ಐಟಿ ನೇಮಕಾತಿ ಶೇ 17ರಷ್ಟು ಕುಸಿತ: ನಾಸ್ಕಾಂ

ಆಟೋಮೇಷನ್ ನಲ್ಲಿ ಏರಿಕೆ, ಐಟಿ ಕ್ಷೇತ್ರದ attrition ಪ್ರಮಾಣದಲ್ಲಿ ಇಳಿಕೆ ಎಲ್ಲವೂ ನೇಮಕಾತಿ ಮೇಲೆ ನೇರ ಪರಿಣಾಮ ಬೀರಲಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೇಮಕಾತಿ ಶೇ 17ರಷ್ಟು ಅಥವಾ 1,50,000 ಕ್ಕೆ ಕುಸಿತ ಕಾಣಲಿದೆ ಎಂದು ನಾಸ್ಕಾಂ ಹೇಳಿದೆ.
ಸುಮಾರು 108 ಬಿಲಿಯನ್ ಮೌಲ್ಯ ಹೊಂದಿರುವ ಭಾರತದ ಐಟಿ ಹಾಗೂ ಐಟಿಯೇತರ ಕ್ಷೇತ್ರ ಸುಮಾರು 3 ಮಿಲಿಯನ್ ಜನರಿಗೆ ಉದ್ಯೋಗ ಒದಗಿಸುತ್ತಿದೆ. ಆದರೆ, ಈ ವರ್ಷ ನಿವ್ವಳ ಹೊಸ ಸೇರ್ಪಡೆ ಪ್ರಮಾಣ 150,000-180,000ಕ್ಕೆ ಸೀಮಿತಗೊಳ್ಳಲಿದೆ. ಕಳೆದ ವರ್ಷ ಕೂಡಾ 180,000 ಸಂಖ್ಯೆ ದಾಟಿರಲಿಲ್ಲ ಎಮುದ್ ನಾಸ್ಕಾಂ ಅಧ್ಯಕ್ಷ ಸೋಮ್ ಮಿತ್ತಲ್ ಅವರು ನೇಮಕಾತಿ ಬಗ್ಗೆ ಮಾತನಾಡುತ್ತಾ ಪಿಟಿಐಗೆ ಈ ವಿಷಯ ತಿಳಿಸಿದ್ದಾರೆ.
ಕೆಳಸ್ತರದ ಉದ್ಯೋಗಗಳನ್ನು ಸ್ವಯಂ ಚಾಲಿತಗೊಳಿಸಲಾಗಿದೆ. ಪ್ರೊಫೈಲ್ ಗಳು ಬದಲಾಗುತ್ತಿದೆ. ಹೆಚ್ಚೆಚ್ಚು ಡೊಮೈನ್ ತಜ್ಞರನ್ನು ಸಂಸ್ಥೆಗಳು ಹುಡುಕುತ್ತಿವೆ. attrittion ಪ್ರಮಾಣ ಕೂಡಾ ಶೇ 14-15ಕ್ಕೆ ಇಳಿದಿದೆ. ಕೈಗಾರಿಕೆಗಳ ಸರಾಸರಿ ಪ್ರಮಾಣ ಶೇ 20ರಷ್ಟಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಸಾಕಷ್ಟು ಕಂಪನಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿಕೊಂಡಿವೆ ಇದರಿಂದಾಗಿ ಕ್ಯಾಂಪಸ್ ನೇಮಕಾತಿ ಕೂಡಾ ಇಳಿಮುಖಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಪ್ರಸಕ್ತ ವರ್ಷ ಸರಿ ಸುಮಾರು ಶೇ 60 ರಷ್ಟು ಕ್ಯಾಂಪಸ್ ನೇಮಕಾತಿ ಕುಸಿಯಲಿದೆ. ಈಗ ತಂತ್ರಜ್ಞಾನ ಕೌಶಲ್ಯಕ್ಕಿಂತ ಸಾಫ್ಟ್ ಕೌಶಲ್ಯ ಹಾಗೂ ನಾಯಕತ್ವ ಗುಣಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದು ಮಿತ್ತಲ್ ಹೇಳಿದ್ದಾರೆ.
ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಮೂರು ವರ್ಷಗಳ ಕೆಳಗೆ ತಂತ್ರಜ್ಞರಿಗೆ ಭಾರಿ ಬೇಡಿಕೆ ಇತ್ತ್ತು ಆದರೆ, ಶೇ 80 ರಷ್ಟಿದ್ದ ಈ ಬೇಡಿಕೆ ಈಗ ಶೇ 40ಕ್ಕೆ ಕುಸಿದಿದೆ. ಡೊಮೈನ್ ಆಧಾರಿತ ನೇಮಕಾತಿ ಹೆಚ್ಚಿದೆ. ಏಪ್ರಿಲ್-ಜೂಣ್ ತ್ರೈಮಾಸಿಕದಲ್ಲಿ ದೇಶದ ಪ್ರಮುಖ ನಾಲ್ಕು ಐಟಿ ಕಂಪನಿಗಳ ನೇಮಕಾತಿ ಪ್ರಮಾಣ ಶೇ 60 ರಷ್ಟು ಕುಸಿದಿದೆ ಎಂದು ಮಿತ್ತಲ್ ಹೇಳಿದ್ದಾರೆ [ ಇದನ್ನೂ ಓದಿ: ಐಟಿ ನೇಮಕಾತಿ ಶೇ 60 ರಷ್ಟು ಕುಸಿತ]
ಕಳೆದ ವರ್ಷ ಸುಮಾರು 10,900 ಹೊಸ ಸೇರ್ಪಡೆಗಳನ್ನು ಕಂಡಿದ್ದ ಐಟಿ ಕ್ಷೇತ್ರ ಈ ಅವಧಿಯಲ್ಲಿ ಕೇವಲ 4,100 ನೇಮಕಾತಿಯನ್ನು ಮಾತ್ರ ಕಂಡಿದೆ. (ಪಿಟಿಐ)












Click it and Unblock the Notifications