ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮ್ಯಾಗೆ ತನ್ನ ತಂದೆ ಯಾರೆಂದು ಗೊತ್ತಿಲ್ಲ : ಶ್ರೀನಿವಾಸ್

By Mahesh
|
Google Oneindia Kannada News

ಮಂಡ್ಯ, ಆ.9: ಜೆಡಿಎಸ್ ಮಾಜಿ ಶಾಸಕ ಎಂ.ಶ್ರೀನಿವಾಸನ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರ ಅಸ್ತಿತ್ವದ ಪ್ರಶ್ನೆ ಎತ್ತಿದ್ದಾರೆ. ರಮ್ಯಾ ಅವರಿಗೆ ತನ್ನ ಅಪ್ಪ ಯಾರು ಎಂದು ಗೊತ್ತಿಲ್ಲ, ಅವರು ಪ್ರನಾಳ ಶಿಶು ಇದ್ದ ಹಾಗೆ ಎಂದು ಟೀಕಿಸಿದ್ದಾರೆ.

ನಾಮಪತ್ರ ಅರ್ಜಿಯಲ್ಲಿ ತಂದೆ ಹೆಸರು ನಮೂದಿಸಿಲ್ಲ. ರಮ್ಯಾ ಅವರಿಗೆ ಜಾತಿ ಯಾವುದು ಎಂದು ಗೊತ್ತಿಲ್ಲ. ಏನು ಗೊತ್ತಿಲ್ಲದವರು ಹಳ್ಳಿ ಜನರ ನಾಡಿ ಮಿಡಿತ ಹೇಗೆ ತಿಳಿಯುತ್ತದೆ. ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರಿಗೆ ಬೆಂಬಲ ನೀಡಬಾರದು. ಇಂಥವರು ಗೆದ್ದರೆ ಏನು ಪ್ರಯೋಜನ ಎಂದು ಬಹಿರಂಗವಾಗಿ ಶ್ರೀನಿವಾಸ್ ಅವರು ಹೇಳಿದ್ದಾರೆ

ಅಂಬರೀಷ್ ಪ್ರತಿಕ್ರಿಯೆ : ತಂದೆ ಯಾರು, ಜಾತಿ ಗೊತ್ತಿಲ್ಲದೆ ಅಭ್ಯರ್ಥಿಗಾಗಿ ಕಣಕ್ಕಿಳಿಯಲು ಸಾಧ್ಯವಿಲ್ಲ. ಹೆಣ್ಣುಮಕ್ಕಳ ಬಗ್ಗೆ ಮಾತನಾಡುವ ಬಗ್ಗೆ ಜವಾಬ್ದಾರಿಯುತವಾಗಿ, ಸೌಜನ್ಯವಾಗಿ ಮಾತನಾಡಬೇಕು. ವೈಯಕ್ತಿಕವಾಗಿ ನಿಂದನೆಗೆ ಇಳಿಯಬಾರದು. ರಮ್ಯಾ ಅವರ ಅರ್ಜಿ ಅಪೂರ್ಣವಾಗಿದ್ದರೆ ಜಿಲ್ಲಾಧಿಕಾರಿಗಳು ಹೇಗೆ ಒಪ್ಪಿಕೊಳ್ಳುತ್ತಾರೆ.

ನಾನು ಜತೆ ಕೂತು ಅರ್ಜಿ ತುಂಬಿಸಿದ್ದೇನೆ. ತಂದೆ, ತಾಯಿ, ಜಾತಿ ವಿವರಗಳನ್ನು ಪೂರ್ಣಗೊಳಿಸಿ ನಾಮಪತ್ರ ಸಲ್ಲಿಸಲಾಗಿದೆ. ನಾನು ಸರ್ಕಾರ ಯೋಜನೆ, ಪ್ರಣಾಳಿಕೆ ಬಗ್ಗೆ ಮಾತನಾಡುತ್ತೇವೆ. ವೈಯಕ್ತಿಕ ನಿಂದನೆ ಮಾಡುವ ಮಟ್ಟಕ್ಕೆ ಇಳಿಯುವುದಿಲ್ಲ. ಅನ್ನಭಾಗ್ಯ, ಕ್ಷೀರ ಭಾಗ್ಯ, ರೈತರಿಗೆ ನೀಡಿರುವ ಅನುಕೂಲಗಳ ಬಗ್ಗೆ ಹೇಳುತ್ತೇವೆ.

ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಟೀಕೆ ಮಾಡುವುದು ಸರಿಯಲ್ಲ. ನಾವು ಸೌಜನ್ಯದಿಂದಲೇ ಉತ್ತರಿಸುತ್ತೇವೆ. ಜನರಿಗೆ ನಮ್ಮ ಬಗ್ಗೆ ಗೊತ್ತಿದೆ. ಪೊಳ್ಳು ಆಶ್ವಾಸನೆ ನೀಡಿ ಯಾರನ್ನು ಗೆಲ್ಲಿಸಲು ಸಾಧ್ಯವಿಲ್ಲ ಎಂದು ಸಚಿವ ಅಂಬರೀಷ್ ಪ್ರತಿಕ್ರಿಯಿಸಿದ್ದಾರೆ. ಇನ್ನಷ್ಟು ಪ್ರತಿಕ್ರಿಯೆಗಳನ್ನು ಮುಂದಿನ ಚಿತ್ರಸರಣಿಯಲ್ಲಿ ಓದಿ..

ಪುಟ್ಟರಾಜು ಗೆಲ್ಲಿಸಿ

ಪುಟ್ಟರಾಜು ಗೆಲ್ಲಿಸಿ

ಜೆಡಿಎಸ್ ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರು ಶ್ರೀರಂಗಪಟ್ಟಣದಲ್ಲಿ ಶುಕ್ರವಾರ ಮಾತನಾಡಿ,

ರಮ್ಯಾಗೆ ಮಂಡ್ಯ ಜಿಲ್ಲೆ ಗೊತ್ತಿಲ್ಲ, ಎಷ್ಟು ತಾಲೂಕು ಇದೆ ಗೊತ್ತಿಲ್ಲ. ಹಳ್ಳಿ ಸಮಸ್ಯೆ ಗೊತ್ತಿಲ್ಲ. ಒಂದು ಕಡೆ ಪುಟ್ಟರಾಜು ರಂಥ ಸಮರ್ಥ ಅಭ್ಯರ್ಥಿ ಇನ್ನೊಂದು ಕಡೆ ಕಾಂಗ್ರೆಸ್ಸಿನಿಂದ ಪ್ರನಾಳ ಶಿಶುವಂಥ ಅಭ್ಯರ್ಥಿ, ನೀವು ಸ್ಥಳೀಯರಿಗೆ ಆದ್ಯತೆ ನೀಡಿ ಪುಟ್ಟರಾಜು ಅವರನ್ನು ಗೆಲ್ಲಿಸಿ ಎಂದಿದ್ದಾರೆ.
ಜೆಡಿಎಸ್ ಗೆ ಸೊಲಿನ ಭಯ

ಜೆಡಿಎಸ್ ಗೆ ಸೊಲಿನ ಭಯ

ಹೆಣ್ಣು ಮಕ್ಕಳಿಂದ ನಮ್ಮ ರಾಷ್ಟ್ರದ ಇತಿಹಾಸ ನಿರ್ಮಾಣವಾಗಿದೆ. ಜನಪ್ರಿಯ ನಟಿಯಾಗಿರುವ ರಮ್ಯಾ ಅವರ ಸ್ಪರ್ಧೆಯಿಂದ ಜೆಡಿಎಸ್ ಹೆದರಿ ಈ ರೀತಿ ಕುತಂತ್ರಕ್ಕೆ ಇಳಿದಿದೆ.

