ರಾಹುಲ್ ಗೆ ಟೆಲಿಗ್ರಾಂ, 5 ರು ಟ್ವೀಟ್ ಕಾಟ
ಬೆಂಗಳೂರು, ಜು.17: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು 'ಪಪ್ಪು' ಎಂದು ಕರೆದು ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಹಾಸ್ಯದ ವಸ್ತು ಮಾಡಿಕೊಳ್ಳಲಾಗಿದೆ. ಈ ನಡುವೆ ಇತ್ತೀಚಿಗೆ ಅಡಿಕೊಂಡು ನಗುವವರ ಮುಂದೆ ಎಡವಿ ಬಿದ್ದರು ಎಂಬಂತೆ 160 ವರ್ಷ ಇತಿಹಾಸವುಳ್ಳ ಟೆಲಿಗ್ರಾಂ ಅವಸಾನಕ್ಕೂ ಮುನ್ನ ಕೊನೆ ಸಂದೇಶ ಕೂಡಾ ರಾಹುಲ್ ಹೆಸರಿಗೆ ಬಂದಿದ್ದು ಟ್ವಿಟ್ಟರ್ ನಲ್ಲಿ ಹಾಸ್ಯದ ವಸ್ತುವಾಗಿಬಿಟ್ಟಿತು.
ಇದಾದ ನಂತರ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ಅವರು ತಮ್ಮ ಸಭೆಗೆ 5 ರು ಎಂಟ್ರಿ ಫೀ ಇಟ್ಟಿರುವುದು ಕೂಡಾ ರಾಹುಲ್ ಕಡೆಗೆ ತಿರುಗುಬಾಣವಾಗಿ ಚುಚ್ಚುತ್ತಿದೆ. ಈಗ ಈ ಪಟ್ಟಿಗೆ ವಿದೇಶಿ ನೇರ ಬಂಡವಾಳ ಹೂಡಿಕೆ ಬಗ್ಗೆ ಯುಪಿಎ ಸರ್ಕಾರ ಕೈಗೊಂಡ ಕ್ರಮ ಕೂಡಾ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.
ಬಿಜೆಪಿಯ ಸಾಮಾಜಿಕ ಜಾಲ ತಾಣಗಳ ಟೀಂ ಉಸ್ತುವಾರಿ ಅವರ ನರೇಂದ್ರ ಮೋದಿ ಅವರ ಆಪ್ತ ಅಮಿತ್ ಶಾ ಅವರು ನೋಡಿಕೊಳ್ಳುತ್ತಿರುವಂತೆ ಕಾಂಗ್ರೆಸ್ ನ ಟ್ವಿಟ್ಟರ್ ಹೊಣೆಯನ್ನು ಸಚಿವ ಶಶಿ ತರೂರ್ ವಹಿಸಿಕೊಂಡಿದ್ದಾರೆ. ಆದರೆ, ಹಾಸ್ಯದ ಮಿತಿ ಮೀರಿ ರಾಹುಲ್ ಗಾಂಧಿ ಪರ ವಿರೋಧ ಟ್ವೀಟ್ ಗಳು ಎಗ್ಗಿಲ್ಲದೆ ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಹರಿದಾಡುತ್ತಿದೆ.. ಕೆಲವು ಆಯ್ದ ಟ್ವೀಟ್ ಗಳು ಇಲ್ಲಿವೆ ನೋಡಿ
|
ಆಹಾರ ಕಾಯ್ದೆ ಬಗ್ಗೆ
ಆಹಾರ ಕಾಯ್ದೆ ಬಗ್ಗೆ ಸದನದಲ್ಲಿ ಸಮರ್ಪಕ ಚರ್ಚೆ ನಡೆದಿದೆಯೋ ಇಲ್ಲವೋ #foodfight ಟ್ವೀಟ್ ಗಳ ಸುರಿಮಳೆ ಇಂದು ಟಾಪ್ ಸ್ಥಾನಕ್ಕೇರಿದೆ.
|
ರು 5 ವಿವಾದ
|
ಮನರಂಜನಾ ತೆರಿಗೆ
ಮೋದಿ ಭಾಷಣ vs ರಾಹುಲ್ ಗಾಂಧಿ ಭಾಷಣಕ್ಕೆ ಟ್ಯಾಕ್ಸ್ ಅಂತೆ
|
ಬಿಹಾರದ ದುರಂತ
ಬಿಹಾರದ ಬಿಸಿಯೂಟ ವಿಷವಾಗಿ ಮಕ್ಕಳನ್ನು ಬಲಿತೆಗೆದುಕೊಂಡ ದುರಂತ ಕುರಿತ ಟ್ವೀಟ್
|
ರು 5 ವಿವಾದ
ಮೋದಿ ಭಾಷಣ ರು 5 ನೀಡಿಕೆ ಬಗ್ಗೆ ಮತ್ತೊಂದು ಟ್ವೀಟ್
|
ತನ್ನ ಭಾಷಣಕ್ಕೆ ರೊಕ್ಕ
ತನ್ನ ಭಾಷಣ ಕೇಳಲು ರಾಹುಲ್ 5 ರು ನೀಡುತ್ತಾನಂತೆ
|
ಮೋದಿ ಭಾಷಣ vs ರಾಹುಲ್ ಗಾಂಧಿ
ದೇಶದ ಮೇಲೆ ಮೋದಿ ಭಾಷಣ vs ರಾಹುಲ್ ಗಾಂಧಿ ಭಾಷಣದ ಪರಿಣಾಮ ಇನ್ನಷ್ಟು ನಿರೀಕ್ಷಿಸಿ...


Click it and Unblock the Notifications
