ಸಿಎಂ ಕೆಲಸ ಮೆಚ್ಚಿ ಪತ್ರ ಬರೆದ ದೇವೇಗೌಡರು!

Deve Gowda
ಬೆಂಗಳೂರು, ಜು.17 : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವನ್ನು ಮೆಚ್ಚಿದ್ದಾರೆ. ಸಿದ್ದರಾಮಯ್ಯ ಅವರು ಸಾಲ ಮನ್ನಾ ಮಾಡಿದ ನಿರ್ಧಾರವನ್ನು ಶ್ಲಾಘಿಸಿರುವ ಗೌಡರು ಸಿಎಂಗೆ ನಾಲ್ಕು ಪುಟಗಳ ಪತ್ರ ಬರೆದಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡ, ಪತ್ರವನ್ನು ಬಿಡುಗಡೆ ಮಾಡಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನವೇ ಎಲ್ಲಾ ವರ್ಗಗಳ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದರು, ಇದು ಪ್ರಶಂಸನೀಯ ಎಂದರು.

ರೈತಪರವಾದ ಕಾಳಜಿ ಇರುವ ಸರ್ಕಾರ ನಿಮ್ಮದಾಗಬೇಕು ಎಂದು ಸಿಎಂ ಅವರಿಗೆ ನಾಲ್ಕು ಪುಟಗಳ ಪತ್ರ ಬರೆದಿದ್ದೇನೆ. ಅಡಿಕೆ ಮತ್ತು ತೆಂಗು ಬೆಳಗಾರರ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು ಎಂದು ಪತ್ರದಲ್ಲಿ ಸಲಹೆ ನೀಡಿದ್ದೇನೆ ಎಂದು ದೇವೇಗೌಡರು ಹೇಳಿದರು.

ಬೆಳೆಗಾರರಿಗೆ ನೆರವಾಗಿ : ತೆಂಗು ಅಭಿವೃದ್ಧಿ ಪುನಶ್ಚೇತನ ಮಂಡಳಿ ಎಂಬ ಕೇಂದ್ರ ಸರ್ಕಾರದ ಕಾರ್ಯಕ್ರಮವನ್ನು ರಾಜ್ಯದಲ್ಲಿ ಜಾರಿಗೆ ತಂದು ತೆಂಗು ಬೆಳೆಗಾರರ ಸಂಕಷ್ಟ ನಿವಾರಣೆ ಮಾಡಬೇಕು ಎಂದು ದೇವೇಗೌಡರು ಒತ್ತಾಯಿಸಿದ್ದಾರೆ.

ರಾಜ್ಯದ ಹಾಸನ, ಮಂಡ್ಯ, ತುಮಕೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ತೆಂಗು ಬೆಳೆಗಾರರು ತುಂಬಾ ಸಂಕಷ್ಟದಲ್ಲಿದ್ದಾರೆ. ಅವರ ಸಂಕಷ್ಟ ನಿವಾರಣೆ ಮಾಡಲು ತೆಂಗು ಪುನಶ್ಚೇತನ ಕಾರ್ಯಕ್ರಮ ಜಾರಿಗೆ ತರಬೇಕು ಎಂದು ಸಿಎಂಗೆ ಗೌಡರು ಸಲಹೆ ನೀಡಿದರು.

ತೃತೀಯ ರಂಗ ಸ್ಥಾಪನೆ : ಕೇಂದ್ರದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸೇತರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು. ದೇಶದ ಜನರು ಬದಲಾವಣೆ ಬಯಸಿದ್ದು, ತೃತೀಯ ರಂಗ ಅಸ್ತಿತ್ವಕ್ಕೆ ಬರಲಿದೆ ಎಂದರು.

ಸಮಾನ ಮನಸ್ಕ ಪಕ್ಷದ ನಾಯಕರಾದ ಗುರುದಾಸ್ ದಾಸ್‌ಗುಪ್ತ, ನವೀನ್ ಪಟ್ನಾಯಕ್, ಚಂದ್ರಬಾಬು ನಾಯ್ಡು, ಪ್ರಕಾಶ್ ಕಾರಟ್ ಮುಂತಾದವರೊಂದಿಗೆ ನಾನು ಸಮಾಲೋಚನೆ ನಡೆಸಿದ್ದೇನೆ. ತೃತೀಯ ರಂಗ ನಿರ್ಮಾಣ ಮಾಡುವುದು ಖಚಿತ ಎಂದು ಹೇಳಿದರು.

ಯಡಿಯೂರಪ್ಪ ಎಲ್ಲಿಗಾದರೂ ಹೋಗಲಿ : ಕೆಜೆಪಿ ಮತ್ತು ಜೆಡಿಎಸ್ ಪಕ್ಷಗಳು ವಿಲೀನವಾಗುತ್ತವೆ ಎಂಬುದು ಸುಳ್ಳು. ಅವರು ಬಿಜೆಪಿ ಸೇರಿದಂತೆ ಯಾವ ಪಕ್ಷಕ್ಕಾದರೂ ಹೋಗಲಿ ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ದೇವೇಗೌಡರು ಕಿಡಿ ಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+