ರಮ್ಯಾ ಅವರದ್ದು ಕಾಂಗ್ರೆಸ್ ಜಾತಿ, ಇಡೀ ಅಭಿಮಾನಿಗಳು ಬೆಂಬಲಕ್ಕೆ ಇದ್ದಾರೆ. ರಮ್ಯಾ ವಿರುದ್ಧ ಹೇಳಿಕೆ ದೇವೇಗೌಡ, ಕುಮಾರಸ್ವಾಮಿ ಆದಿಯಾಗಿ ಎಲ್ಲರೂ ಉತ್ತರಿಸಲಿ ಎಂದು ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ಅಂಬರೀಷ್ ಪ್ರತಿಕ್ರಿಯೆ

ಅಂಬರೀಷ್ ಪ್ರತಿಕ್ರಿಯೆ

ಹೆಚ್ಚು ಮಾತನಾಡಬಾರದು, ತಂದೆ, ತಾಯಿ, ಜಾತಿ ಗೊತ್ತಿಲ್ಲ ಎನ್ನುತ್ತಾರಲ್ಲ. ಮಾಹಿತಿ ಬೇಕಾದರೆ ಹೋಗಿ ಪಡೆಯಲಿ, ಇದರ ಬಗ್ಗೆ ಮಾತನಾಡುವುದೇ ಅಸಹ್ಯಕರ ಎಂದಿದ್ದಾರೆ.

ಮಾನನಷ್ಟ ಮೊಕದ್ದಮೆ ಹೂಡಲಿ

ಮಾನನಷ್ಟ ಮೊಕದ್ದಮೆ ಹೂಡಲಿ

ರಮ್ಯಾ ಅವರ ಬಗ್ಗೆ ಈ ರೀತಿ ಹೇಳಿಕೆ ನೀಡುವ ಮೂಲಕ ಜೆಡಿಎಸ್ ಅವರು ತಮ್ಮ ಸಂಸ್ಕಾರ ಏನು ಎಂಬುದನ್ನು ಜಗತ್ತಿಗೆ ತಿಳಿಸಿದ್ದಾರೆ. ರಮ್ಯಾ ಅವರ ಪರ ಇಡೀ ಕಾಂಗ್ರೆಸ್ ಪರಿವಾರ ಇದೆ. ವೈಯಕ್ತಿಕ ಹೇಳಿಕೆ ನೀಡುವ ಮೊದಲು ಎಚ್ಚರವಹಿಸುವುದು ಒಳ್ಳೆಯದು. ಶ್ರೀನಿವಾಸ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವಂತೆ ರಮ್ಯಾ ಅವರಿಗೆ ಸಲಹೆ ನೀಡುತ್ತೇನೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದ್ದಾರೆ.

ರಮ್ಯಾ ಪರ ವ್ಯವಸ್ಥಾಪಕರು

ರಮ್ಯಾ ಪರ ವ್ಯವಸ್ಥಾಪಕರು

ಈ ಬಗ್ಗೆ ರಮ್ಯಾ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ರಮ್ಯಾ ಅವರ ಪರವಾಗಿ ಅವರ ಮಾಧ್ಯಮ ಪ್ರತಿನಿಧಿಗಳು ಸ್ಪಷ್ಟನೆ ನೀಡಿ, ತಂದೆ, ತಾಯಿ, ಜಾತಿ ವಿವರ ನೀಡದೆ ನಾಮಪತ್ರ ಸಲ್ಲಿಸಿ ಚುನಾವಣೆ ಸ್ಪರ್ಧಿಸಲು ಸಾಧ್ಯವಿಲ್ಲ.

ಸಚಿವ ಅಂಬರೀಷ್ ಅವರು ಹೇಳಿದಂತೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಲಿ, ಈ ರೀತಿ ವೈಯಕ್ತಿಕ ನಿಂದನೆ ಯಾರಿಗೂ ಒಳ್ಳೆಯದಲ್ಲ ಎಂದಿದ್ದಾರೆ.
ಶಿವರಾಮೇಗೌಡ

ಶಿವರಾಮೇಗೌಡ

ಚುನಾವಣಾ ಆಯೋಗಕ್ಕೆ ಮಾಹಿತಿ ಈಗಾಗಲೇ ಸಲ್ಲಿಸಲಾಗಿದೆ ಇದನ್ನು ಎಲ್ಲೋ ಪ್ರಶ್ನೆ ಮಾಡುವ ಬದಲು ಚುನಾವಣಾ ಆಯೋಗಕ್ಕೆ ಹೋಗಿ ಕೇಳಲಿ. ಜಾತಿ ಕಲಂ ಬೇಡ ಎಂದರೆ ಅಲ್ಲೇ ಹೋಗಿ ಕೇಳಲಿ. ಇಂಥ ಬೆಳವಣಿಗೆ ಒಳ್ಳೆಯದಲ್ಲ.

