ಮೊದಲಬಾರಿ ಸೂರ್ಯನ ಬೆಳಕನ್ನು ಕಾಣಲಿರುವ ನಗರ
ರುಕಾನ್ ಎನ್ನುವ ಪುಟ್ಟ ನಗರ ನಾರ್ವೇ ದೇಶದ ಕೈಗಾರಿಕಾ ನಗರಗಳಲ್ಲೊಂದು. ಮಧ್ಯ ನಾರ್ವೇಯ ಕಿರಿದಾದ ಕಣಿವೆ ಭಾಗದಲ್ಲಿ ಈ ನಗರವಿದೆ.ನೂರು ವರ್ಷದಲ್ಲಿ (ಚಳಿಗಾಲದ ಸಮಯದಲ್ಲಿ) ಕಾಣದನ್ನು ಇಲ್ಲಿನ ಜನತೆ ಇನ್ನು ಮುಂದೆ ಕಾಣಲು ಕೈಗೊಳ್ಳ ಬೇಕಾದ ಕ್ರಮಕ್ಕೆ ಸರಕಾರ ಮುಂದಾಗಿದ್ದು, ಇದೇ ಸೆಪ್ಟಂಬರ್ ನಿಂದ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
ಇಲ್ಲಿನ ಜನತೆ ಚಳಿಗಾಲದಲ್ಲಿ ಸೂರ್ಯನ ಬೆಳಕನ್ನು ಕಾಣದೆ ಶತಮಾನಗಳೇ ಕಳೆದಿದೆ. ಈಗ ನೂತನ ತಂತ್ರಜ್ಞಾನದ ಮೂಲಕ, ಚಳಿಗಾಲದಲ್ಲಿ ಸೂರ್ಯನ ಬೆಳಕನ್ನು ಇಲ್ಲಿನ ಜನತೆ ಕಾಣಲು ಮಾಡಬೇಕಾಗಿರುವ ಕ್ರಮಕ್ಕೆ ಸರಕಾರ ಮುಂದಾಗಿದೆ.
ಎಲ್ಲಾ ವ್ಯವಸ್ಥಿತವಾಗಿ ನಡೆಯಲು ಸಿದ್ದತೆಗಳು ಭರದಿಂದ ಸಾಗುತ್ತಿದೆ. ಕಣಿವೆ ಭಾಗದಲ್ಲಿ ಈ ನಗರವಿರುದರಿಂದ ಪರ್ವತಕ್ಕೆ ಹೊಂದಿಕೊಂಡಂತೆ ಚೌಕಾಕಾರವಾಗಿ 450 ಮೀಟರ್ ಎತ್ತರದಲ್ಲಿ ಮೂರು ಬೃಹದಾಕಾರದ ಕನ್ನಡಿಗಳನ್ನು ಹೊಂದಿಸಿ ನಿಲ್ಲಿಸಲಾಗುತ್ತದೆ. ಸೂರ್ಯನ ರಶ್ಮಿ ಈ ಕನ್ನಡಿಗಳ ಮೂಲಕ ಈ ನಗರಕ್ಕೆ ಬರಲಿದೆ.

ನೂರು ವರ್ಷದಲ್ಲಿ ಸೂರ್ಯನ ಬೆಳಕು
ಈ ಬೃಹದಾಕಾರದ ಕನ್ನಡಿ ಸ್ಥಾಪಿಸುವ ಪ್ರಕ್ರಿಯೆ ಜುಲೈ ಒಂದರಿಂದ ಆರಂಭವಾಗಿದ್ದು, ಐದು ಮಿಲಿಯನ್ ಕ್ರೋನರ್ ಪ್ರಾಜೆಕ್ಟ್ ಆಗಿರುತ್ತದೆ. ಇದು ಆಗಸ್ಟ್ ಕೊನೆಯ ವಾರದಲ್ಲಿ ಪೂರ್ಣಗೊಳ್ಳಲಿದೆ.

ಸೂರ್ಯನ ಬೆಳಕು
ದಶಕಗಳಿಂದಲೂ ಟಿನ್ ಮುನ್ಸಿಪಾಲಿಟಿ ವ್ಯಾಪ್ತಿಗೆ ಬರುವ ರುಕಾನ್ ನಗರದ ಜನತೆ ಪರ್ವತದ ಶಿಖರವನ್ನೇರಲು ಕೇಬಲ್ ಕಾರನ್ನು ಬಳಸಿ ಚಳಿಗಾಲದಲ್ಲಿ ಸೂರ್ಯನ ಬೆಳಕನ್ನು ಕಾಣಬೇಕಾಗಿತ್ತು.

ನಾರ್ವೇ ದೇಶದ ರುಕಾನ್
ಕನ್ನಡಿ ಮೂಲಕ ಸೂರ್ಯನ ಬೆಳಕನ್ನು ತರುವ ಯೋಜನೆ ಹೊಸದೇನಲ್ಲ. 1907ರಲ್ಲಿ ಈ ಯೋಜನೆ ಸ್ಥಾಪಿಸುವ ಉದ್ದೇಶವಿತ್ತು. ನಾರ್ವೇಯ ಕೈಗಾರಿಕೋದ್ಯಮಿ ಸ್ಯಾಮ್ ಎಡ್ ಈ ಯೋಜನೆ ಅನುಷ್ಠಾನದ ಹಿಂದಿನ ರೂವಾರಿ.

ರುಕಾನ್
ಈ ಭಾಗದ ಜನತೆ ಚಳಿಗಾಲದಲ್ಲಿ ಸೂರ್ಯನ ಬೆಳಕಿಲ್ಲದೇ ಬದುಕು ಸಾಗಿಸಲು ಹೊಂದಿಕೊಂಡಿದ್ದಾರೆ. ಈಗ ಸ್ಯಾಮ್ ಎಡ್ ಪರಿಶ್ರಮದಿಂದ ಹೆಚ್ಚಾಗಿ ಕಾರ್ಮಿಕರೇ ವಾಸಿಸುವ ಈ ನಗರದಲ್ಲಿ ಚಳಿಗಾಲದಲ್ಲೂ ಜನತೆ ಸೂರ್ಯನ ಬೆಳಕು ಕಾಣುವಂತಾಗುತ್ತದೆ.

ನೂರು ವರ್ಷದಲ್ಲಿ ಮೊದಲಬಾರಿ ಸೂರ್ಯನ ಬೆಳಕು
ಐದು ವರ್ಷಗಳ ಚರ್ಚೆ, ವಾದ, ಪ್ರತಿವಾದದ ನಂತರ ಟಿನ್ ಮುನ್ಸಿಪಾಲಿಟಿ ಈ ಯೋಜನೆಗೆ ಅನುಮೋದನೆ ನೀಡಿದೆ. ಐದು ಮಿಲಿಯನ್ ನಾರ್ವೇ ಕ್ರೋನರ್ ಅಂದರೆ 823,000 ಅಮೇರಿಕನ್ ಡಾಲರ್ ಈ ಯೋಜನೆಗೆ ತಗಲುವ ಒಟ್ಟು ವೆಚ್ಚ.












Click it and Unblock the Notifications