ಚಿತ್ರಗಳು: ಕಪ್ಪುದಿರಿಸಿನಲ್ಲಿ ಬೆಂಗಳೂರಲ್ಲಿ ಕಂಡ ಬೆಡಗಿ
ಬೆಂಗಳೂರು, ಜು.24: ಬೆಂಗಳೂರಿನಲ್ಲಿ ಫ್ಯಾಷನ್ ಲೋಕಕ್ಕೆ ಕಿಚ್ಚು ಹಚ್ಚಲು ಬಾಲಿವುಡ್ ನ ಲುಟೆರಾ ಚಿತ್ರ(ಚಿತ್ರದ ವಿಮರ್ಶೆ ಓದಿ) ಬಂದ ಬಂದಿದೆ. ಕಪ್ಪು ಸೀರೆಯುಟ್ಟ ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವಾರು ನೀರೆಯರು ಬೆಕ್ಕಿನ ನಡಿಗೆ ಇಟ್ಟಿದ್ದಾರೆ. ಕಥಕ್ಕಳಿ ಕಲಾವಿದರು ಇವರಿಗೆ ಸಾಥ್ ನೀಡಿದ್ದಾರೆ.
ಬಾರ್ಸಿಲೋನಾದಲ್ಲಿ ಇಟಲಿಯ ತಂಡದ ಸದಸ್ಯೆ ಸಂಯೋಜಿತ ಈಜು ಸ್ಪರ್ಧೆಯಲ್ಲಿ ಹಾರಿದ ರೀತಿ ನೋಡಿದರೆ ಒಮ್ಮೆ ವಾಹ್! ಎನ್ನದೆ ಇರಲು ಸಾಧ್ಯವಿಲ್ಲ. FINA ವಿಶ್ವ ಈಜು ಚಾಂಪಿಯನ್ ಶಿಪ್ ನಲ್ಲಿ ಕಂಡ ಉತ್ತಮ ಚಿತ್ರ ಇಲ್ಲಿದೆ ನೋಡಿ
ಇಂದೋರ್ ನಲ್ಲಿ ಲೋಕಾಯುಕ್ತ ಪೊಲೀಸರು ಅಬಕಾರಿ ಅಯುಕ್ತರ ಮನೆ ಮೇಲೆ ದಾಳಿ ಮಾಡಿದ ಚಿತ್ರ, ಅಸ್ಸಾಂನ ನಾಗಾಂವ್ ನಲ್ಲಿ ಪಲ್ಟಿ ಹೊಡೆದ ಬಸ್, ಪ್ರತಿಷ್ಠಿತ ರಾಮನಾಥ್ ಗೋಯೆಂಕಾ ಪ್ರಶಸ್ತಿ ಪ್ರದಾನ ಮಾಡಿದ ಸಿಜೆಐ ಪಿ ಸದಾಶಿವಂ ಚಿತ್ರ, ಆದಿಲಾಬಾದಿನ ಮತದಾನ, ಬ್ರಿಟಿಷ್ ರಾಜಮನೆತನ ಹೊಸ ಕೂಸಿಗೆ ಪುರಿ ಮರಳು ಶಿಲ್ಪಿಯ ಶುಭ ಹಾರೈಕೆ ಇವೆ ಮುಂತಾದ ಚಿತ್ರಗಳು ಇಲ್ಲಿವೆ...

ಸೋನಾಕ್ಷಿ ಸಿನ್ಹಾ ನಡಿಗೆ
ಬೆಂಗಳೂರಿನಲ್ಲಿ ಕಪ್ಪು ಸೀರೆಯುಟ್ಟ ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವಾರು ನೀರೆಯರು ಬೆಕ್ಕಿನ ನಡಿಗೆ ಇಟ್ಟಿದ್ದಾರೆ.

ಈಜುಪಟು ನೆಗೆತ
ಬಾರ್ಸಿಲೋನಾದಲ್ಲಿ ಇಟಲಿಯ ತಂಡದ ಸದಸ್ಯೆ ಸಂಯೋಜಿತ ಈಜು ಸ್ಪರ್ಧೆಯಲ್ಲಿ ಹಾರಿದ ರೀತಿ ನೋಡಿದರೆ ಒಮ್ಮೆ ವಾಹ್! ಎನ್ನದೆ ಇರಲು ಸಾಧ್ಯವಿಲ್ಲ.

