ರೇಪ್ ಯತ್ನ: ಟ್ರೈನಿನಿಂದ ಹಾರಿ ಟೆಕ್ಕಿ ಬಚಾವ್

Kolkata- Rape bid in running train- Techie jumps off to save self
ಕೋಲ್ಕೊತ್ತಾ, ಜುಲೈ22: ಬೇಲೂರು ಮತ್ತು ಬಲಿ ನಿಲ್ದಾಣಗಳ ಮಧ್ಯೆ ಚಲಿಸುತ್ತಿದ್ದ ಜನತಾ ಎಕ್ಸ್ ಪ್ರೆಸ್ ರೈಲಿನಲ್ಲಿ ಭಾನುವಾರ ಅತ್ಯಾಚಾರ ಯತ್ನ ನಡೆದಿದೆ. ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಯುವತಿ ಟ್ರೈನಿನಿಂದ ಹಾರಿ ಬಚಾವ್ ಆಗಿದ್ದಾಳೆ.

ಕೋಲ್ಕೊತ್ತಾಗೆ ತೆರಳಲು ಅಸಾನ್ ಸೋಲ್ ಬಳಿ ಟ್ರೈನ್ ಹತ್ತಿದ 25 ವರ್ಷದ ಮಹಿಳಾ ಟೆಕ್ಕಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದಾನೆ. ಆ ವೇಳೆ ಕಂಪಾರ್ಟಮೆಂಟಿನಲ್ಲಿ ಆಕೆಯೊಬ್ಬಳೇ ಇದ್ದಳು.

'ಟ್ರೈನ್ ನಿಲ್ದಾನ ಬಿಟ್ಟು ಹೊರಡುತ್ತಿದ್ದಂತೆ ಆತ ನನ್ನ ಮೇಲೆ ಮುಗಿಬಿದ್ದ. ನಾನು ಸಹಾಯಕ್ಕಾಗಿ ನಿಲ್ದಾಣದಲ್ಲಿದ್ದ ಜನರತ್ತ ಕೈಬೀಸಿದೆ. ಈ ಮಧ್ಯೆ ಆ ವ್ಯಕ್ತಿ ನನ್ನ ಮೊಬೈಲನ್ನು ಕಿತ್ತುಕೊಂಡ. ಅದಾದ ನಂತರ ಏನಾಯಿತು ಎಂಬುದು ನನ್ನ ಅರಿವಿಗೆ ಬರಲಿಲ್ಲ' ಎಂದು ಬಾಧಿತ ಯುವತಿ ಅಲವತ್ತುಕೊಂಡಿದ್ದಾಳೆ.

ಯುವತಿಗೆ ತೀವ್ರ ತರದ ಗಾಯಗಳಾಗಿದ್ದು, ರೈಲ್ವೆ ಹಳಿಗಳ ಮೇಲೆ ಆಕೆ ಬಿದ್ದಿದ್ದಳು. ತಕ್ಷಣ ನಾವು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದೆವು. ಆದರೆ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿರುವುದಾಗಿ ಸ್ಥಳೀಯರು ಹೇಳಿದ್ದಾರೆ.

ಅದಾದ ನಂತರ ಆಸ್ಪತ್ರೆಗೆ ಧಾವಿಸಿದ ಪೊಲೀಸರು ಯುವತಿಯ ಹೇಳಿಕೆಯನ್ನು ಪಡೆದಿದ್ದು, ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+