ನ್ಯಾಯಮೂರ್ತಿಯಾಗಿ ಸದಾಶಿವಂ ಪ್ರಮಾಣ ಸ್ವೀಕಾರ
ನವದೆಹಲಿ, ಮು.19: ದೇಶದ 40ನೇ ಶ್ರೇಷ್ಠ ನ್ಯಾಯಮೂರ್ತಿಯಾಗಿ 64 ವರ್ಷ ವಯಸ್ಸಿನ ಸದಾಶಿವಂ ಅವರು ಶುಕ್ರವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಡೆದ ಸರಳ ಸಮಾರಂಭದಲ್ಲಿ ಪ್ರಣವ್ ಮುಖರ್ಜಿ ಅವರು ಪ್ರಮಾಣ ವಿಧಿ ಬೋಧಿಸಿದರು.
ಈ ಸಮಾರಂಭದಲ್ಲಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯಲ್ಲಿನ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯಸಭೆಯ ವಿಪಕ್ಷ ನಾಯಕ ಅರುಣ್ ಜೇಟ್ಲಿ, ಎನ್ ಡಿಎ ಕಾರ್ಯನಿರ್ವಾಹಕ ಅಧ್ಯಕ್ಷ ಎಲ್ .ಕೆ.ಆಡ್ವಾಣಿ, ಸಿಪಿಐ ನಾಯಕ ಡಿ. ರಾಜಾ ಹಾಗೂ ಸಂಪುಟ ಸಚಿವರು ಹಾಜರಿದ್ದರು.
9 ತಿಂಗಳು ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ ಅಲ್ತಮಸ್ ಕಬೀರ್ ಅವರು ಗುರುವಾರ ನಿವೃತ್ತರಾಗಿದ್ದರು. ಇವರ ಸ್ಥಾನಕ್ಕೆ 40ನೇ ಮುಖ್ಯ ನ್ಯಾಯಮೂರ್ತಿಯಾಗಿ ಪಿ. ಸದಾಶಿವಂ ಅವರು ನೇಮಕಗೊಳ್ಳುವ ಮೂಲಕ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಇದೇ ಮೊದಲ ಬಾರಿಗೆ ನ್ಯಾಯಾಂಗ ವ್ಯವಸ್ಥೆಯ ಸರ್ವೋಚ್ಚ ಹುದ್ದೆಯನ್ನು ಅಲಂಕರಿಸಿದರು.

ಸದಾಶಿವಂ ಪರಿಚಯ
ಈರೋಡ್ ಜಿಲ್ಲೆಯ ಭವಾನಿ ಪಟ್ಟಣದ ಬಳಿಯ ಕಡಪ್ಪನಲ್ಲೂರು ಎಂಬ ಗ್ರಾಮದ ರೈತ ಕುಟುಂಬದ ಸದಾಶಿವಂ ಅವರು 1996ರಲ್ಲಿ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಸದಾಶಿವಂ ಅವರ ಪರಿಚಯ
2007ರವರೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. 2007ರ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಸದಾಶಿವಂ ಪ್ರಮಾಣ ಸ್ವೀಕಾರ
ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಡೆದ ಸರಳ ಸಮಾರಂಭದಲ್ಲಿ ಪ್ರಣವ್ ಮುಖರ್ಜಿ ಅವರು ಪ್ರಮಾಣ ವಿಧಿ ಬೋಧಿಸಿದರು.

ಪ್ರಣಬ್ ಹಸ್ತಲಾಘವ
ಸಮಾರಂಭದಲ್ಲಿ ಪ್ರಧಾನಿ ಡಾ. ಮನಮೋಹನ್ ಸಿಂಗ್ , ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪಾಲ್ಗೊಂಡಿದ್ದರು

40ನೇ ಮುಖ್ಯ ನ್ಯಾಯಮೂರ್ತಿ
40ನೇ ಮುಖ್ಯ ನ್ಯಾಯಮೂರ್ತಿಯಾಗಿ ಪಿ. ಸದಾಶಿವಂ ಅವರು ನೇಮಕಗೊಳ್ಳುವ ಮೂಲಕ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಇದೇ ಮೊದಲ ಬಾರಿಗೆ ನ್ಯಾಯಾಂಗ ವ್ಯವಸ್ಥೆಯ ಸರ್ವೋಚ್ಚ ಹುದ್ದೆಯನ್ನು ಅಲಂಕರಿಸಿದರು.

ಪ್ರಮಾಣ ಸ್ವೀಕಾರ ಚಿತ್ರಗಳು
64 ವರ್ಷ ವಯಸ್ಸಿನ ಸದಾಶಿವಂ ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಪ್ರಮಾಣ ವಿಧಿ ಬೋಧಿಸಿದರು.

ಸದಾಶಿವಂ ಪ್ರಮಾಣ ಸ್ವೀಕಾರ
ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಡೆದ ಸರಳ ಸಮಾರಂಭದಲ್ಲಿ ಪ್ರಣವ್ ಮುಖರ್ಜಿ ಅವರು ಪ್ರಮಾಣ ವಿಧಿ ಬೋಧಿಸಿದರು.

ನ್ಯಾಯಮೂರ್ತಿಯಾಗಿ ಸದಾಶಿವಂ
ದೇಶದ 40ನೇ ಶ್ರೇಷ್ಠ ನ್ಯಾಯಮೂರ್ತಿಯಾಗಿ 64 ವರ್ಷ ವಯಸ್ಸಿನ ಸದಾಶಿವಂ ಅವರು ಶುಕ್ರವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನ್ಯಾಯಮೂರ್ತಿ ಸದಾಶಿವಂ
ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜೊತೆ ಮುಖ್ಯ ನ್ಯಾಯಮೂರ್ತಿ ಸದಾಶಿವಂ












Click it and Unblock the Notifications