ಊದುಬತ್ತಿ ಶ್ವಾಸಕೋಶಕ್ಕೆ ನಿಜಕ್ಕೂ ಮಾರಕವೇ ?
ಅಗರಬತ್ತಿ
ಶ್ವಾಸಕೋಶದ ಆರೋಗ್ಯಕ್ಕೆ ನಿಜಕ್ಕೂ ಮಾರಕವೇ? ಇದೊಂದು href="/news/2013/07/29/india-indian-cigarettes-contain-high-level-of-nicotine-tar-076148.html" target="_blank">ವಾದ/ಪ್ರತಿವಾದ/ವಿವಾದ ಅಂದಿನಿಂದಲೂ ಇದೆ. ಇತ್ತೀಚೆಗೆ ರಾಸಾಯನಿಕಗಳ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಗರಬತ್ತಿ ಹೊರಸೂಸುವ ರಾಸಾಯನಿಕ ಹೊಗೆ ಶ್ವಾಸಕೋಶಕ್ಕೆ ಮಾರಕವಾಗುತ್ತದೆ ಎಂಬುದಕ್ಕೆ ಹೆಚ್ಚು ಬಲ ಬಂದಿದೆ. id="toptextpromo"> id='are-slot-1' class='oiad oi-axt oiadv'>ಶ್ರಾವಣ
ಮಾಸ ಇದೀಗ ತಾನೆ ಕಾಲಿಟ್ಟಿದೆ. ಸೋ, ಈ ಸಂದರ್ಭದಲ್ಲಿ ಅಗರಬತ್ತಿ/ ಊದುಬತ್ತಿ ಹಚ್ಚುವುದು ಹೆಚ್ಚು. ಹಾಗಾಗಿ ಅಗರಬತ್ತಿ ಹಚ್ಚುವುದರಿಂದ ಶ್ವಾಸಕೋಶ ಆರೋಗ್ಯಕ್ಕೆ ಮಾರಕವಾಗುತ್ತದೆ ಅಂದರೆ ಹೆಣ್ಣುಮಕ್ಕಳು ಬೆಚ್ಚಿಬೀಳುವುದು ಸಹಜ. ರಾಮ ರಾಮ, ಎಂಥಾ ಕಾಲ ಬಂತಪ್ಪಾ? ಎಂದು ಹಚ್ಚಿರುವ ಊದುಬತ್ತಿಯನ್ನು ಆರಿಸಿಬಿಟ್ಟರೆ ಮೆಚ್ಚನಾ ಆ ಪರಮಾತ್ಮನು ಅಂತಾಗುತ್ತದೆ.id='are-slot-2' class='oiad oi-axt oiadv'>

ಲೇಖನವನ್ನು ಒಮ್ಮೆ ಸಂಪೂರ್ಣವಾಗಿ ಓದಿ
ಹಾಗಾಗಿ, ಈ ಲೇಖನವನ್ನು ಒಮ್ಮೆ ಸಂಪೂರ್ಣವಾಗಿ ಓದಿ. ಏನಿಲ್ಲ ಅಗರಬತ್ತಿ/ ಊದುಬತ್ತಿ ಹಚ್ಚುವುದರಿಂದ ಮನೆಯೊಳಗೇ ವಾಯು ಮಾಲಿನ್ಯ ಉಂಟಾಗುತ್ತದೆ. ಇದರಿಂದ ಶ್ವಾಸಕೋಶದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ ಎನ್ನುತ್ತಿದೆ ಅಮೆರಿಕದ ಹೊಸ ಸಂಶೋಧನೆ.

ಊದುಬತ್ತಿ ಕಾರ್ಬನ್ ಮಾನಾಕ್ಸೈಡ್ ವಿಷಯುಕ್ತ
ಅಮೆರಿಕದ ಚಾಪೆಲ್ ಹಿಲ್ ನಲ್ಲಿರುವ Gillings School of Global Public Health- University of North Carolina ನಡೆಸಿರುವ ತಾಜಾ ಸಂಶೋಧನೆಯ ಪ್ರಕಾರ ಊದುಬತ್ತಿ ಹಚ್ಚಿದಾಗ ಕಾರ್ಬನ್ ಮಾನಾಕ್ಸೈಡ್ ನಂತಹ ವಿಷಯುಕ್ತ ಮಲಿನಕಾರಕ ಅಂಶಗಳು ಹೊರಸೂಸತ್ತವೆ. ಇದು ಅಪಾಯಕಾರಿಯಾಗಿ ಪರಿಣಮಿಸುತ್ತದೆ.

ಸಂಶೋಧನೆಗೆ ಬಳಸಿರುವುದು ಬೆಂಗಳೂರಿನ ಊದುಬತ್ತಿಗಳನ್ನಲ್ಲ!
ಆದರೆ ಈ ಸಂಶೋಧನೆಗೆ ಒಳಪಡಿಸಿರುವುದು ಭಾರತದ ಅದರಲ್ಲೂ ಬೆಂಗಳೂರಿನ ಊದುಬತ್ತಿಗಳನ್ನಲ್ಲ. ಬದಲಿಗೆ ಕೆಮಿಕಲ್ಸ್ ಹೆಚ್ಚಾಗಿ ಬಳಸುವ ಅರಬ್ ಸಂಯುಕ್ತ ಸಂಸ್ಥಾನಗಳಲ್ಲಿ ಮಾರಾಟವಾಗುವ ಊದುಬತ್ತಿಗಳ ಮೇಲೆ ಈ ಸಂಶೋಧನೆ ನಡೆದಿದೆ. ಹಾಗಾಗಿ ಭಾರತದವರು ನೆಮ್ಮದಿಯ ಉಸಿರುಬಿಡಬಹುದಾದರೂ ತುಸು ಎಚ್ಚರಿಕೆ ವಹಿಸುವುದು ಒಳಿತೇ. (ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ)

10 ಲಕ್ಷ ಮಂದಿ ಹೊಗೆ ಹಾಕಿಸಿಕೊಳ್ಳುತ್ತಾರೆ
ಕಟ್ಟಿಗೆ ಒಲೆ, ಸೀಮೆಎಣ್ಣೆ ಸ್ಟವ್ ಮುಂತಾದವುಗಳ ಬಳಕೆಯಿಂದ ಮನೆಗಳಲ್ಲಿ ವಾಯುಮಾಲಿನ್ಯ ಉಂಟಾಗುತ್ತದೆ. ಇದರಿಂದ ಉಸಿರಾಟದ ತೊಂದರೆಗಳು ಕಾಣಿಸಿಕೊಂಡು chronic obstructive respiratory disease (COPD) ಪ್ರತಿ ವರ್ಷ ಜಗತ್ತಿನಲ್ಲಿ 10 ಲಕ್ಷ ಮಂದಿಯ ಉಸಿರಾಟ ನಿಂತುಹೋಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ ತಿಳಿಸಿದೆ. ಇದಕ್ಕೆ ಊದುಬತ್ತಿ ಹೊರಸೂಸುವ ಕಾರ್ಬನ್ ಮಾನಾಕ್ಸೈಡ್ ನಂತಹ ಮಲಿನಕಾರಕ ಅಂಶಗಳನ್ನೂ ಸೇರಿಸಬಹುದಾಗಿದೆ.












Click it and Unblock the Notifications