ಲೋಕಾಯುಕ್ತ ದಾಳಿ
ಇಂದೋರ್ ನಲ್ಲಿ ಲೋಕಾಯುಕ್ತ ಪೊಲೀಸರು ಅಬಕಾರಿ ಅಯುಕ್ತ ಜಗದೀಶ್ ರಾಥಿ ಅವರ ಮನೆ ಮೇಲೆ ದಾಳಿ ಮಾಡಿದ ಚಿತ್ರ

ಪಲ್ಟಿ ಹೊಡೆದ ಬಸ್
ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಪಲ್ಟಿ ಹೊಡೆದ ಪ್ಯಾಸೆಂಜರ್ ಬಸ್ ಜೊಂಗಲ್ ಬಲಾಹು ಘರ್ ನ ಕೆರೆಗೆ ಮಂಗಳವಾರ ಉರುಳಿ ಬಿದ್ದಿತ್ತು

ಲುಟೆರಾ ಪ್ರಚಾರ ಫ್ಯಾಷನ್ ಶೋ
ಇತ್ತ ಬೆಂಗಳೂರಿನಲ್ಲಿ ಫ್ಯಾಷನ್ ಲೋಕಕ್ಕೆ ಕಿಚ್ಚು ಹಚ್ಚಲು ಬಂದ ಬಾಲಿವುಡ್ ನ ಲುಟೆರಾ ಚಿತ್ರ ತಂಡ

ಸೋನಾಕ್ಷಿ ಸಿನ್ಹಾ ನಡಿಗೆ
ಸೀರೆಯುಟ್ಟ ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವಾರು ನೀರೆಯರು ಬೆಕ್ಕಿನ ನಡಿಗೆ ಇಟ್ಟಿದ್ದಾರೆ. ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ

ಗೋಯೆಂಕಾ ಪ್ರಶಸ್ತಿ ವಿಜೇತರು
ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ ಸದಾಶಿವಂ, HT ಮಾಧ್ಯಮ ಚೇರ್ಮನ್ ಹಾಗೂ ಸಂಪಾದಕೀಯ ನಿರ್ದೇಶಕಿ ಶೋಭನಾ ಭಾರ್ತಿಯಾ ಮತ್ತು ಶೇಖರ್ ಗುಪ್ತಾ, ಇಂಡಿಯನ್ ಎಕ್ಸ್ ಪ್ರೆಸ್ ಅವರು 6ನೇ ರಾಮನಾಥ್ ಗೋಯೆಂಕಾ ಮಾಧ್ಯಮ ಪ್ರಶಸ್ತಿ ವಿಜೇತರ ಜೊತೆ PTI Photo by Kamal Kishore

ಗುಂಡಿನ ಚಕಮಕಿ
ಕುಪ್ವಾರಾ: ಜೈಷ್ ಇ ಮೊಹಮ್ಮದ್ ಸಂಘಟನೆಯ ಉಗ್ರರು ಕುಪ್ವಾರಾ ಜಿಲ್ಲೆಯ ಗಾರೆವಾಡ್ ಲೊಲಾಬ್ ಬಳಿ ಗುಂಡಿನ ಚಕಮಕಿ ನಡೆಸಿದ್ದು, ಭಾರತೀಯ ಯೋಧರು ತಕ್ಕ ಉತ್ತರ ನೀಡಿ ಪ್ರಮುಖ ಉಗ್ರರ ನಾಯಕ ಖಾಸಿರ್ ಯಾಸಿರ್ ನನ್ನು ಕೊಂದಿದ್ದಾರೆ.

ನಟಿ ಮಂಜುಳಾ ಸ್ಮರಣೆ
ಖ್ಯಾತ ದಕ್ಷಿಣ ಭಾರತ ನಟಿ ಮಂಜುಳಾ ವಿಜಯಕುಮಾರ್ ಅವರ ಅಗಲಿಕೆಯಿಂದ ದುಃಖತಪ್ತರಾದ ಕುಟುಂಬ ವರ್ಗ

ಪುರಿಯಿಂದ ಹಾರೈಕೆ
ಪುರಿ: ವಿಶ್ವಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಮರಳು ಶಿಲ್ಪ ಕೃತಿ ಮೂಲಕ ಬ್ರಿಟನ್ನಿನ ರಾಯಲ್ ಬೇಬಿ ಸ್ವಾಗತಿಸಿ ಶುಭ ಹಾರೈಸಿದ್ದಾರೆ.


Click it and Unblock the Notifications
