ಇದು ನಿಜ- 30 ವರ್ಷಗಳಲ್ಲಿ ಕನ್ನಡ ಅಗ್ರ ಭಾಷೆಯಾಗಲಿದೆ

ವಿಶ್ವದ 20 ಅತ್ಯಂತ ಜನಪ್ರಿಯ ಭಾಷೆಗಳಲ್ಲಿ ಕನ್ನಡ ಸಹ ಒಂದು ಭಾಷೆ ಎನಿಸಲಿದೆ. ಇದು 30 ವರ್ಷಗಳ ಕಾಲಾಂತರದಲ್ಲಿ ಸಾಧ್ಯವಾಗಲಿದೆ. ಈ ಮಧ್ಯೆ, ಜರ್ಮನ್, ಫ್ರೆಂಚ್ ಮತ್ತು ರಷ್ಯಾ ಭಾಷೆಗಳನ್ನೂ ಕನ್ನಡ ಹಿಂದಿಕ್ಕಲಿದೆ.
ಇದಕ್ಕೆ ಮುಖ್ಯವಾಗಿ 2 ಕಾರಣವಾಗಲಿವೆ: ಒಂದು, ಕರಾವಳಿ ಮತ್ತು ಬುಡಕಟ್ಟು ಭಾಗದಲ್ಲಿ ಮಧ್ಯಂತಯರ ಭಾಷೆಯಾಗಿ ಸ್ಥಳೀಯ ಭಾಷೆ ಅವಸಾನ ಕಾಣುವುದು ಮತ್ತೊಂದು ಜ್ಞಾನಪೀಠ ಪ್ರಶಸ್ತಿಗಳನ್ನು ಹೆಚ್ಚಾಗಿ ಗಳಿಸಿರುವ ಕನ್ನಡ ಭಾಷೆ ಸಾಹಿತ್ಯಿಕವಾಗಿಯೂ ಸಮೃದ್ಧವಾಗಿದೆ ಎನ್ನುತ್ತಾರೆ ಖ್ಯಾತ ವಿದ್ವಾಂಸ, People's Linguistic Survey of India (PLSI) ಅಧ್ಯಕ್ಷ ಪ್ರೊ. ಗಣೇಶ್ ಎನ್ ದೇವಿ ಹೇಳುತ್ತಾರೆ.
ಸುಮಾರು 17 ವರ್ಷ ಸುದೀರ್ಘ ಕಾಲ ನಡೆಸಿರುವ ಚಾರಿತ್ರಿಕ ಭಾಷಾ ಸಮೀಕ್ಷೆಯ ವರದಿಯನ್ನು ಜನರಿಗೆ ತಲುಪಿಸುವ ಅಂಗವಾಗಿ ಪ್ರೊ. ಗಣೇಶ್ ದೇವಿ ಅವರು ಕಳೆದ ವಾರ ಬೆಂಗಳೂರಿಗೆ ಬಂದಿದ್ದಾಗ ಈ ವಿಷಯ ತಿಳಿಸಿದರು. ಭಾರತದ ಒಟ್ಟು 780 ಭಾಷೆಗಳು ಮತ್ತು 66 ಲಿಪಿಗಳನ್ನು PLSI ಅಧ್ಯಯನ ಮಾಡಿದೆ.
ಇವುಗಳ ಪೈಕಿ ನೂರಾರು ಭಾಷೆಗಳು ತಂತಾನೇ ಅವಸಾನ ಕಾಣಲಿವೆ. ಇನ್ನು ಕರ್ನಾಟಕದಲ್ಲಿ ಇದರ ಜತೆಗೆ, ಹಕ್ಕಿ ಪಿಕ್ಕಿ ಮತ್ತು ಸಿದ್ದಿಕಿ ಭಾಷೆಗಳು ಶೀಘ್ರವೇ ಅವಸಾನ ಹೊಂದಲಿದವೆ. ಕೊರಗ, ಬಡಗ, ಯೆರವ, ಇರುಳು, ಸೋಲಿಗ, ಗೌಳಿ, ಬೆಟ್ಟ ಕುರುಬ, ಜೇನು ಕುರುಬ ಭಾಷೆಗಳೂ ಸಹ ಅಂತ್ಯ ಕಾಣಲಿವೆ ಎನ್ನುತ್ತಾರೆ ಪ್ರೊ. ಗಣೇಶ್ ದೇವಿ.
10,000 ಕ್ಕಿಂತ ಕಡಿಮೆ ಜನರು ಮಾತ್ರವೇ ಒಂದು ಭಾಷೆಯನ್ನು ಮಾತನಾಡುತ್ತಿದ್ದಾರೆ ಅಂದರೆ ಆ ಭಾಷೆ ವಿನಾಶದ ಅಂಚು ತಲುಪಿದೆ ಎಂದೇ ಅರ್ಥ.
ಸೆಪ್ಟೆಂಬರ್ 5ರಂದು ಡಾ. ಎಸ್ ರಾಧಾಕೃಷ್ಣನ್ ಅವರ 125ನೇ ಜನ್ಮದಿನದ ಅಂಗವಾಗಿ PLSI ಅಧ್ಯಯನ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿಯೂ ಅವರು ತಿಳಿಸಿದರು.












Click it and Unblock the Notifications