ಪಿಎಂ, ಸಿಎಂ, ಸೋನಿಯಾಜೀ, ರಾಹುಲ್ ಗಾಂಧಿಯಾದಿಯಾಗಿ ಎಲ್ಲರೂ ಚರ್ಚಿಸಿ ರಮ್ಯಾ ಅವರನ್ನು ಕಣಕ್ಕಿಳಿಸಲಾಗಿದೆ. ಇದು ಯಾರೊಬ್ಬರ ವೈಯಕ್ತಿಕ ನಿರ್ಧಾರವಲ್ಲ, ರಮ್ಯಾ ಅವರು ಮಂಡ್ಯ ಮೂಲದವರು ಎಂಬುದನ್ನು ಮತ್ತೊಮ್ಮೆ ಹೇಳಬೇಕಿಲ್ಲ
ಎಚ್ಡಿಕೆ ಪ್ರತಿಕ್ರಿಯೆ

ಎಚ್ಡಿಕೆ ಪ್ರತಿಕ್ರಿಯೆ

ನಾನು ಇನ್ನೂ ಮಾಜಿ ಶಾಸಕ ಎಂ ಶ್ರೀನಿವಾಸ್ ಅವರು ನೀಡಿರುವ ಹೇಳಿಕೆಯನ್ನು ಕೇಳಿಲ್ಲ. ಆದರೆ, ಯಾರೇ ಆಗಲಿ ವೈಯಕ್ತಿಕ ಬದುಕಿನ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ. ನಾನು ಇದನ್ನು ಖಂಡಿಸುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.

ಸತ್ಯಾನಂದ, ಮಂಡ್ಯ ಕಾಂಗ್ರೆಸ್ ಹೇಳಿಕೆ

ಸತ್ಯಾನಂದ, ಮಂಡ್ಯ ಕಾಂಗ್ರೆಸ್ ಹೇಳಿಕೆ

ವಿಧಾನಸಭಾ ಅಧಿವೇಶನಗಳಲ್ಲಿ ನಿದ್ದೆ ಮಾಡುತ್ತಿದ್ದ ಜೆಡಿಎಸ್ ಮಾಜಿ ಶಾಸಕ ಶ್ರೀನಿವಾಸ್ ಅವರು ಧರ್ಮಪತ್ನಿಯನ್ನು ಬಿಟ್ಟು ಯಾರ ಜೊತೆ ಮಾತನಾಡುತ್ತಿದ್ದಾರೆ ಎಂಬುದನ್ನು ಮೊದಲು ಬಹಿರಂಗ ಪಡಿಸಲಿ.

ರಮ್ಯಾ ಅವರ ಖಾಸಗಿ ಬದುಕಿನ ಬಗ್ಗೆ ಮಾತನಾಡಲು ಇವರ್ಯಾರು? ಇಂಥ ಹೇಳೀಕೆ ನೀಡಿರುವುದು ನಾಚಿಕೆಗೇಡು. ತಂದೆ ಕಳೆದುಕೊಂಡ ಹೆಣ್ಣು ಮಗಳೊಬ್ಬರಿಗೆ ಅಪಮಾನ ಮಾಡಿರುವುದು ಖಂಡನೀಯ ಎಂದಿದ್ದಾರೆ.

English summary
JDS ex MLA M. Srinivas questions Ramya's identity. Mandya Congress contestant Ramya is like a test tube baby, she didn't even know who is her father, what is her religion, how can she protect interest and serve in villagers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X