ವಿದ್ಯಾರ್ಥಿನಿ ಮೇಲೆ ರೇಪ್ : ಕಾಮುಕ ಕಂಡಕ್ಟರ್ ಬಂಧನ

mangalore-bus-conductor-rapes-college-girl-held
ಮಂಗಳೂರು, ಜುಲೈ 18: ವಿದ್ಯಾರ್ಥಿನಿಯೊಬ್ಬಳನ್ನು ನಂಬಿಸಿ, ಸತತ 3 ತಿಂಗಳ ಕಾಲ ಅತ್ಯಾಚಾರ ಮಾಡಿದ ಆರೋಪದ ಮೇಲೆ ಕಾವೂರು ಶಾಂತಿನಗರ ನಿವಾಸಿ, ಕಂಡಕ್ಟರ್ ಫೈಸಲ್ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿ ಮೂಲದ ಕಾವೂರು ಜ್ಯೋತಿನಗರ ನಿವಾಸಿ, ಪ್ರಥಮ ಪಿಯುಸಿ ವಿದ್ಯಾರ್ಥಿನಿ ಬಾಧಿತಳು. ಪ್ರೇಮಾ ನಗರದಲ್ಲಿ ಪ್ರತಿ ದಿನ 47 B Raksha ಬಸ್ಸಿನಲ್ಲಿ ಈಕೆ ಸಂಚರಿಸುತ್ತಿದ್ದಳು. ಆ ವೇಳೆ, ಬಸ್ ಕಂಡಕ್ಟರ್ ಫೈಸಲ್ ವಿದ್ಯಾರ್ಥಿನಿಯ ಜತೆ ಸಲುಗೆ ಬೆಳೆಸಿಕೊಂಡಿದ್ದಾನೆ.

ಪೋಷಕರು ಊರಿಗೆ ಹೋದಾಗ ರೇಪ್:
ಕಳೆದ ಏಪ್ರಿಲ್ ತಿಂಗಳಲ್ಲಿ ಸದರಿ ವಿದ್ಯಾರ್ಥಿನಿಯ ಹೆತ್ತವರು ಸಂಬಂಧಿಕರ ಅಂತ್ಯಕ್ರಿಯೆಗೆಂದು ತಮ್ಮೂರಾದ ಭದ್ರಾವತಿಗೆ ಹೋದಾಗ ವಿದ್ಯಾರ್ಥಿನಿ ಮನೆಯಲ್ಲಿಯೇ ಇದ್ದಳು. ಈ ವಿಚಾರ ತಿಳಿದ ಫೈಸಲ್ 3 ದಿನಗಳ ಕಾಲ ಮನೆಗೆ ಬಂದು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಅದನ್ನು ಮೊಬೈಲ್ ಮೂಲಕ ಚಿತ್ರೀಕರಣವನ್ನೂ ಮಾಡಿಕೊಂಡಿದ್ದಾನೆ. ತನ್ನೊಂದಿಗೆ ಸೇರಿರುವ ಅಶ್ಲೀಲ ವಿಡಿಯೋ/ ಚಿತ್ರಗಳನ್ನು ಅಂತರ್ಜಾಲದಲ್ಲಿ ಹಾಕುವುದಾಗಿ ಬೆದರಿಕೆ ಒಡ್ಡಿ ಆಕೆಯನ್ನು ತನ್ನ ದಾಹಕ್ಕೆ ಬಳಸಿಕೊಂಡಿದ್ದಾನೆ.

ಮುಂದೆ ಸದರಿ ವಿದ್ಯಾರ್ಥಿನಿ ಗರ್ಭಿಣಿಯಾದಾಗ ಹೆತ್ತವರು ಆಕೆಯನ್ನು ವಿಚಾರಿಸಿಕೊಂಡಿದ್ದಾರೆ. ಆಗ ಕಾಮುಕ ಕಂಡಕ್ಟರಿನ ಕುಕೃತ್ಯದ ಬಗ್ಗೆ ಆಕೆ ಸಾದ್ಯಂತವಾಗಿ ಹೇಳಿದ್ದಾಳೆ. ತಕ್ಷಣ ಪೋಷಕರು ಪೊಲೀಸರನ್ನು ಸಂಪರ್ಕಸಿದಾಗ ಆರೋಪಿ ಫೈಸಲನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ವಿಮಾ ಪಾಲಿಸಿ ನೆಪದಲ್ಲಿ ಅತ್ಯಾಚಾರ:
ಮತ್ತೊಂದು ಪ್ರಕರಣದಲ್ಲಿ, ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯಲ್ಲಿ ಆಶ್ರಯ ಬಡಾವಣೆಯಲ್ಲಿ ಮಂಗಳವಾರ ನಡೆದಿದೆ.

ಇಲ್ಲಿನ ಎಲ್ಐಸಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಧನುಕುಮಾರ್ ಎಂಬ ವ್ಯಕ್ತಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆಶ್ರಯ ಬಡಾವಣೆಯಲ್ಲಿ ವಾಸವಾಗಿರುವ ಸದರಿ ಮಹಿಳೆಯ ಮನೆಗೆ ಮಂಗಳವಾರ ಸಂಜೆ ಧನುಕುಮಾರ್ ಎಲ್ಐಸಿ ಪಾಲಿಸಿ ಮಾಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತೆರಳಿದ್ದಾನೆ.

ಆಗ ಅಕ್ಕಪಕ್ಕದವರು ಸಹ ಪಾಲಿಸಿ ವಿಚಾರವಾಗಿ ಅಲ್ಲಿಗೆ ಆಗಮಿಸಿದ್ದರು. ಆದರೆ ಎಲ್ಲರೂ ತಮ್ಮ ಮನೆಗಳಿಗೆ ವಾಪಸಾದ ಬಳಿಕ ಧನುಕುಮಾರ್ ಮನೆಯಲ್ಲಿ ಒಂಟಿಯಾಗುಳಿದ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಅತ್ಯಾಚಾರಕ್ಕೆ ಒಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+