ಮುಂಬೈ ರೇವ್ ಪಾರ್ಟಿ: 12 ಯುವತಿಯರ ಬಂಧನ

ಪವನಾ ಡ್ಯಾಂ ಹಿನ್ನೀರಿನ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗಿದ್ದ ಅಶ್ಲೀಲ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಲಾಗಿದೆ. ಬಂಧಿತರು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದು, ಅರೆನಗ್ನಾವಸ್ಥೆಯಲ್ಲಿದ್ದ ಯುವತಿಯರನ್ನು ಬಂಧಿಸಲಾಗಿದೆ ಎಂದು ಪುಣೆ ಗ್ರಾಮಾಂತರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಲೊಹಿಯಾ ಹೇಳಿದ್ದಾರೆ.
ಖಚಿತ ಸುಳಿವಿನ ಮೇರೆಗೆ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಲಾಗಿದೆ. ಪಾರ್ಟಿಯ ನಡೆಯುತ್ತಿದ್ದ ಇಡೀ ಬಂಗಲೆಯನ್ನು ಜಾಲಾಡಿದೆವು. ಯಾವುದೇ ಮಾದಕ ದ್ರವ್ಯಗಳು ಸ್ಥಳದಲ್ಲಿ ಕಂಡುಬರಲಿಲ್ಲ ಎಂದು ಎಸ್ಪಿ ಮನೋಜ್ ಕುಮಾರ್ ಹೇಳಿದ್ದಾರೆ. ಬಂಧಿತರನ್ನು ರಕ್ತ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮಾದಕ ದ್ರವ್ಯ ತೆಗೆದುಕೊಂಡಿದ್ದರೇ, ಇಲ್ವೇ ಎಂಬುದು ವರದಿಯಿಂದ ತಿಳಿದುಬರಲಿದೆ.
ರೇವ್ ಪಾರ್ಟಿಯ ಮೋಜು ಮಸ್ತಿಯಲ್ಲಿದ್ದವರು ಮುಂಬೈನ ರಿಯಲ್ ಎಸ್ಟೇಟ್ ಡೆವಲಪರ್ಸ್, ಏಜೆಂಟುಗಳು ಮತ್ತು ಉದ್ಯಮಿ/ ವ್ಯಾಪಾರಿಗಳು ಎನ್ನಲಾಗಿದೆ. ಬಂಧಿತರು ಮದ್ಯದ ಅಮಲಿನಲ್ಲಿದ್ದರು. ಬಂಗಲೆಯಲ್ಲಿ 40 ಖಾಲಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications