ಶಾಸಕ ಸುರೇಶ್ ಬಾಬು ವಿರುದ್ಧವೂ ಅಕ್ರಮ ಆಸ್ತಿ ದೂರು
ಬೆಂಗಳೂರು,
ಆಗಸ್ಟ್ 1: ಬಳ್ಳಾರಿ ಸೋದರರ ಆತ್ಮೀಯ, ಕಂಪ್ಲಿಯ ಶಾಸಕ ಸುರೇಶ್ ಬಾಬು ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸುರೇಶ್ ಬಾಬು ಅವರ ವಿರುದ್ಧ ಲೋಕಾಯುಕ್ತದಲ್ಲಿ ಗುರುವಾರ ದೂರು ದಾಖಲಾಗಿದೆ. id="toptextpromo">ಕಳೆದ
ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸುರೇಶ್ ಬಾಬು ವಿರುದ್ಧ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಗುಜ್ಜಲ್ ನಾಗರಾಜ್ ಅವರು ಲೋಕಾಯುಕ್ತ ಎಡಿಜಿಪಿ ಸತ್ಯನಾರಾಯಣ ರಾವ್ ಅವರಿಗೆ ದೂರು ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸುರೇಶ್
ಬಾಬು ಅವರು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿರುವ ನಾಗರಾಜ್, ಸುರೇಶ್ ಬಾಬು ಅವರ ಆಸ್ತಿ 2008ರಲ್ಲಿ 1.65 ಕೋಟಿ ರೂಪಾಯಿ ಇತ್ತು. ಆದರೆ ಈಗ ಅದು 6.5 ಕೋಟಿ ರೂಪಾಯಿಗೆ ಏರಿದೆ. ಇದು ಅಕ್ರಮವಾಗಿದೆ ಎಂದು ದೂರಿದ್ದಾರೆ.











Click it and Unblock the Notifications