ಭಗ್ನ ಪ್ರೇಮ: ಆಸಿಡ್ ದಾಳಿಗೆ ಗೃಹಿಣಿ ಸಾವು

acid-attack-mp-woman-rubi-rawat-dies-former-lover-attacks
ಮೊರೆನಾ, ಜುಲೈ22: ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಆಸಿಡ್ ದಾಳಿ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂಬ ಸುಪ್ರೀಂ ಕೋರ್ಟ್ ತೀರ್ಪನ ಬಿಸಿ ಆರುವ ಮೊದಲೇ ಆಸಿಡ್ ದಾಳಿಗೆ ಗೃಹಿಣಿಯೊಬ್ಬರ ಬದುಕು ಕಮರಿದೆ. ಸುಪ್ರೀಂ ತೀರ್ಪಿನ ನಂತರ ವರದಿಯಾಗಿರುವ ಮೊದಲ ಆಸಿಡ್ ದಾಳಿ ಪ್ರಕರಣ ಇದಾಗಿದೆ.

ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಪೋರ್ಸಾ ಪಟ್ಟಣದಲ್ಲಿ ತನ್ನ ಪಾಡಿಗೆ ತಾನು ಮನೆಯಲ್ಲಿ ಸೌಖ್ಯವಾಗಿದ್ದ 26 ವರ್ಷದ ಗೃಹಿಣಿಯ ಮೇಲೆ ಮಾಜಿ ಪ್ರಿಯಕರ (ಯೋಗಿಂದರ್ ತೊಮರ್) ಆಸಿಡ್ ದಾಳಿ ನಡೆಸಿದ್ದು, ಗೃಹಿಣಿ ಅಸುನೀಗಿದ್ದಾಳೆ. ದಾಳಿಯ ವೇಳೆ ಗೃಹಿಣಿಯ 3 ಸಂಬಂಧಿಕರೂ ಗಾಯಗೊಂಡಿದ್ದಾರೆ.

ಶನಿವಾರ ರಾತ್ರಿ ಈ ದುರ್ಘಟನೆ ನಡೆದಿದೆ. ಆಸಿಡ್ ದಾಳಿ ನಡೆಸಿದ ದುಷ್ಕರ್ಮಿ ಸದರಿ ವಿವಾಹಿತ ಮಹಿಳೆಯನ್ನು (ರುಬಿ ರಾವತ್) ಪ್ರೀತಿಸುತ್ತಿದ್ದ ಎನ್ನಲಾಗಿದೆ. ದೊಡ್ಡ ಜಮೀನ್ದಾರನಾಗಿರುವ ಯುವಕ ಮೊನ್ನೆ ರಾತ್ರಿ ಆಕೆಯ ಮನೆಗೆ ನುಗ್ಗಿ ಒಂದೇ ಸಮನೆ ಆಕೆಯ ಮೇಲೆ ಆಸಿಡ್ ಎರಚಿದ್ದಾನೆ. ಪೊಲೀಸರು ಇನ್ನೂ ಆರೋಪಿಯನ್ನು ಬಂಧಿಸಿಲ್ಲ. ಮದ್ಯ ಕಳ್ಳಸಾಗಣೆ ಪ್ರಕರಣವೊಂದರಲ್ಲಿ ಆರೋಪಿ ಈಗಾಗಲೇ ಜಾಮೀನು ಪಡೆದುಕೊಂಡಿದ್ದಾನೆ.

'ಅವನು ಮನೆಗೆ ಬಂದು ಆಕೆಯನ್ನು ಭೇಟಿಯಾಗಬೇಕೆಂದು ಕೂಗಾಡಿದ. ಇದಕ್ಕೆ ಒಪ್ಪದಿದ್ದಲ್ಲಿ ಆಕೆಯನ್ನು ಸಾಯಿಸುವುದಾಗಿಯೂ ಬೆದರಿಕೆ ಹಾಕಿದ. ಅವನು ಕುಡಿತದ ಮತ್ತಿನಲ್ಲಿದ್ದ. ಯುವತಿ ತನ್ನ ಕೋಣೆಯಲ್ಲಿ ಇತರೆ ಬಂಧುಗಳೊಂದಿಗೆ ಇದ್ದಳು. ಅಲ್ಲಿಗೇ ನುಗ್ಗಿದ ಪುಂಡ, ಆಕೆಯ ಮೇಲೆ ಆಸಿಡ್ ಎಸೆದಿದ್ದಾನೆ' ಎಂದು ಆಕೆಯ ಬಂಧುವೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬಾಧಿತ ವಿವಾಹಿತ ಮಹಿಳೆ ಶೇ. 60ರಷ್ಟು ಸುಟ್ಟ ಗಾಯಗಳಾಗಿದ್ದವು. ಆದರೆ ಸೋಮವಾರ ಆಕೆ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದಾಳಿಯಲ್ಲಿ ಗಾಯಗೊಂಡಿರುವ ಮಹಿಳೆಯ ಅಜ್ಜಿ ಮತ್ತು ಇತರೆ ಇಬ್ಬರು ಬಂಧುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸದರಿ ಮಹಿಳೆ ವಿವಾಹವಾದ ಬಳಿಕ ಪ್ರತ್ಯೇಕವಾಗಿ ಬಾಡಿಗೆ ಮನೆಯೊಂದನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆ ಮನೆ ಸದರಿ ಆರೋಪಿಗೆ ಸೇರಿದ್ದಾಗಿದೆ. ಕಳೆದ ವರ್ಷ ಆರೋಪಿಯ ಜತೆಗೆ ಸಂಬಂಧವಿರುವುದಾಗಿ ಹೇಳಿ ಬಾಧಿತ ಮಹಿಳೆಯ ಪತಿ (ಸಂಜು) ಆಕೆಯನ್ನು ತೊರೆದು ಹೋಗಿದ್ದ.

ಅದಾದ ನಂತರ ನಾನು ಆರೋಪಿಯ ಜತೆಯೆ ಜೀವನ ನಡೆಸುತ್ತಿದ್ದೆ. ಆದರೆ ಆತ ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದ. ಹಾಗಾಗಿ ನಾನು ನನ್ನ ತವರು ಮನೆಗೆ ಮರಳಿದ್ದೆ. ಈ ಮಧ್ಯೆ ಸದರಿ ಆರೋಪಿ ದುಷ್ಕೃತ್ಯವೆಸಗಿದ್ದಾನೆ ಎಂದು ಸಾಯುವ ಮುನ್ನ ಮಹಿಳೆ ಹೇಳಿಕೆ ನೀಡಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+