿಸಲಿರುವ ಮೋದಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗುವ ಸಾಧ್ಯತೆ ಇದೆ. (67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)












Click it and Unblock the Notifications